ರಾಜಕಾರಣದ ಬಗ್ಗೆ ಯಾವತ್ತೂ ಬರೆಯಬಾರದು ಅಂತ ಇದ್ದೆ. ಸುಮ್ಮನಿರಲಾಗಲಿಲ್ಲ. ಬರೆದಿದ್ದನ್ನ ಇಲ್ಲಿ ಪೋಸ್ಟ್ ಮಾಡಬಾರದು ಅಂತಲೂ ಇದ್ದೆ. ಆಗಲೂ ಸುಮ್ಮನಿರಲಾಗಲಿಲ್ಲ. ಶೋಭಾ ತಲೆದಂಡ ಪ್ರಹಸನವನ್ನ ಇಟ್ಟುಕೊಂಡು ನಾಲ್ಕು ಮಾತಾಡುವ ಅನಿಸಿತು. ಗೊತ್ತು, ಇದರಿಂದೇನೂ ಉಪಯೋಗವಿಲ್ಲ! ಸಿಂಹಾಸನದ ಉಳಿಕೆಗೆ ಪ್ರಾಣಿ, ಪಕ್ಷಿ, ಚಿಕ್ಕ ಮಕ್ಕಳನ್ನು ಬಲಿಕೊಡುತ್ತಿದ್ದುದು ವಾಡಿಕೆ. ಅದೇ ಯಾದಿಯಲ್ಲಿ ಹೆಣ್ಣನ್ನೂ ಸೇರಿಸಿರೋದ್ರಿಂದಲೋ ಏನೋ, ಯಡ್ಯೂರಪ್ಪರ ಪಟ್ಟ ಉಳಿಸಲಿಕ್ಕೆ ಶೋಭಾ ಕರಂದ್ಲಾಜೆಯ ಬಲಿ ನೀಡಿಕೆ ಸಾಂಗವಾಗಿ ನೆರವೇರಿದೆ. ಶುರುವಿನಿಂದಲೂ ‘ಶೋಭಾ ರಾಜೀನಾಮೆ ನೀಡಬೇಕು’ ಎಂದು ಹಾಡಿಕೊಳ್ತಾ ಬಂದಿದ್ದ ಗಣಿಧಣಿ... Continue Reading →
ಒಂದು ಕಥೆ, ನಾಲ್ಕು ಮಾತು…
ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು. ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು. ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು... Continue Reading →
