ಪ್ರಜಾಪ್ರಭುತ್ವವಿರುವ ಈ ಹೊತ್ತಿನಲ್ಲೂ ಹೀಗೆ ಯಾವುದೋ ಒಂದು ಪಡೆ ತನಗೆ ಸೇರದೇ ಹೋಗುವ ಸಂಗತಿಯನ್ನ ಈ ಪರಿಯ ಹಿಂಸೆಯ ಮೂಲಕ ವಿರೋಧಿಸತ್ತೆ ಅಂದ್ರೆ, ಪ್ರಜಾಪ್ರಭುತ್ವ ಯಾಕೆ ಬೇಕು? ಈ ಜನರಿಗೆ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಕೊಟ್ಟವರಾದರೂ ಯಾರು? ಇದು ರಾಮಸೇನೆಗೆ ಮಾತ್ರ ಹೇಳುತ್ತಿರುವ ಮಾತಲ್ಲ. ಇದು, ಶಿವಸೇನೆಗೂ ಅನ್ವಯವಾಗುವಂಥದ್ದು, ಕ.ರ.ವೇ ಗೂ ಅನ್ವಯವಾಗುವಂಥದ್ದು. ಧರ್ಮಾಂಧತೆಯಷ್ಟೇ ಭಾಷಾಂಧತೆ- ರಾಷ್ಟ್ರಾಂಧತೆಗಳೂ ಅಪಾಯಕಾರಿ. ಈ ಘಟನೆ ಕುರಿತು ಬರೆದಿರುವ ಇತರ ಬ್ಲಾಗ್ಗೆಳೆಯರು: ಸಂಕೇತ್, ದಾರಾಶಿಕೋ, ಟೀನಾ. ಈ ಬ್ಲಾಗುಗಳಲ್ಲಿ ನಾವು ಚರ್ಚಿಸಬಹುದಾದ ಬೇರೆ... Continue Reading →
