ತಸ್ಲಿಮಾ ಬುರ್ಖಾಕೆ ಬೆಂಕಿ ಹಾಕಿ ಅಂದಿದ್ದಳು. ಜನ ಸಾರ್ವಜನಿಕ ಆಸ್ತಿಗೆ ಬೆಂಕಿ ಇಟ್ಟರು. ದೊಂಬಿ ಹತ್ತಿಕ್ಕಲು ನಡೆದ ಗೋಲೀಬಾರಿನಲ್ಲಿ ಒಬ್ಬ ಅಮಾಯಕ ಪ್ರಾಣ ತೆತ್ತರೆ, ಏನೂ ಅರಿಯದ ಹುಡುಗ ಇರಿತಕ್ಕೊಳಗಾದ. ಸಾಕಷ್ಟು ನಷ್ಟವಾಯ್ತು. ಎಲ್ಲಕ್ಕಿಂತ ಜನರ ಮನಸುಗಳು ಮತ್ತಷ್ಟು ಮುರುಟಿಹೋದವು. ಈ ಹೊತ್ತು ನನ್ನ ನೋವು, ಸಮಾಜ ಯಾಕಿಷ್ಟು ಅಸಹಿಷ್ಣುವಾಗಿದೆ ಅನ್ನುವುದರ ಬಗ್ಗೆ. ತಸ್ಲಿಮಾಳ ಬರಹಗಳು ಹೊಸತೇನಲ್ಲ. ಸಾರ್ವಜನಿಕ ಓದಿಗೆ ಸಿಗುತ್ತಿರುವುದೂ ಮೊದಲ ಸಾರ್ತಿಯಲ್ಲ. ಈ ಬಾರಿ ಪತ್ರಿಕೆ ಆಕೆಯ ಲೇಖನವನ್ನು ಪ್ರಕಟಿಸಿದ ಸಮಯ ಸರಿಯಿಲ್ಲ. ಹಬ್ಬದ... Continue Reading →
