ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು.
ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ.
ಎಲ್ರಿಗೂ ಥ್ಯಾಂಕ್ಸ್…
ಈ ಮೇಲಿನ ಸಮಸ್ಯೆಗೆ ಹಲವು ಮಿತ್ರರು ಸ್ಪಂದಿಸಿದರು. ಎಲ್ಲರಿಗೂ ಧನ್ಯವಾದಗಳು. ನೆನ್ನೆಯೇ ಎಗ್ಸಾಮ್ ನಡೆದು, ಮುಗಿದುಹೋಯ್ತು. ಬಹುತೇಕರ ಅಭಿಪ್ರಾಯದಂತೆ ಸಧ್ಯಕ್ಕೆ ಶ್ವೇತಾ ಹಣ ಕೊಟ್ಟು ಬಂದಿದ್ದಾಳೆ. ಸಂದೀಪ್, ನಾವಡ, ನಿವು ಅದಕ್ಕಿಂತ ಬೇರೆ ಏನನ್ನಾದರೂ ಮಾಡುವ ಭರವಸೆ ನೀಡಿದ್ದಿರಿ. ನಿಮ್ಮ ಬೆಂಬಲಕ್ಕೆ ಆಭಾರಿಯಾಗಿದ್ದೇನೆ. ಈ ಸಂಗತಿಯನ್ನು ಹೀಗೇ ಬಿಟ್ಟುಬಿಡುವ ಮನಸಿಲ್ಲ. ಇವತ್ತು ಶ್ವೇತಾ, ನಾಳೆ ಮತ್ತೊಬ್ಬ ವಿದ್ಯಾರ್ಥಿ/ನಿ… ಹೀಗಾಗಬಾರದು. ಆಕೆಯ ಅಭಿಪ್ರಾಯಗಳನ್ನು ಡಿಸ್ಕಸ್ ಮಾಡಿ ಉಳಿದ ಮಾಹಿತಿ ನೀಡುವೆ. ಅದು ಜೆಪಿ ನಗರದ ಡಿಪ್ಲೊಮಾ ಕಾಲೇಜು ಎಂದಷ್ಟೆ ಈಗ ಹೇಳಬಲ್ಲೆ. ನಾವಡರೇ, ನೀವು ಪತ್ರಕರ್ತರಾಗಿರುವುದರಿಂದ, ಈ ನಿಟ್ಟಿನಲ್ಲಿ ನಿಮ್ಮಿಂದ ಹೆಚ್ಚಿನ ಸಹಾಯ ಅಪೇಕ್ಷಿಸುತ್ತೇನೆ.
ವಿದ್ಯಾರ್ಥಿಗಳು ಇಂಥದನ್ನು ಇತರರ ಗಮನಕ್ಕೆ ತಂದು ಅದನ್ನು ಪ್ರತಿಭಟಿಸುವ ಸ್ಥೈರ್ಯ ತಂದುಕೊಳ್ಳಬೇಕು ಅನ್ನುವುದು ನಮ್ಮ ಬಯಕೆ. ಅದಕ್ಕಾಗಿ ಅವರನ್ನು ಬಹಳ ಮುಂಚಿನಿಂದಲೇ ಪ್ರಿಪೇರ್ ಮಾಡಬೇಕಾಗುತ್ತದೇನೋ? ಮತ್ತು, ಇಂತಹ ಕೆಲಸಗಳಿಗೆ ಅವರಲ್ಲಿ ಸಂಘಟನೆಯೂ ಅಗತ್ಯ. ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಶ್ವೇತಾ ಮತ್ತವಳ ಸಹಪಾಠಿಗಳಿಗೆ ತಲುಪಿಸಲು ಪ್ರಯತ್ನಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ.
ವಂದೇ,
ಚೇತನಾ ತೀರ್ಥಹಳ್ಳಿ.
ಪ್ರತಿಕ್ರಿಯೆಗಳು ಹೀಗಿವೆ: ( ನೆಲದ ಮಾತು ಬ್ಲಾಗ್ ನದೂ ಸೇರಿ…)
ದುಡ್ಡು ಕೇಳಿದ ಶಿಕ್ಷಕನ ಹೆಸರು ಮತ್ತು ಕಾಲೇಜನ್ನು ತಿಳಿಸುತ್ತೀರ?
ಅಂದಹಾಗೆ, ಪರಿಹಾರವಿಲ್ಲವೆಂದು ಸುಮ್ಮನೆ ಕೂರುವುದು ಬೇಡ. ಏನಾದರು(ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯಾಗದಂತೆಯೇ) ಮಾಡಬಹುದು.
ಒಂದು ನಾಲ್ಕು ಜನ ಒಗ್ಗೂಡಬೇಕಷ್ಟೆ.
ತಕ್ಷಣಕ್ಕೆ ಯಾರೂ ಏನೂ ಮಾಡಲಾಗದ ಸಂದರ್ಭ… ಬಹಳ ಇಕ್ಕಟ್ಟಿನ ಪರಿಸ್ಥಿತಿ. ಬಹುಶ: ತಕ್ಷಣಕ್ಕೆ ದುಡ್ಡುಕೊಟ್ಟು ಪಾರಾಗುವ ಜಾಣತನವೇ ಉತ್ತಮ ಪರಿಹಾರ.
ಇಲ್ಲವೇ ಹೋರಾಟ ಮಾಡಲೇಬೇಕೆಂದಾದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ಲಂಚ ತೆಗೆದುಕೊಳ್ಳುವಾಗ ಹಿಡಿಸಿ. (ಇದರಿಂದ ಆತ ಬಹುಶ: ಸಸ್ಪೆಂಡ್ ಆಗಲಾರ) ಅಥವಾ ಯಾರಾದರೂ ಸಂಬಂಧಪಟ್ಟ ಸಚಿವರಿಗೆ ಅಥವಾ ಅಧಿಕಾರಿಗಳಿಗೆ ತಕ್ಷಣ ದೂರು ನೀಡಿ, ಹಿಡಿಸಿ ಹಾಕಿ.
ದುಡ್ಡು ಕೊಡಿ ಸ್ವಾಮಿ. ಆಕೆಯ ರೀಸಲ್ಟ್ ಬಂದ ಮೇಲೆ ಆ ಶಿಕ್ಷಕರ ಮನೆಗೆ ಹೋಗಿ ಶಾಲು ಹೋದಿಸಿ ಸನ್ಮಾನ ಮಾಡಿ. ಏಕೆ ಅಂದು ಕೇಳಿದರೆ ದೊಡ್ಡ ಸರ್ಟಿಫಿಕೇಟ್ ತಗೊನ್ಡು ಹೋಗಿ. ಅದರಲ್ಲಿ ಕಲಿಯುಗದ ಗುರುಗಳಿಗೆ ಕಿಂಚಿತ್ತು ದುಡ್ಡಿಗಾಗಿ ಪಾಸ್ ಮಾಡಿಸಿದ್ದಕ್ಕೆ ಧನ್ಯವಾದ ಬರೆಸಿ. ಆದ್ರೆ ಪತ್ರಿಕೆ, ಮಾದ್ಯಮಗಳನ್ನು ದೂರ ಇಡಿ. ನಾಳೆ ಅವರು ತಪ್ಪು ತಿದ್ದು ಕೊಳ್ಳೊ ಬದಲು ಆತ್ಮಹತ್ಯೆ ಮಾಡಿಕೊನ್ಡರೆ ಕಷ್ಟ.
ಸಮಸ್ಯೆ ಕಷ್ಟದ್ದೇ. ಆದಷ್ಟು ಬೇಗ ಕಾಲೇಜು ಮತ್ತು ಮೇಸ್ಟ್ರ ಹೆಸರು ಕೊಡಿ. ಮುಂದಿನದ್ದನ್ನು ಸರಿ ಮಾಡೋಕೆ ಪ್ರಯತ್ನಿಸ್ತೇನೆ. ಯಾರಿಗೂ ಏನೂ ಆಗೋಲ್ಲ. ಸಮಸ್ಯೆ ನಿವಾರಿಸೋಣ. ನಂತರ ದೊಡ್ಡ ಮಟ್ಟದ್ದು ಆಲೋಚಿಸೋಣ. ಇಲ್ಲವೇ ಶ್ವೇತಾಗೆ ನನ್ನ ಮೊಬೈಲ್ ಸಂಖ್ಯೆ 93433 81802 ಕೊಡಿ.
ನಾವಡ
ಸಧ್ಯಕ್ಕೆ ನೀಲಾಂಜಲ ಅವರು ಹೇಳಿದಂತೆ ಮಾಡುವುದೇ ಉಚಿತವೆನಿಸುತ್ತದೆ. ಏಕೆಂದರೆ, ಒಬ್ಬರೋ, ಇಬ್ಬರೋ ಎದುರು ನಿಂತರೆ ಏನೂ ಮಾಡಲಾಗದು. ಕೋರ್ಟು, ಕಛೇರಿ ಅಂತಾ ವರ್ಷ ಕಳೆದವರೆಷ್ಟೋ ಮಂದಿಯಿದ್ದಾರೆ. ಆ ಕಾಲೇಜಿನ ಎಲ್ಲಾ ಮಂದಿ ಒಗ್ಗೂಡಿ ಇದಕ್ಕೆ ಬಹಿಷ್ಕಾರ ಹಾಕಿದರೆ ಮಾತ್ರ ತುರ್ತು ಪ್ರಯೋಜನವಿದೆ. ಅಂದ ಹಾಗೆ, ಅದು ಖಾಸಗಿ ಕಾಲೇಜೋ, ಇಲ್ಲಾ ಸರಕಾರಿಯೋ?
ಆದ್ರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಕೊನೆಗೆ ಶ್ವೇತಾಳೆ “ಅಕ್ಕ ನಂದು ತಪ್ಪಾಯ್ತು ಉಗುರಲ್ಲಿ ಆಗೋದಕ್ಕೆ ಕೊಡಲಿ ಎತ್ತಿಕೊಂಡೆ ” ಅಂತ ಏನಾದ್ರೂ ಹೇಳಿದ್ರೆ ಸಹಾಯಕ್ಕೆ ಬಂದವರೆಲ್ಲ ಜೀವನಪೂರ್ತಿ ಯಾರಿಗೂ ಸಹಾಯ ಮಾಡದೇ ಇರೋ ಪರಿಸ್ಥಿತಿ ಬರಬಹುದು.(ಯಾಕಂದ್ರೆ ಬಹಳಷ್ಟು ಸಂದರ್ಭದಲ್ಲಿ ನನಗೇ ಈ ರೀತಿ ಸಹಾಯ ಮಾಡಲು ಹೋಗಿ ,ಸಹಾಯ ಪಡೆದವರೇ ಕಾರಣಾಂತರಗಳಿಂದ ತಿರುಗಿ ಬಿದ್ದಿದ್ದಾರೆ)
ಲಂಚ ತಗೊಳ್ಳೋದು ಒಂದು ಚಟ .ಈಗ ಸಿಕ್ಕಿ ಬಿದ್ದು ಸಸ್ಪೆಂಡ್ ಆದ್ರೂ ಮುಂದೆ ಖಂಡಿತ ಚಾಳಿ ಮುಂದುವರೆಸುತ್ತಾರೆ ಅವರು.
ಲಿಂಕು- http://lokayukta.kar.nic.in/telephone.pdf – ಸಂದೀಪ್ ಕಾಮತ್.
ಚೇತನಾ,
ಸಮಸ್ಯೆ ಬುಡಕ್ಕೆ ಕೈ ಹಾಕಬೇಕು, ಅದು ಅಷ್ಟು ಸುಲಭದ ಕೆಲಸವಲ್ಲ. ಇಡಿ ವ್ಯವಸ್ಥೆಯನ್ನು ಸರಿ ಮಾಡಲು ವರ್ಷಗಟ್ಟಳೆ ತೆಗೆದುಕೊಳ್ಳಬಹುದು.
ನಂಗೆ ಕೇಳಿದರೆ ಅವರ/ಅಂತವರ ಮನೆಗೆ ದಿನಕ್ಕೊಂದು ಪೋಸ್ಟ ಕಾರ್ಡ್ ಕಳಿಸಿ. . ಅದರಲ್ಲಿ ಧೀಮಂತ ಗುರುಗಳ ಕತೆ ಬರೆದು ಕಳಿಸಿ, ಹೆದರಿಸಬೇಡಿ ಮಾತ್ರ. – ನೀಲಾಂಜಲ
ನಮ್ಮ ಕಾಲೇಜಿನಲ್ಲೂ ಇದೇ ರೀತಿ ನಮ್ಮ ಸೀನಿಯರ್ಸ್ ಗೆ ಒಬ್ರು ಲೆಕ್ಚರರ್ ಪ್ರಾಕ್ಟಿಕಲ್ ಎಕ್ಸಾಮ್ ಗೆ ಹಣ ಕೇಳಿದ್ರು .Rs 1000/- per head!
ಎಲ್ಲಾ ಸೇರಿ ಕೊಟ್ಟಿದ್ರು .ಅವ್ರು ಎಲ್ಲರಿಗೂ ಕಣ್ನು ಮುಚ್ಚಿ 90 ರ ಮೇಲೆ ಮಾರ್ಕ್ಸ್ ಕೊಟ್ಟಿದ್ರು .
ಪಾಪ ಬಹಳಷ್ಟು ಜನರಿಗೆ ಪ್ರಾಕ್ಟಿಕಲ್ ನಲ್ಲಿ 90 ಬಂದ್ರೂ ಥಿಯರಿನಲ್ಲಿ 35 ತೆಗೆಯೋದಕ್ಕೆ ಸಾಧ್ಯ ಆಗೇ ಇಲ್ಲ:)) – – ಸಂದೀಪ್ ಕಾಮತ್.

ಚೇತನಾರೇ,
ಇದ್ರಲ್ಲಿ ಥ್ಯಾಂಕ್ಸ್ ಹೇಳುವಂಥದ್ದೇನೂ ಇಲ್ಲ. ಇಂದು ಶ್ವೇತಾಳಿಗಾದದ್ದೂ ನಾಳೆ ನನ್ನ ತಂಗಿಗೂ ಆಗಬಹುದಲ್ಲವೇ ? ನಮಗೆ ಇರುವಂಥ “ಸಂಪರ್ಕ” ಗಳನ್ನು ಇಂಥ ಸಂದರ್ಭದಲ್ಲೂ ಬಳಸಿದಿದ್ದರೆ ಅದು ವ್ಯರ್ಥ ಎನ್ನುವುದು ನನ್ನ ಅಭಿಪ್ರಾಯ. ನನ್ನದನ್ನು ಹೆಚ್ಚಿನದನ್ನು ನಿರೀಕ್ಷಿಸುವುದಾಗಿ ಹೇಳಿದ್ದೀರಿ,ಆ ವಿವರ ಕೊಟ್ಟರೆ ಪ್ರಯತ್ನಿಸಬಲ್ಲೆ. ಜತೆಗೆ ಇಂಥ ಎಂಥದೇ ಸಂದರ್ಭಗಳೂ ಬಂದರೂ (ಶಿಕ್ಷಣ ಕ್ಷೇತ್ರದ್ದಿರಲಿ, ಬೇರೆ ಕ್ಷೇತ್ರದ್ದಿರಲಿ)ನಾನು ಕೈಲಾದ ಎಲ್ಲವನ್ನೂ ಮಾಡುತ್ತೇನೆ. ಅಂಥ ಸಮಸ್ಯೆಗಳು, ಯಾರದ್ದೇ ಇರಲಿ, ನನಗೆ ತಿಳಿಸಬಹುದು.ನಮಸ್ಕಾರಗಳೊಂದಿಗೆ
ನಾವಡ
ಚೇತನಕ್ಕ,
ಇದು ಶ್ವೇತಳಂತಹ ಒಬ್ಬ ವಿದ್ಯಾರ್ತಿಯ ಸಮಸ್ಯೆ ಮಾತ್ರವಲ್ಲ. ನಾನು ಗಮನಿಸಿದಂತೆ ಮೆಡಿಕಲ್, ಎಂಬಿಎ ಕೊನೆಗೆ ಬಿ.ಇಡಿ ಯ ವೈವಾ ಮತ್ತು ಅಸೈನ್ಮೆಂಟ್ ನೀಡುವಾಗಲೂ ಹಲವೆಡೆ ಇದೇ ಸ್ಥಿತಿ ಇದೆ. ವಿದ್ಯೆಗಿಂತ ಇಲ್ಲಿ ಮೇಲುಗೈ ಸಾಧಿಸುವುದು ಒಂದೋ ಹಣ ಅಥವಾ ಚಮಚಾಗಿರಿ. ಮೈಸೂರು ಮೆಡಿಕಲ್ ಕಾಲೇಜುಗಳಲ್ಲಿ ಕೂಡ ಇದು ನಡೆಯುತ್ತಿದೆಯೆಂದು ನನ್ನ ವೈದ್ಯ ವಿದ್ಯಾಥಿ ಮಿತ್ರನೊಬ್ಬ ಹೇಳುತ್ತಿದ್ದ. ಅಲ್ಲಿ ಅವರ ಡಿಮ್ಯಾಂಡ್ ನಾಲ್ಕಂಕಿಗಳ ಮೇಲೆಯೇ ಇರುತ್ತದಂತೆ. ಆದ್ದರಿಂದ ದೊಡ್ಡ ಮಟ್ಟದಲ್ಲೆ ಮಾದ್ಯಮಗಳು, ಸಂಘಟನೆಗಳು, ವಿದ್ಯಾಥಿಗಳು ಎಲ್ಲ ಒಟ್ಟಾಗಿ ಇದನ್ನು ಎದುರಿಸುವ ದಾರಿ ಹುಡುಕಬೇಕೆಂದು ನನಗನ್ನಿಸುತ್ತದೆ.
– ರಾಘವೇಂದ್ರ ಕೆಸವಿನಮನೆ
ಓ ನನ್ನ ಚೇತನಾ ಅಂತಾ ಕುವೆಂಪು ವಿಶ್ವ ಮಾನವ ಥಿಯರಿ ತರಹ ಹೇಳಿದ್ದುಂಟು..
ಇದೂ ಪ್ರಯತ್ನ ಶ್ಲಾಘನೀಯ ವಾದದ್ದು!
ನಾನೂ ಬರೀತೀನೆ, ಒಮ್ತರಾ..
ಈತರಹ:
http://shrungara.wordpress.com/
ನೀಲಿ ಕತೆಗಳು ಅಂತಾರಲ್ಲಾ ಆ ಜಾತಿಯ ಕತೆಗಳು..ರೋಚಕ ವಾದದ್ದು!
ಬನ್ನಿ ಬನ್ನಿ,
ಇತಿ ನಿಮ್ಮ ಸಹೃದಯ ಕತೆಗಾರ