ಮರೆಯಲಾಗದ ಸಾವು, ಓದಿಸಿಕೊಳ್ತಲೇ ಇರುವ ಬರಹ…


ಯಾರೂ ಓದದಿದ್ರೂ ಪರವಾಗಿಲ್ಲ, ನಾನಂತೂ ಬರೀತೀನಿ...
ಅಂತ ಅಂದ್ರೆ ಅದು ನಾಲಿಗೆಗಷ್ಟೆ ಸೀಮಿತವಾಗೋ ಮಾತು. ನಿಜ್ಜ ಅಂದ್ರೆ, ಯಾರಾದರೂ ಓದಿದ್ರೆ ಎಷ್ಟು ಚೆಂದ ಅಂತ ನಾವು- 
ಬರಿಯೋರೆಲ್ರೂ ಅಂದ್ಕೊಳ್ತೀವಿ.
ಈ ನಮ್ಮ ಬ್ಲಾಗಲ್ಲಿ ಬ್ಲಾಗ್ ಸ್ಟ್ಯಾಟ್ಸ್ ಇದೆಯಲ್ಲ, ಅದನ್ನ ನಾನು ಆಗೀಗ ಚೆಕ್ ಮಾಡ್ತಿರ್ತೀನಿ. ಯಾವ್ಯಾವ ಪೋಸ್ಟ್‌ಗಳನ್ನ 
ಓದಿದಾರೆ ನೋಡಣಾ ಅಂತ ಕುತೂಹಲಕ್ಕೆ.
ಸುಮಾರು ಎರಡು ವರ್ಷದಿಂದ ದಿನಾ ಅಂದ್ರೆ ದಿನಾಲೂ ಓದಲ್ಪಡುವ ಎರಡು ಬ್ಲಾಗ್ ಪೋಸ್ಟ್‌ಗಳು
‘ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ’ ಅನ್ನೋದು ಮತ್ತು ‘ಬಿಳಿಬಿಳೀ ಸೀರೆಯ ಹುಡುಗಿಯರು....’
ಈ ಎರಡನೆಯದ್ದು- ಸೀರೆ, ಹುಡುಗಿ- ಇತ್ಯಾದಿ ಕೀವರ್ಡ್ಗಳ ಮೂಲಕ ತಲುಪಿಕೊಳ್ಳುವ ಪೋಸ್ಟ್. ಆದ್ರೆ ಮೊದಲನೆಯದ್ದಿದೆಯಲ್ಲ...
ಅದು ನನ್ನನ್ನ ಹಿಂಡಿ ಹಿಪ್ಪೆ ಮಾಡುವ ಲೇಖನ. ಯಾಕಂದರೆ ಅದು ಹೆಚ್ಚೂ ಕಡಿಮೆ ನಡೆದ ಘಟನೆ.
ಇದನ್ನ ದಿನಾಲು ಓದೋರು ಯಾರು? ಕೊನೆ ಪಕ್ಷ ಎರಡಾದ್ರೂ ಹಿಟ್ ಇರ್ತದಲ್ಲ ಈ ಪೋಸ್ಟಿಗೆ? ಯಾರು ಇದನ್ನ ಮತ್ತೆ ಮತ್ತೆ 
ಓದಿ ಕಾಡಿಸ್ಕೊಳ್ತಿದಾರೆ?
ಯಾಕಾದ್ರೂ ಓದ್ತಾರೆ ಇದನ್ನ!?
~
ಆ ಚಿಕ್ಕ ಹುಡುಗ ಪವನ ಇಲ್ಲವಾಗಿ ಲೆಕ್ಕ ಮರೆತಷ್ಟು ವರ್ಷ.
ಅಂವ ಇದ್ದಿದ್ದರೆ ನಾವು ಅಪರಿಚಿತರಾಗಿ ಬೆಳೆದಿರ್ತೆದ್ದವು ನಿಜ. ಅವನು ಇಲ್ಲ.
ಈ ಹೊತ್ತೂ ಚಾಟರ್ ಬಿಲ್ಲು ನೋಡಿದರೆ ಪವನನ ನೆನಪು.
ನೂರೊಂದು ನೆನಪು... ಹಾಡನ್ನು ಕೇಳುವಾಗಲೆಲ್ಲ ಅಂವನದೊಂದು ತುಣುಕು ಕಣ್ಹಾದು ಹೋಗುತ್ತೆ. ಯಾಕಿಷ್ಟು ಸಂಕಟವೋ...
 ನಾಲ್ಕು ಸಾವುಗಳನ್ನ ಹತ್ತಿರದಿಂದ ನೋಡಿದೇನೆ. ಯಾರ ಸಾವೂ ಕಾಡೋದಿಲ್ಲ, ಈ ಮಗುವಿನದೊಂದು ಮಾತ್ರ 
ಗಾಯ ಮಾಡಿಬಿಟ್ಟಿದೆ.
~
ಯಾರೋ ಈ ಪೋಸ್ಟನ್ನು ಓದುತ್ತಲೇ ಇರುವವರು... ನೊಂದವರಾಗಿರದಿದ್ದರೆ ಸಾಕು.

2 thoughts on “ಮರೆಯಲಾಗದ ಸಾವು, ಓದಿಸಿಕೊಳ್ತಲೇ ಇರುವ ಬರಹ…

Add yours

  1. ನಿಜ ಬರೆದವರೆಲ್ಲರೂ ನನ್ನ ಬರವಣಿಗೆಯನ್ನು ಯಾರದರು ಓದುತ್ತಾರ?? ಎಂದೆನಿಸುತ್ತೆ.. ಹಾಗೆ ಸಾವು ನಮಗೆ ಹತ್ತಿರದವರನ್ನ ಕಳೆದುಕೊಂಡಾಗ ಮನಸ್ಸು ಭಾರವಾಗುವುದು ಸಹಜ… ನಿಮ್ಮ ಲೇಖನಗಳು ಬಹಳಷ್ಟು ವಿಭಿನ್ನವಾಗಿರುತ್ತೆ… ನಾನು ಓದುತ್ತಲೇ ಇರುತ್ತೇನೆ.

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑