… ಮತ್ತು ಆ ದಿನ ನಾನು ಹುಟ್ಟಿಕೊಂಡೆ.
ಹೊಕ್ಕುಳ ಬಳ್ಳಿ ಕತ್ತರಿಸಿ ಬೀಳುತ್ತಲೇ ನಾನು ಸ್ವತಂತ್ರಳಾಗಿದ್ದೆ.
ಕುಗ್ಗಿಸಲು ಬಂದ ಕಷ್ಟಗಳೆದುರು ಅಗಾಧ ಬೆಳೆದುಕೊಂಡೆ.
ಕಟ್ಟಲು ಬಂದ ಖುಷಿಗಳೆದುರು ವಿನಯದಿಂದ ಹಿಡಿಯಾದೆ.
ನೆನ್ನೆಯ ಅಂಟು, ನಾಳಿನ ನಂಟುಗಳೆಲ್ಲ ವಿಧಿಗೆ ಗುಲಾಮರನ್ನಾಗಿಸುತ್ತವೆ ನಮ್ಮನ್ನು.
ಈ ಕ್ಷಣದ ಹೆಜ್ಜೆಯಷ್ಟೆ ನನ್ನದು. ನನ್ನದು ಪ್ರತಿ ಕ್ಷಣದ ಬದುಕು.
ನಾನು ಹುಟ್ಟಿಂದಲೂ ಸ್ವತಂತ್ರಳು… ಸ್ವತಂತ್ರಳಾಗೇ ಇರುವೆ…
ನಾನಾದರೂ ಏನು ಮಾಡಲಿ, ಸ್ವಾತಂತ್ರ್ಯನನ್ನ ಹುಟ್ಟಿಗೇ ಬೆಸೆದುಕೊಂಡುಬಿಟ್ಟಿದೆ!

Happy Birth Day!
very nice chetana… love these lines.. 🙂
Happy b’day Chetana…
Thank u very much 🙂
Thank u 🙂
Thanks 🙂
“ಕಟ್ಟಲು ಬಂದ ಖುಷಿ”…ನಾನು ಆ ಸಾಲನ್ನು “ಕಟ್ಟಲು ಬಂದ ಋಷಿಗಳೆದುರು” ಅಂತ ಓದಿಕೊಂಡೆ.