ಒಟ್ಟಾರೆ ಬಂಗಾಳದ ಪ್ರವಾಸ ಒಂದೆರಡು ಡಾಕ್ಯುಮೆಂಟರಿಗಳನ್ನೂ, ಮೂರ್ನಾಲ್ಕು ಪ್ರಶಸ್ತಿ ವಿಜೇತ ಸಿನೆಮಾಗಳನ್ನೂ ನೋಡಿದ ಅನುಭವ ಮೂಡಿಸಿತ್ತು. ಹೀಗಿರುವಾಗ ಮೊನ್ನೆ ಭಾನುವಾರ ‘ಹಾಗೆ ಸುಮ್ಮನೇ ಒಂದು ಮಸಾಲಾ ಸಿನೆಮಾ ನೋಡುವ’ ಅಂದುಕೊಂಡವಳಿಗೆ ತೋಚಿದ್ದು, ‘ರಬ್ ನೆ ಬನಾದಿ ಜೋಡಿ’.
ಪಕ್ಕಾ ಮಿಡಲ್ ಕ್ಲಾಸ್ ಪೋಸಿನ ಶಾರುಖ್ ಒಂದೇ ನೋಟಕ್ಕೆ ಸೆಳೆದುಬಿಟ್ಟ. ಅವನ ನಟನೆಯನ್ನ ಕಣ್ತುಂಬಿಸಿಕೊಳ್ಳುವ ಸಡಗರದಲ್ಲಿ ಹೀರೋಯಿನ್ನಿನ ಹೆಸರೂ ಯಾಕೋ ಗಮನಿಸಲಾರದೆ ಹೋದೆ ನಾನು. ಮುದ್ದಾಗಿದ್ದಳು ಹುಡುಗಿ. ಆದರೂ….
ಸಿನೆಮಾ ನೋಡಿದೆನಾ… ಯಾಕಾದರೂ ನೋಡಿದೆನೋ? ಒಳ್ಳೆ ‘ಭಾಮಿನಿ ಷಟ್ಪದಿ’ ಮತ್ತು ‘ಗಂಡಸ್ರ ಗೋಳು’ ಎರಡನ್ನೂ ಹದವಾಗಿ ಬೆರೆಸಿಕೊಂಡು ಅನುಭವಿಸಿದ ಹಾಗಾಯ್ತು ನನ್ನ ಪಾಡು. ಸುಮ್ಮನೆ ಕುಂತು ನೋಡಿದ್ದರೆ ಒಳ್ಳೆ ಸಿನಿಮಾನೇ. ಒಳ್ಳೆ ಅಂದ್ರೆ, ಒಂದ್ಸಲ ಖುಷಿಯಾಗಿ ನೋಡಬಹುದಾದ ಸಿನೆಮಾ. ಆದ್ರೆ ನನಗ್ಯಾಕೋ ಅದು ಒಂದಷ್ಟು ತಳಮಳಗಳನ್ನ ಹುಟ್ಟಿಹಾಕಿಬಿಡ್ತು. ಹೆಣ್ಣು ಮನಸ್ಸಿನ ಸಂಕೀರ್ಣತೆಯ ಬಗ್ಗೆ ಸೀರಿಯಸ್ಸಾಗಿ ತಿಳ್ಕೊಳ್ಬೇಕಲ್ಲಾ ಅನಿಸಿಬಿಡ್ತು. ಪಿಚ್ಚರಲ್ಲೇನೋ ಅವಳಿಗೆ ಅವನಲ್ಲಿ ‘ರಬ್’ ಕಂಡ, ಸರಿ ಹೋಯ್ತು…. ಕಾಣದೇ ಹೋಗಿದ್ದಿದ್ದರೆ?
‘ಪಿಚ್ಚರಿಗೆ ಬೇರೆ ಹೆಸರಿಡ್ತಿದ್ರು..’ ಅಂತ ತಿವಿಯಿತು ಒಳಮನಸ್ಸು.
~
ಸೂರಿ ತನ್ನನ್ನ ಮದುವೆಯಾಗಿ ‘ಎಹೆಸಾನ್’ ಮಾಡಿದಾನೆ ಅಂದುಕೊಳ್ತಲೇ ಉಪಕಾರದ ಭಾರಕ್ಕೆ ತಗ್ಗಿ, ಅವನನ್ನ ಪ್ರೀತಿಸಲಾಗದೆ ಹೋಗುವ ಹೆಣ್ಣುಮಗಳು, ಅವನನ್ನ ಗೌರವಿಸುವ, ಅನುಸರಿಸ್ಕೊಂಡುಹೋಗುವ ನಿರ್ಧಾರ ತೊಗೊಳ್ತಾಳಲ್ಲ, ಆಗ ಆಕೆಯದು ತ್ಯಾಗ ಅನಿಸಿಬಿಡುತ್ತೆ.
ಅವನು ಅಷ್ಟೆಲ್ಲ ಪ್ರೀತಿಸಿ ಅನುಕೂಲಗಳನ್ನ ಮಾಡಿಕೊಟ್ಟು, ಗೌರವದಿಂದ ನಡೆಸ್ಕೊಂಡರೂ ಆತ ಪ್ರೀತಿ ಪಡೆಯಲಾರದೆ ಹೋಗ್ತಾನಲ್ಲ, ಆಗ ಅವನ ಬಗ್ಗೆ ಪಾಪ ಅನಿಸುತ್ತ ಅವಳ ಬಗ್ಗೆ ಅಸಹನೆ ಶುರುವಾಗತ್ತೆ.
ಆದರೂ,
‘ರಾಜ್’ ಆಗಿ ಕಾಣಿಸಿಕೊಳ್ಳುವ ಸೂರಿಯ ಸಹವಾಸದಲ್ಲಿ ಅವಳು ಖುಷಿ ಪಡುವಾಗ ಅವಳ ಬಗ್ಗೆ ಜಿಗುಪ್ಸೆ ಯಾವ ಕಾರಣಕ್ಕೂ ಮೂಡೋದೇ ಇಲ್ಲ. ಪಾಪ, ಪ್ರೀತಿಗಾಗಿ ಎಶ್ಟು ಹಂಬಲಿಸಿದ್ದಾಳೆ! ಅನಿಸಿಬಿಡ್ತಿತ್ತು. ಅವಳಿಗೆ ಪ್ರೀತಿ ದಕ್ಕಿದಾಗ, ಅಮೃತ್ ಸರದ ಲೈಟುಕಂಬಗಳಲ್ಲಿ ‘ಐ ಲವ್ ಯೂ’ ಮೂಡಿಬಂದಾಗ ನನಗೇ ಸಂಭ್ರಮಿಸುವಂತಾಗಿಬಿಟ್ಟಿತ್ತು…
~
ಈ ಸಿನೆಮಾವನ್ನು ಮೂರ್ನಾಲ್ಕು ಬಗೆಯಿಂದ ನೋಡಬಹುದು. ಮನರಂಜನೆ, ಶಾರುಖ್ ಅಭಿನಯ, ಹೆಣ್ಣು ಮನಸ್ಸಿನ ಒಳತೋಟಿ ಮತ್ತು ಹಸು ಮನಸ್ಸಿನ ಗಂಡಸಿನ ತೊಳಲಾಟ…
ನನ್ನ ಆಯ್ಕೆ, ಹೆಣ್ಣಿನ ಒಳತೋಟಿಯೇ ಆಗಿತ್ತು. ಅದಕ್ಕೇ, ಕೊನೆಯಲ್ಲಿ ಸೂರಿಯೇ ರಾಜ್ ಎಂದು ಗೊತ್ತಾದಾಗ, ಯಾವುದೇ ಹಿಂಜರಿಕೆಯಿಲ್ಲದೆ ಆತನನ್ನು ಅವಳು ಸ್ವೀಕರಿಸಿದ್ದು ನನಗೆ ಅರಗಿಸ್ಕೊಳ್ಳಲಾಗಲಿಲ್ಲ. ರಾಜ್ ಒಬ್ಬ ಬೇರೆಯೇ ವ್ಯಕ್ತಿ. ಹಾಗಂತಲೇ ಅವಳು ಅಂದ್ಕೊಂಡು ಪ್ರೀತಿಸಿದ್ದಳು. ಅದು ಸೂರಿಯದೇ ನಟನೆ ಎಂದು ಮೊದಲೇ ಗೊತ್ತಾಗಿಹೋಗಿದ್ದರೆ ಅವಳ ಪ್ರತಿಕ್ರಿಯೆ ಹೇಗಿರುತ್ತಿತ್ತು?
ಅಂತಿಮವಾಗಿ, ತನ್ನ ಮೆಲೆ ತನ್ನ ಗಂಡನಿಗಿರುವ ಪ್ರೀತಿಯನ್ನ ಗೌರವಿಸಿ, ಮೆಚ್ಚಿ ಆಕೆ ಅವನ ತೆಕ್ಕೆ ಸೇರಿದಳೆಂದರೂ, ಆತ ಬೇರೆ ಯಾರೋ ಅಗಿದ್ದಿದ್ದರೆ ಎನ್ನುವ ಮುಜುಗರ, ರಾಜ್ ತನ್ನಿಂದ ಶಾಶ್ವತವಾಗಿ ಇಲ್ಲವಾಗಿಹೋದ ಸಂಕಟ ಅವಳನ್ನು ಕಾಡುವುದಿಲ್ಲವೇ?
~
ಹೀಗೇ ಆಗಿತ್ತು. ಒಂದಷ್ಟು ದಿನ ‘ಹನಿ’ ಎನ್ನುವ ಹುಡುಗಿ ನನಗೆ ಮೆಸೇಜ್ ಮಾಡ್ತಿದ್ದಳು. ಅದು ಯಾರು ಎಂದು ಗೊತ್ತಾಗುವವರೆಗೂ ಆಕೆ ಅನಾಮಧೇಯಳಾಗಿದ್ದವರೆಗೂ ನನಗೆ ಆಕೆಯ ಬಗ್ಗೆ ಕುತೂಹಲವಿತ್ತು. ನಿರಂತರ ಎಸ್ಸೆಮ್ಮೆಸ್ ಒಡನಾಟವಿತ್ತು. ಆದರೆ, ಆಕೆ ನನ್ನ ಕಸಿನ್ ಎಂದು ಬಯಲಾದ ಮೇಲೆ (ಅವಳ ರೂಮ್ ಮೇಟಿನ ನಂಬರಿಂದ ಮಾಡ್ತಿದ್ದಳು) ಆಸಕ್ತಿ ಕಡಿಮೆಯಾಯ್ತು. ಅವಳಲ್ಲೂ, ನನ್ನಲ್ಲೂ…
ತಾನ್ಯಾಗೆ, ಹೀಗೆ ಹುಚ್ಚುಚ್ಚಾಗಿ ತನ್ನನ್ನ ಪ್ರೀತಿಸುವವ ತನ್ನ ಪತಿಯಲ್ಲದ ಬೇರೆ ಯಾರೋ ಅನ್ನುವುದೇ ಥ್ರಿಲ್ ಆಗಿಸಿತ್ತೇ? ಎನ್ನುವ ಪ್ರಶ್ನೆ ಮೂಡಿದಾಗ ಸುಖಾ ಸುಮ್ಮನೆ ಈ ಘಟನೆ ಮನಸ್ಸಲ್ಲಿ ಹಾದು ಹೋಯ್ತು.
~
ಎಂಥದೋ ಒಂದು. ಸಿನೆಮಾ ಅನ್ನೋದು ನೋಡಿ ಮರೆಯಬೇಕಾದ ಸಂಗತಿ. ಅದನ್ನಿಟ್ಟುಕೊಂಡು ಸೆಮಿನಾರ್ ಮಾಡೋಕಾಗತ್ತಾ? ಗೆಳೆಯ ಗೊಣಗಿದ. ನನಗೆ ಹೇಳಲೇನೂ ತೋಚದೆ ಬಾಯಿ ಮುಚ್ಚಿಕೊಂಡೆ.
ಹೆಣ್ಣು ಮನಸ್ಸಿನ ಕಥೆಗಳು ನನಗೆ ಹೊಸತಲ್ಲವಾದರೂ, ಯಾಕೋ ಕಾಡುವಿಕೆ ಹೊಸತಾಗಿ ಕಾಣುತ್ತಿದೆ. ಕೊಂಚ ಹುಷಾರಾಗಿರಬೇಕು. ಏನಂತೀರಿ!?

ಸಿನೆಮಾ ನಾನೂ ನೋಡಿದೆ.
ಸಾಮಾನ್ಯ ಮಸಾಲಾ ಸಿನೆಮಾಗಿಂತ ಹೆಚ್ಚಿನ ಕಸುವು ಇದರಲ್ಲಿದೆ ಅನ್ನಿಸಿತು.
ಆಕೆಗೆ ಕಡೆಯವರೆಗೂ ರಾಜ್ ಹಾಗೂ ಸೂರಿ ಒಬ್ಬನೇ ಎಂದು ತಿಳಿಯದೇ ಹೋಗಿದ್ದರೆ ಎಂಬ ಪ್ರಶ್ನೆ ಮೂಡಿತು. ಜೊತೆಗೆ ಡ್ಯಾನ್ಸ್ ಕಾಂಪಿಟೇಶನ್ ಮುಗಿದಾದ ಮೇಲೆ ಓಡಿ ಹೋಗುವ ನಿರ್ಧಾರ ಮಾಡಿದಾಕೆಗೆ ಅಚಾನಕ್ಕಾಗಿ ಸೂರಿಯಲ್ಲಿ ‘ರಬ್’ ಕಂಡುಬಿಡುವುದರ ಹಿಂದೆ ನಿರ್ದೇಶಕನೆಂಬ ‘ರಬ್’ನ ಕೈಚಳಕವಿದೆಯೋ, ಭಾರತೀಯತೆ ಎಂಬ ‘ರಬ್’ನ ಪ್ರಭಾವವಿದೆಯೋ ಅರ್ಥವಾಗಲಿಲ್ಲ.
ಜೊತೆಗೆ ಸ್ವಲ್ಪ ಸೂಕ್ಷ್ಮವಾಗಿ ಆದರೆ ತೀಕ್ಷ್ಣವಾಗಿ ಕಾಡಿದ್ದು ಸೂರಿಯ ತಳಮಳಗಳು. ಅಷ್ಟು ಪ್ರೀತಿಯನ್ನು ಎದೆಯಲ್ಲಿಯೇ ಇಟ್ಟುಕೊಂಡು ಹೊಲೆ ಹೊಲೆಸೆ ದುವಾ ಲಗತೀ ಹೈ ಎಂದು ಕಾಯುವ ಮನಸ್ಥಿತಿ ಹಾಗೂ ಪ್ರೀತಿಯನ್ನು ವ್ಯಕ್ತ ಪಡಿಸದಿದ್ದರೂ ತಿಳಿಯುವುದಕ್ಕೆ ನಾವೇನು ದೇವರೇ ಎಂದು ಆತನ ಗೆಳೆಯ ಹೇಳುವುದಕ್ಕೂ ಸಂಘರ್ಷ ಉಂಟಾಗಿತ್ತು ನನ್ನ ತಲೇಲಿ…
ಹೌದು ಸಿನೆಮಾ ನೋಡಿ ಮರೆತುಬಿಡಬೇಕು…
ಮರೆಯಲಿಕ್ಕಾಗಿ ಸಿನೆಮಾ ನೋಡಬೇಕು.
ಸುಪ್ರೀ
naanu film noDide. shaarukh abhinaya chennagittu. heroin bengaLoorinavaLu anushka anta.
nanna manasalli mooDida prashne Enendre… ondu vELe raaj bEre soorinE bEre aagidre avaLu yEnu maadtidlu anta…
ondu tara nOdidre ‘hum dil de chuke sanam’ na yeLeyE ee katheyalloo gaaDhavaagittu…
ಆ ಮುದ್ದಾದ(?) ಹುಡುಗಿಯ ಹೆಸರು ” ಅನೂಷ್ಕಾ”..:)
ಶಾರುಖ್ ಅಭಿನಯದ “ಪಹೇಲಿ” ಚಿತ್ರದಲ್ಲೂ ಇಂಥದ್ದೇ ಒಂದು conflict ಇದ್ದ ನೆನಪು. ಅಲ್ಲವೇ?
tamilna ‘anniyan’, kasaravalliyavara ‘nAyi neraLu’ eraDU nenapaadvu!(ajagajaantara?:))
nAyi neraLu khanditaa nODirteera, anniyan yavagladrU timepass maaDo mood nalliddaaga nODi…alli heroinege modalinda idu maaruveshada heronE anta gottiratte, torsikondirodilla – onthara justification annsutte, she never fell for another man anta! anyway pakka tam commercial filmu, sumne bekidre nODi, thale bisi maaDkoLakk hogbedi ashte:))
OhO… adna nODideeni…
But, idanna nODta adna neneskoLbahudu anta eega anistide!