ವರ್ಷದ ಹಿಂದಿನ ಮಾತು. ಕುಪ್ಪಳ್ಳಿಗೆ ಹೊರಟಾಗ ನನಗೆ ಗೊತ್ತಿದ್ದುದು ನಾನು ಸಿನೆಮಾ ನೋದಲಿಕ್ಕೆ ಹೋಗ್ತಿದೇನೆ, ಅದೂ ನನ್ನ ಮೆಚ್ಚಿನ ಮಲೆನಾಡಲ್ಲಿ ತಣ್ಣಗೆ ಕುಂತು ನೋಡಲಿದ್ದೇನೆ, ಮತ್ತಿದನ್ನ ನಾವಡ, ಸುಧೀರ್ ಕುಮಾರ್ (ನನ್ನ ಪ್ರೀತಿಯ ಗೆಳತಿ ದೀಪಾಳ ಪತಿಯೂ ಆಗಿರುವ), ಮಧು, ವಾದಿರಾಜ್ ಮೊದಲಾದ ಗೆಳೆಯರು `ಸಾಂಗತ್ಯ' ವೇದಿಕೆಯಡಿ ಆಯೋಜಿಸಿದಾರೆ ಅನ್ನುವುದಷ್ಟೆ. ಅಲ್ಲಿ ಹೋಗಿ ಸಿನೆಮಾ ನೊಡಿ ಬರುವುದು ಬಿಟ್ಟು ಬೇರೆ ಏನೂ ನಿರೀಕ್ಷೆ ಇರಲೂ ಇಲ್ಲ, ಅವರು ಅದರ ಹೊರತಾಗಿ ಮತ್ತೇನೋ ಮಾಡಲಿದ್ದಾರೆ ಅನ್ನುವ ನಿರೀಕ್ಷೆಯಂತೂ ಇರಲೇ... Continue Reading →
SAMSARAದ ಒಳಹೊರಗೆ….
" What is more important? To satisfy one thousand desires, or to conquer just one?" ".......... There are things we must unlearn inorder to learn.......... There are things we must own to renounce them" ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ. ಕಾಲಕ್ಕೆ ಸದಾ ಓಡುವ ಕಾಲು. ಎಷ್ಟು ಬೇಗ ಪ್ರಣಯದಾಟ, ಒದೆತ,... Continue Reading →
‘ಸ್ಲಂ ಡಾಗ್…’ ವಾದ, ವಿವಾದ ಮತ್ತು ಸಂವಾದ
ಸಿನೆಮಾ ಕುರಿತ ಸಂವಾದಕ್ಕೆಂದು ಆರಂಭವಾದ ಬ್ಲಾಗ್ ಇಷ್ಟು ವ್ಯಾಪಕವಾಗಿ ಬೆಳೆಯುತ್ತದೆ ಮತ್ತು ಇಷ್ಟು ಗಂಭೀರವಾಗಿ ಮುಂದುವರೆಯುತ್ತದೆ ಎಂದು ಖಂಡಿತ ಅಂದುಕೊಂಡಿರಲಿಲ್ಲ. ಇದಕ್ಕಾಗಿ ನಮ್ಮ ‘ಸಾಂಗತ್ಯ’ದ ಗೆಳೆಯರಿಗೆ ಅಭಿನಂದನೆ ಹೇಳಲೇಬೇಕು. ಸದ್ಯಕ್ಕೆ ಚರ್ಚೆಯಲ್ಲಿರುವ ಸಿನೆಮಾ ‘ಸ್ಲಂ ಡಾಗ್ ಮಿಲಿಯನೇರ್’. ಈ ಸಿನೆಮಾ ಕುರಿತ ವಾದ- ಪ್ರತಿವಾದಗಳ ನಡುವೆಯೂ, ಸಿನೆಮಾ ಅತ್ಯುತ್ತಮವಾಗಿ ಚಿತ್ರಿತವಾಗಿದೆ, ವಾಸ್ತವತೆಯಿಂದ ಕೂಡಿದೆಯಾದರೂ ಪ್ರಶಸ್ತಿ ದೊರೆತುದರ ಹಿಂದೆ ಏನಾದರೊಂದು ಲಾಬಿ ಇದ್ದೇಇದೆ ಎನ್ನುವುದು ನನ್ನ ಅನಿಸಿಕೆ. ಹಾಗಂತ ಉಳಿದವರ ಮಾತುಗಳನ್ನ ಸಾರಾಸಗಟು ತಿರಸ್ಕರಿಸುತ್ತೇನೆಂದಲ್ಲ. ಹಾಗೆ ಮಾಡಲು ಸಾಧ್ಯವೂ... Continue Reading →
ಒಂದು ಋತ್ವಿಕ್ ಘಟಕ್ ಸಿನೆಮಾ
ಮೊದಲೇ ಬಂಗಾಳದ ಆಕರ್ಷಣೆ. ಸಾಲದಕ್ಕೆ ಋತ್ವಿಕ್ ಘಟಕ್ ಸಿನೆಮಾ... ಇವರ ಸಿನೆಮಾಗಳಲ್ಲಿ ನಾನು ನೊಡಿರೋದು ಎರಡೇ. ಒಂದು, ಜುಕ್ತಿ ಟಕ್ಕೋ ಆರ್ ಗಪ್ಪೋ. ಮತ್ತೊಂದು ಮೇಘೇ ಡಕ್ಕೆ ತಾರಾ. ಈ ಎರಡನೆಯದ್ದನ್ನ ನೋಡಿ ಜಮಾನಾ ಕಳೆದಿದೆ. ಹೈಸ್ಕೂಲಿನ ದಿನಗಳಲ್ಲಿ ನೋಡಿದ್ದ ನೆನಪು. ಆದರೂ ಈ ಸಿನೆಮಾಗಳು ನನ್ನನ್ನ ತಟ್ಟಿದ ಪರಿ ಹೇಳಲಿಕ್ಕೆ ಬಾರದು. ಆದರೂ ತಕ್ಕ ಮಟ್ಟಿಗೆ ಬರೆಯುವ ಯತ್ನ ಮಾಡಿದ್ದೇನೆ. ಅದು ಹೀಗಿದೆ... ~ ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ.... Continue Reading →
‘ಸಾಂಗತ್ಯ’ದ ಸಂಗಾತ…
ದಿನಾಂಕ ೨.೧.೨೦೦೯ರ ರಾತ್ರಿ ಒಂಭತ್ತೂವರೆಗೆ ಮನೆಯಿಂದ ಹೊರಟ ನಾನು, ಟೀನಾ ಒಂಭತ್ತೂ ಐವತ್ತಕ್ಕೆ ಮೆಜಸ್ಟಿಕ್ ಸೇರಿ, ಸ್ವಲ್ಪ ಹೊತ್ತಿಗೇ ಬಂದುನಿಂತಿದ್ದ ಬಿಳಿಯ ಬಸ್ಸನ್ನ ಮಹರಾಯನೊಬ್ಬ ‘ಚಿಕ್ ಮಗ್ಳೂರ್ ಬಸ್ಸು’ ಅಂದು, ನಾವು ಆಸುಪಾಸಿನ ಜನರನ್ನ ‘ಇವ್ರೂ ಕುಪ್ಪಳ್ಳಿಗೆ ಹೊಂಟವರಿರಬೇಕು’ ಅಂತ ಗುಮಾನಿ ಕಣ್ಣಲ್ಲಿ ನೋಡುತ್ತ ಗಾಸಿಪ್ ಮಾಡ್ಕೊಂಡು ಕುಂತಿರುವಾಗ ಇದ್ದಕ್ಕಿದ್ದ ಹಾಗೇ ಟೀನಾ ತಲೆಮೇಲೆ ಬೋಧಿವೃಕ್ಷ ಚಿಗುರಿ, ‘ಮತ್ತೊಂದ್ಸಲ ವಿಚಾರಿಸ್ಕೊಂಡ್ ಬಾರೇ’ ಅಂದು, ನಾನು ಹೋಗಿ ಕೇಳಲಾಗಿ ಅದೇ ಬಿಳಿ ಬಸ್ಸು ಕುಪ್ಪಳ್ಳಿಗೆ ಹೋಗೋದು ಗ್ಯಾರಂಟಿಯಾಗಿ, ನಮ್ಮ... Continue Reading →
ಮತ್ತೊಂದು ಸಿನೆಮಾ ಮತ್ತು ನನ್ನ ತಲೆಬಿಸಿ…
ಒಟ್ಟಾರೆ ಬಂಗಾಳದ ಪ್ರವಾಸ ಒಂದೆರಡು ಡಾಕ್ಯುಮೆಂಟರಿಗಳನ್ನೂ, ಮೂರ್ನಾಲ್ಕು ಪ್ರಶಸ್ತಿ ವಿಜೇತ ಸಿನೆಮಾಗಳನ್ನೂ ನೋಡಿದ ಅನುಭವ ಮೂಡಿಸಿತ್ತು. ಹೀಗಿರುವಾಗ ಮೊನ್ನೆ ಭಾನುವಾರ ‘ಹಾಗೆ ಸುಮ್ಮನೇ ಒಂದು ಮಸಾಲಾ ಸಿನೆಮಾ ನೋಡುವ’ ಅಂದುಕೊಂಡವಳಿಗೆ ತೋಚಿದ್ದು, ‘ರಬ್ ನೆ ಬನಾದಿ ಜೋಡಿ’. ಪಕ್ಕಾ ಮಿಡಲ್ ಕ್ಲಾಸ್ ಪೋಸಿನ ಶಾರುಖ್ ಒಂದೇ ನೋಟಕ್ಕೆ ಸೆಳೆದುಬಿಟ್ಟ. ಅವನ ನಟನೆಯನ್ನ ಕಣ್ತುಂಬಿಸಿಕೊಳ್ಳುವ ಸಡಗರದಲ್ಲಿ ಹೀರೋಯಿನ್ನಿನ ಹೆಸರೂ ಯಾಕೋ ಗಮನಿಸಲಾರದೆ ಹೋದೆ ನಾನು. ಮುದ್ದಾಗಿದ್ದಳು ಹುಡುಗಿ. ಆದರೂ.... ಸಿನೆಮಾ ನೋಡಿದೆನಾ... ಯಾಕಾದರೂ ನೋಡಿದೆನೋ? ಒಳ್ಳೆ ‘ಭಾಮಿನಿ ಷಟ್ಪದಿ’... Continue Reading →
ಸುಮ್ಮನೆ ನೋಡಿದ ಸಿನೆಮಾಗಳು
ಕಳೆದೊಂದು ವಾರದಿಂದ ರಜೆ ಮೇಲೆ ರಜೆ ಬಂದು ಸೋಮಾರಿತನದಿಂದ ಮೈ ಮುರೀತಲೇ ಆಫೀಸಿಗೆ ಬಂದ ನನ್ನ ಬಾಯಲ್ಲಿ, ಅಪಸ್ವರದಲ್ಲಿ ಗುನುಗಾಡುತ್ತಿರುವ ಹಾಡು ಯಾವುದು? ಚಲ್ಕೆ ಪಲ್ಕೋಂ ಕೆ ಪೀಚೆ, ಚಲ್ಕ ತನ್ಹ ಆಸೂಂ ಕೊಯಿ....... ಇಕ್ ಮೀಠ ಮರ್ಜ್ ದೇನೆ, ಆನಾ ತುಮ್ ಯೂಂ ಹಿ... ಫಿರ್ ದವಾ ಕ ಕರ್ಜ್ ದೇನೆ, ಆನಾ ತುಮ್ ಯೂಂ ಹಿ.... ಕೇಳಿದೀರಾ ಈ ಹಾಡನ್ನ? ~ ಅದೇನಾಯ್ತು ಅಂದ್ರೆ, ಅಕ್ಟೋಬರ್ ಕೊನೇ ದಿನ ಸಂಜೆ ‘ಮುಂಬಯ್ ಮೇರಿ ಜಾನ್’... Continue Reading →
