ಏಕೋಹಮ್ ಬಹುಷ್ಯಾಮ... ಅಲ್ಲಿ ಏನೂ ಇರಲಿಲ್ಲ. ಇರಲಿಲ್ಲವೆಂದರೆ, ಇತ್ತು... ಹಾಗೆ ‘ಇದೆ’ ಎನ್ನಲು ಮತ್ತೊಂದು ಜೊತೆಗಿರಲಿಲ್ಲ. ಹಾಗೆ ಇದ್ದದ್ದು ಅಗಾಧವಾಗಿತ್ತು. ಏನಿದ್ದರೇನು? ಒಂಟೊಂಟಿಗೆ ಬೆಲೆಯಿಲ್ಲವೆನ್ನುವುದು ಅದಕ್ಕೆ ಗೊತ್ತಾಯ್ತು. ತಿಳಿವಿಗೆ ಬಿರಿದು ಚೂರಾಯ್ತು. ಪ್ರತಿ ಚೂರಲ್ಲೂ ತಾನೇ ತಾನಾಗಿ ತಾನೇ ತಾನಾಗಿ ತಾನೇ ತಾನಾಗಿ... ಚೂರಿನ ಚೂರಿನ ಚೂರಿನ.... ಚೂರು ತನ್ನನ್ನೇ ತಾನು ಮರೆತು, ಜಗತ್ತು, ಜೀವದಿಂದ ತುಂಬಿಕೊಂಡಿತು. ~ ತತ್ ತ್ವಮ್ ಅಸಿ ಬಣ್ಣವಿಲ್ಲ, ರುಚಿಯಿಲ್ಲ, ಆಕಾರವಿಲ್ಲ. ತ್ರೀ ರೋಸಸ್ ಜಾಹೀರಾತಿನ ಸ್ಲೋಗನ್ ಇದಲ್ಲ. ಯಾಕಂದರೆ, ಅದೇನಿಲ್ಲದಿದ್ದರೂ... Continue Reading →
