ಚರ್ಚೆ- ಕೊನೆಯ ಕಂತು

‘ಶ್ರೀ ರಾಮ ಸೇನೆ’ ಮಾಡಿದ್ದು ತಪ್ಪು. ಅದು ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಮುಂದೆ ಈ ರೀತಿಯ ದುರ್ನಡತೆಗೆ ಅವಕಾಶ ಕೊಡುವುದಿಲ್ಲವೆಂದು ಭರವಸೆ ನೀಡಬೇಕು. ಇದು ನನ್ನ ಒತ್ತಾಯ. ಬಿಜೆಪಿಗಾಗಲೀ ಅದರ ಸಚಿವರಿಗಾಗಲೀ ‘ಪಬ್ ಸಂಸ್ಕೃತಿ ವಿರೋಧಿಸುತ್ತೇವೆ’ ಎಂದೆಲ್ಲ ಹೇಳಿಕೆ ನೀಡುವ ನೈತಿಕತೆ ಎಷ್ಟು ಮಾತ್ರವೂ ಇಲ್ಲ.  ಚುನಾವಣೆಗಳಲ್ಲಿ, ರಾಜಕಾರನದ ‘ಆಪರೇಶನ್ನು’ಗಳಲ್ಲಿ, ಖಾಸಗಿ ಮೀಟಿಂಗುಗಳಲ್ಲಿ, ‘ರೆಸಾರ್ಟ್ ರಾಜಕಾರಣ’ದ ಸಂದರ್ಭಗಳಲ್ಲಿ ನೆನಪಾಗದ ಸಾಂಸ್ಕೃತಿಕ ಕಾಳಜಿ ಈಗ ಜಾಗೃತಗೊಂಡರೆ ಅದಕ್ಕೆ ಮೌಲ್ಯವಿಲ್ಲ. ಇನ್ನು ಶ್ರೀ ರಾಮ ಸೇನೆಯವರು... ಇವರಲ್ಲಿ ನನ್ನ ವಿನಂತಿ,... Continue Reading →

ಪುಂಡಾಟಿಕೆ ಬಗ್ಗೆ ಮಾತಾಡಿ ಅಂದ್ರೆ, ‘ನೀವು ಕುಡೀತೀರಾ?’ ಕೇಳ್ತಾರೆ!

ಪ್ರತಿಕ್ರಿಯೆ ಅಂತ ಬರೆದಿದ್ದನ್ನೆಲ್ಲ ಚರ್ಚೆ ಅಂತ ಹಾಕಿಬಿಡೋದು ಸರಿಯಾ? ಅಂತ ಕೇಳಿದ್ದಾರೆ ವಿಕಾಸ್. ಯಾವುದೇ ಒಂದು ವಿಷಯಕ್ಕೆ ವಿಭಿನ್ನ  ಅಥವಾ ಪೂರಕ ಪ್ರತಿಕ್ರಿಯೆಗಳು ಬರತೊಡಗಿದಾಗ ಅದು ಚರ್ಚೆಯ ರೂಪ ಪಡಕೊಳ್ಳುತ್ತದೆ ಅನ್ನೋದು ನನ್ನ ಅನಿಸಿಕೆ. ಅದು ಸರಿಯೇ ಅನ್ನುವುದನ್ನ ತಿಳಿದವರು ಹೇಳಬೇಕಷ್ಟೆ. ಮತ್ತಷ್ಟು ಚಿಂತನಾರ್ಹ ಕಮೆಂಟುಗಳೊಂದಿಗೆ ಈ ಚರ್ಚೆ ಮುಂದುವರೆದಿದೆ.  ಜೊತೆಗೆ, ಸಂಕೇತ್ ಬರೆದಿರುವ ‘ಸಂರಕ್ಷಕನೆ’ ಎನ್ನುವ ಸ್ವಾರಸ್ಯಕರ- ಅರ್ಥಪೂರ್ಣ ಲೇಖನದ ಲಿಂಕ್ ಮತ್ತು ಮೌನ ಕಣಿವೆಯ ಒಂದು ಲೇಖನದ ಲಿಂಕ್ ಕೊಟ್ಟಿರುವೆ. ಮತ್ತೊಂದು ಮಾತು...  ಸಹಬ್ಲಾಗಿಗರೊಬ್ಬರು... Continue Reading →

Blog at WordPress.com.

Up ↑