ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ... ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ. ವಂದೇ, ಚೇತನಾ ತೀರ್ಥಹಳ್ಳಿ.
