ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನ ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ, ದೂಳ ಕಣವಾಗಿಯಾದರೂನು ಮೇಲೇಳುತ್ತೇನೆ ನಾನು ನನ್ನ ಭಾವಭಂಗಿ ಬೇಸರವೇನು? ಮುಖ ಸೋತು ಕುಳಿತಿರುವೆ ಯಾಕೆ? ಕೋಣೆ ಮೂಲೆಯಲ್ಲಿ ನೂರು ತೈಲಬಾವಿಗಳನಿರಿಸಿಕೊಂಡಂಥ ಠೀವಿ ನನ್ನ ನಡೆಯಲಿದೆಯೆಂದೆ? ಸೂರ್ಯರಂತೆ, ಚಂದ್ರರಂತೆ ಕಡಲ ಮಹಾಪೂರದಂತೆ ಚಿಮ್ಮುಕ್ಕುವ ಭರವಸೆಯಂತೆ ಮೇಲೇಳುತ್ತೇನೆ ನಾನು ನಾನು ಮುರಿದು ಬೀಳುವುದ ನೋಡಬೇಕೆ? ತಲೆತಗ್ಗಿಸುವುದನ್ನು, ಕಣ್ ಕುಗ್ಗುವುದನ್ನು? ಎದೆಯ ಚೀರಾಟಕ್ಕೆ ಸೋತು ಕುಸಿದು ಬೀಳುವುದನ್ನು? ನನ್ನ ಗತ್ತು ನೋಯಿಸಿತೆ ನಿನ್ನ?... Continue Reading →
