ಚಾಕಲೇಟು, ಬ್ಲಾಗಿಂಗ್ ಚಟ ಇತ್ಯಾದಿ…

ಆ ನೀಲಿ ಹೊದಿಕೆಯನ್ನ ಚೂರೇ ಬಿಚ್ಚಿ, ಒಳಗಿನ ಬಂಗಾರದಪ್ಪುಗೆಯನ್ನ ಹಗೂರ ಬೇರ್ಪಡಿಸುತ್ತ, ಒಳಗಿನ ಲಘುಕಂದು ಬಣ್ಣದ ಚೌಕಗಳ ಘಮವನ್ನ ಹಾಗೇ ಒಮ್ಮೆ ಒಳಗೆಳೆದುಕೊಂಡು, ಅದರ ರುಚಿಗೆ ನನ್ನನ್ನೇ ಕೊಟ್ಟುಕೊಳ್ಳುತ್ತ ಚಾಕಲೇಟು ಕಡಿಯುವುದಂದರೆ ನನಗೆ ಸ್ವರ್ಗಸುಖ. ಮತ್ತು ಈ ಸ್ವರ್ಗ ನಿತ್ಯವೂ ನನ್ನ ಅಂಗೈಲಿ. ಈ ಕಾರಣಕ್ಕೇ ಬಹುಶಃ ನನ್ನ ಮುಖ ಹುಣ್ಣಿಮೆ ಚಂದ್ರನ ಹಾಗೆ ಕಲೆಮಯವೂ ಕುಳಿಪೂರ್ಣವೂ ಆಗಿರುವುದು. ಚಿಂತಿಯೇನಿಲ್ಲ. ಅಷ್ಟಕ್ಕೆಲ್ಲ ಚಾಕಲೇಟು ತಿನ್ನುವ ಸುಖವನ್ನ ಬಿಟ್ಟುಕೊಡಲಾಗುತ್ತೆಯೇ? ಚಾಕಲೇಟು ಬಿಟ್ಟರೆ, ಆ ಸುಖವನ್ನ ಕೊಡೋದು ಕಾಫಿ ಮಾತ್ರ.... Continue Reading →

ನಾವಡರ ಹೊಸ ಸಾಹಸ!

ನಮನಿಮಗೆಲ್ರಿಗೂ ಗೊತ್ತಿರುವ ಬಹುಮುಖಿ ಆಸಕ್ತಿಯ ಅರವಿಂದ ನಾವಡರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದಾರೆ. ಹಳೆಯ ಸಾಹಸ ಏನು ಅಂತ ಕೇಳಿದ್ರಾ? ಚಂಡೆಮದ್ದಳೆಯಂತೂ ಸರಿಯೇ, ನಮ್ಮಂಥವರಿಗಾಗಿ ‘ಪಾಕ ಚಂದ್ರಿಕೆ’, ಸಿನೆಮಾಸಕ್ತರಿಗಾಗಿ ‘ಸಾಂಗತ್ಯ’ದ ಸಾರಥ್ಯ, ಹೀಗೇ... ಅವರು ಬ್ಲಾಗ್ ಸ್ಪಾಟಿನಲ್ಲಿ ‘ಪತ್ರಿಕೋದ್ಯಮ’ ಕುರಿತಂತೆ ಎಜುಕೇಟಿವ್ ಆದ ಬ್ಲಾಗೊಂದನ್ನು ಶುರು ಮಾಡ್ತಿರೋದು ಲೇಟೆಸ್ಟ್ ಸುದ್ದಿ. ಇದು ನಮಗೆಲ್ರಿಗೂ ಪ್ರಯೋಜನಕಾರಿಯಾಗಿರಲಿ, ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಆಗುವಂತೆ ಇದಕ್ಕೆ ಯಾವ ವಿಘ್ನಗಳೂ ಬರದೆ ಮುಂದುವರೆದುಕೊಂಡು ಹೋಗಲಿ ಅನ್ನೋದು ನನ್ನ ಹಾರೈಕೆ. ಹೆಚ್ಚಿನ ಮಾಹಿತಿಗೆ ಭೇಟಿ... Continue Reading →

ಖುಶಿಪಡಲೆರಡು ಸಂಗತಿಗಳು!

 ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು.   ನೆನ್ನೆ ತಾನೆ ಗೆಳತಿಯೊಟ್ಟಿಗೆ ಮಾತನಾಡಿದ್ದೆ. ಈ ಪೂರ್ವಗ್ರಹ ಪೀಡಿತ ಮಂದಿಯೆದುರು ಮಾತಾಡಿ ಉಪಯೋಗವಿಲ್ಲ, ಸದ್ಯಕ್ಕೆ ನನ್ನ ಪಾಡಿಗೆ ನಾನು ಕಥೆ ಕವನದ ಥರದ್ದೇನಾದರೂ ಬರೆದ್ಕೊಂಡು ಇದ್ದುಬಿಡ್ತೇನೆ ಅಂತ. ಬಹುಶಃ ನನ್ನ... Continue Reading →

ನೆಲದಡಿಯ ನದಿಯೆಡೆಗೆ…

ನನ್ನ ಪ್ರಿಯ ಸ್ನೇಹಿತರೊಬ್ಬರು ಒಂದು ಹೊಸ ಬ್ಲಾಗ್ ಶುರು ಮಾಡಿದಾರೆ. ಹೆಸರು- ಇನಿಗ್ಮಾ. “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ! ~ ಹೀಗನ್ನುತ್ತಾರೆ ಈ ಬ್ಲಾಗಿನ ಸಂಪಾದಕರು. ಈಗಿನ್ನೂ ಇದರ ಶುರುವಾತು ಅಷ್ಟೇ. ಮುಂದೆ ಅವರು ವಿಭಿನ್ನ ಓದನ್ನ ನಮಗಿಲ್ಲಿ ಕಟ್ಟಿಕೊಡಲಿರುವುದನ್ನು... Continue Reading →

Blog at WordPress.com.

Up ↑