ಬೆಂಗಳೂರಿಗೆ ದೂರವೆನಿಸುವ ಬಳ್ಳಾರಿಯ ಕೊಟ್ಟೂರಿನಲ್ಲೊಬ್ಬ ಗೆಳೆಯನಿದ್ದಾನೆ. ಹೆಸರು, ಸಿದ್ಧು ದೇವರಮನಿ. ಗೆಳೆತನದ ವಿಶೇಷವೆಂದರೆ, ಅವನು ಗಾಢವಾದ ಕವಿತೆಗಳನ್ನ ಬರೀತಾನೆ, ಮತ್ತು ಅದರಿಂದಲೇ ನನಗೆ ಪರಿಚಿತನಾಗಿದ್ದಾನೆ. ಬರಹ ನನಗೆ ಏನು ಕೊಟ್ಟಿದೆ? ಅಂತ ಕೇಳಿದರೆ ಹೊಟ್ಟೆಬಟ್ಟೆಗಿಂತಲೂ ಹೆಚ್ಚಾಗಿ ಸಾಕಷ್ಟು ಗೆಳೆಯರನ್ನು ಕೊಟ್ಟಿದೆ ಎಂದು ತುಂಬು ಮನಸಿನಿಂದ ಹೇಳಿಕೊಳ್ತೇನೆ. ಅಂತಹ ಕೆಲವು ಖುಷಿಖುಷಿಯ ಗೆಳೆಯರಲ್ಲಿ ಈತನೂ ಒಬ್ಬ. ಅಲ್ಲದೆ, ನನ್ನನ್ನು ‘ಗಾನಾ’ ಎಂದು ಕರೆಯುವ ಕೆಲವೇ ಮಂದಿಯಲ್ಲೊಬ್ಬ. ಸಿದ್ಧು ದೇವರಮನಿಯ ಕವಿತೆಗಳಲ್ಲಿ ನನಗಿಷ್ಟವಾದ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಇಲ್ಲಿ... Continue Reading →
