ಅಲರಾಮ್ 22 : ಪ್ರಾಣ್ ನೀಳ್ಗತೆ ಅಥವಾ ಕಿರು ಕಾದಂಬರಿ


ಮಾರ್ಚ್- 2003. ದೆಹಲಿಯ ಸ್ಮಶಾನ.

ಅದಾ ಇಸ್ತರ್, 95ನೆ ವಯಸ್ಸಿನಲ್ಲಿ ಮರಣ ಹೊಂದಿದ್ದಾರೆ. ಅವರ ಮಗಳು ಅವಳನ್ನು ಮಣ್ಣು ಮಾಡಲು ನಿಂತಿದ್ದಾಳೆ. ಅವಳ ಕೈಯಲ್ಲಿ ಒಂದು ಡೈರಿ, ಆ ಡೈರಿಯನ್ನು ನಾನು ಸತ್ತಮೇಲೆ ಓದಬೇಕು ಎಂದು ಇಸ್ತರ್ ತನ್ನ ಕೊನೆಯದಿನಗಳಲ್ಲಿ ಕೊಟ್ಟಿದ್ದಾರೆ.
ಅವಳಿಗೆ ಅದನ್ನು ಓದುವ ಕಾತರವಾಗುತ್ತಿದೆ. ಎಲ್ಲಾ ಕಾರ್ಯಗಳು ಮುಗಿದ ನಂತರ ದೆಹಲಿಯಲ್ಲಿ ಇದ್ದ ತನ್ನ ಮನೆಗೆ ಅವಳು ತೆರಳಿದ್ದಾಳೆ. ಆ ಪುಸ್ತಕವನ್ನು ತೆಗೆಯುತ್ತಾಳೆ.

ಬೇರೆಯವರ ಡೈರಿಯನ್ನು ಕದ್ದು ಓದುವುದು ಮೂರ್ಖತನ ಎಂದು ಆ ಡೈರಿಯಲ್ಲಿ ಲಿಖಿಸಲಾಗಿದೆ. ಅದಾದ ನಂತರ “ಮೇರಿ, ನಿನಗೆ ಈ ಪುಸ್ತಕವನ್ನು ಓದುವ ಮನಸ್ಸು ಬಂದರೆ ನಮ್ಮ ಮನೆಯ ಆಟ್ಟಕ್ಕೆ ಹೋಗಿ ಕುಳಿತುಕೊಂಡು ಓದು ನಿನಗೆ ಸಹಾಯವಾಗುತ್ತದೆ” ಎಂದು ಬರೆದಿರುತ್ತದೆ.

ಮೇರಿಯು ಅವರ ಮನೆಯ ಅಟ್ಟಕ್ಕೆ ಹೋಗಿ ಕುಳಿತುಕೊಳ್ಳುತ್ತಾಳೆ. ಮುಂದೆ ಅವಳು ಓದುತ್ತಾ ಹೋಗುತ್ತಾಳೆ.
ಮನ್ಯುಷ್ಯರಿಗೆ ಎಷ್ಟೊ ವಿಚಿತ್ರವಾದ ಆಸೆಗಳಿರುತ್ತದೆ ಆದರೆ ಅದನ್ನು ಪೂರ್ತಿಮಾಡಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಏಕೆಂದರೆ ನಮ್ಮ ಜೀವನ ಒಂದು ಗಡಿಯಾರದ ತರಹ ಅದು 12ರಿಂದ ಶುರುವಾಗಿ 1 2 3 ಎಂದು 12ಕ್ಕೆ ನಿಲ್ಲುತ್ತದೆ. ಇದು ಎಲ್ಲಾ ಮನ್ಯುಷರಿಗು ಅನ್ವಯದ ಜೀವನ. ಆದರೆ ನನ್ನ ಜೀವನ ಬೇರೆಯಾಗಿತ್ತು ನನ್ನ ಜೀವನ 12ಕ್ಕೆ ಶುರುವಾಗಿ 11 10 9 ಎಂದು 12ಕ್ಕೆ ನಿಲ್ಲುವುದು. ಅರ್ಥವಾಗಲಿಲ್ಲವೆ..? ಓದುತ್ತಾ ಹೋಗಿ.

ಅದರ ಮುಂದಿನ ಪುಟದಲ್ಲಿ ಅದಾ ಇಸ್ತರ್ ಏನನ್ನೊ ಲಿಖಿಸಿದ್ದಳು. ನನ್ನ ಮರದ ಪೆಟ್ಟಿಗೆ ತೆಗಿ ಅದರಲ್ಲಿ ಒಂದು ಗಡಿಯಾರ ಸಿಗುವುದು. ಮೇರಿ ಆ ಗಡಿಯಾರವನ್ನು ತೆಗೆಯುತ್ತಾಳೆ. ಅದನ್ನು ನೋಡಿ ಅವಳಿಗೆ ಆಶ್ಚರ್ಯವಾಗುತ್ತದೆ. ನೋಡಲು ಸಾಮಾನ್ಯವಾಗಿಯೆ ಇದ್ದ ಆ ಗಡಿಯಾರದಲ್ಲಿ ಒಂದು ಬಿನ್ನವಿರುತ್ತದೆ. ಏನೆಂದರೆ ಅದು ಎಲ್ಲಾ ಗಡಿಯಾರಗಳ ತರಹ 12 1 2 ಹಾಗೆ ತಿರುಗುತ್ತಿರುವುದಿಲ್ಲ. ಅದು 12 11 10 ಹೀಗೆ ತಿರುಗುತ್ತಿರುತ್ತದೆ. ಅದನ್ನು ನೋಡಿ ಮತ್ತೆ ಪುಸ್ತಕವನ್ನು ಓದಲು ಶುರು ಮಾಡುತ್ತಾಳೆ.

1900, ಸಂಜೆ 7 ಘಂಟೆ, ಪಣಜಿ, ಗೋವ.
ಬಾರಿನಲ್ಲಿ ಕುಳಿತುಕೊಂಡು ಕುಡಿಯುತ್ತಿದ್ದ ಮಾರ್ಕ್ ಡೇವಿಡ್‍ಸನ್‍ನ ಬಳಿ ಯರೊ ಏನೊ ಪಿಸುಗುಟ್ಟುತಾನೆ. ತಕ್ಷಣ ಎದ್ದು ಬಿದ್ದು ಅವನು ಅಲ್ಲಿಂದ ಓಡುತ್ತಾನೆ. ಅವನು ಸೀದ ಅವನ ಮನೆಗೆ ಓಡಿಹೋಗುತ್ತಾನೆ. ಅಲ್ಲಿ ತನ್ನ ಹೆಂಡತಿ ಮಂಚದ ಮೇಲೆ ಮಲಗಿರುತ್ತಾಳೆ. ಅವಳು ಸತ್ತಿರುತ್ತಾಳೆ. ಒಬ್ಬ ಮಹಿಳೆ ಬಂದು ಅವನ ಎದುರಿಗೆ ನಿಂತುಕೊಂದು ತಲೆ ಅಲ್ಲಾಡಿಸುತ್ತಾಳೆ. ಅವನಿಗೆ ಶಾಕ್ ಆಗುತ್ತದೆ. ತಕ್ಷಣ ಅವಳಿಗೆ ಹುಟ್ಟಿದ್ದ ಮಗುವನ್ನು ನೋಡುತ್ತಾನೆ. ತೀರ ವಿಚಿತ್ರವಾಗಿದ್ದ ಆ ಮಗು ಚಿಕ್ಕ ಮುದುಕನಂತೆ ಕಾಣುತ್ತಿರುತ್ತದೆ. ಇದನ್ನು ನೋಡಿ ಡೇವಿಡ್‍ಸನ್ ಶಾಪ ತಾಗಿದೆ ಎಂದು ಆ ಮಹಿಳೆಗೆ ಹೇಳುತ್ತಾನೆ. ತಕ್ಷಣ ಅವನು ಅಲ್ಲಿಂದ ಆ ಮಗುವನ್ನು ತೆಗೆದುಕೊಂಡು ಓಡುತ್ತಾನೆ. ಆ ಮಗುವನ್ನು ಅವನು ಮಂಡೋವಿ ನದಿಯಲ್ಲಿ ಎಸೆಯಲು ಹೊರಟಿರುತ್ತಾನೆ. ಆದರೆ ಅಲ್ಲಿ ಯಾವುದೊ ಕೊಲೆ ನಡೆದ್ದಿದ್ದರಿಂದ ಪೆÇೀಲೀಸ್‍ಗಳು ಅಲ್ಲಿಯೆ ಇರುತ್ತಾರೆ. ಆಗ ಅದು ಬ್ರಿಟೀಶ್ ಭಾರತ. ಪೆÇೀಲೀಸ್‍ಗಳನ್ನು ನೋಡಿದ ಡೇವಿಡ್‍ಸನ್ ಅಲ್ಲಿಂದ ಪಲಾಯನವಾಗುತ್ತಾನೆ. ಅಲ್ಲಿಂದ 4 ಕಿ.ಮಿ ದೂರದಲ್ಲಿ ಇದ್ದ ಒಂದು ಓಲ್ಡ್ ಏಜ್ ಹೋಮ್‍ನ ಎದುರಿಗೆ ಆ ಮಗುವನ್ನು ಇಟ್ಟು ಜೀಸಸ್ ಸೇವ್ ಹಿಮ್, ಎಂದು ಹೇಳಿ ಹೊರಟುಹೋಗುತ್ತಾನೆ.

ಸುಮಾರು 15 ನಿಮಿಷಗಳ ನಂತರ ಒಬ್ಬಳು ಹುಡುಗಿ ಹಾಗು ಹುಡುಗ ಮುತ್ತಿಟ್ಟುಕೊಳ್ಳುತ್ತಾ ಆ ಓಲ್ಡ್ ಏಜ್ ಹೋಮ್‍ನಿಂದ ಹೊರಬರುತ್ತಾರೆ. ಅಲ್ಲಿ ಆ ಯುವಕಿ ಆ ಮಗುವನ್ನು ನೋಡುತ್ತಾಳೆ. ಅವಳಿಗೆ ಆಶ್ಚರ್ಯವಾಗುತ್ತದೆ. ಭಯವೂ ಆಗುತ್ತದೆ. ಹೇ ಜೀಸಸ್ ಎನ್ನುತ್ತಾನೆ ಆ ಯುವಕ. ಅವನು ನಾನು ಈ ಮಗುವನ್ನು ಪೊಲೀಸ್ ಬಳಿ ಕೊಡುತ್ತೇನೆ ಎನ್ನುತ್ತಾನೆ. ಆದರೆ ಆ ಮಗುವಿನ ಮುಖ ನೋಡಿ ಆ ಮಹಿಳೆಗೆ ಕನಿಕರ ಉಂಟಾಗುತ್ತದೆ. ಆ ಮಗುವನ್ನು ಅವಳು ಎತ್ತುಕೊಂಡು ಓಲ್ಡ್ ಏಜ್ ಹೋಮಿಗೆ ಕರೆದುಕೊಂಡು ಹೋಗುತ್ತಾಳೆ. ಆ ಮಗುವಿಗೆ ಜೀವ ಕೊಡುತ್ತಾಳೆ. ಆ ಮಗುವೆ ನಾನು, ನನ್ನ ಹೆಸರು ಪ್ರಾಣ್, ಪ್ರಾಣ್ ಡೇವಿಡ್‍ಸನ್.
ಮೇರಿ ಓದುವುದನ್ನು ನಿಲ್ಲಿಸುತ್ತಾಳೆ.

ಇದೆಂತಹ ವಿಚಿತ್ರ ಕಥೆ. ಎಂದು ಒಂದು ಸಿಗ್ರೇಟ್ ಅನ್ನು ಹಚ್ಚಿಕೊಂಡು ಮತ್ತೆ ಓದನ್ನು ಮುಂದುವರಿಸುತ್ತಾಳೆ.

ನನಗೆ ಜೀವ ಕೊಟ್ಟ ಆ ಹೆಣ್ಣು, ಮರ್ಲೋವ ಲೋಗನ್, ನನ್ನ ಸಾಕುತಂದೆಯ ಹೆಸರು ಲೋಗನ್ ಚರ್ಚ್ ಎಂದು. ನನ್ನ ಅಮ್ಮ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದಳು. ಅಂದಿನ ಬ್ರಿಟೀಷ್ ಕಾಲದಲ್ಲಿ ಯುದ್ದ ಹಾಗು ಕೆಲಸ ಮಾಡುವ ಬ್ರಿಟೀಷ್ ಪ್ರಜೆಗಳು ತಮ್ಮ ವಯಸ್ಸಾದ ತಂದೆ ತಾಯಂದಿರನ್ನು ಇಲ್ಲಿ ಬಿಟ್ಟು ಹೋಗುತ್ತಿದ್ದರು. ಅವರನ್ನು ನೋಡಿಕೊಳ್ಳುವ ಇಂಚಾರ್ಜ್ ಆಗಿ ಮರ್ಲೋವ ಹಾಗು ಲೋಗನ್ ಚರ್ಚ್ ಕೆಲಸ ಮಾಡುತ್ತಿದ್ದರು. ಆ ಮನೆಯು ಅವರದ್ದೆ. ಹಾಗಾಗಿ ಆ ಚಿಕ್ಕ ಮಗುವನ್ನು ಅವಳು ಒಳಗೆ ಕರೆದುಕೊಂಡು ಹೋಗಿ ಅಲ್ಲಿ ಇದ್ದ ಮುದುಕ ಮುದುಕಿಯರನ್ನು ಕರೆದು ಹೇಳುತ್ತಾಳೆ. ಈ ಮಗು ನನಗೆ ಸಿಕ್ಕಿದ್ದು. ಈ ಮಗು ಇನ್ನಮೇಲಿಂದ ಈ ಮಗು ನನ್ನ ಮಗುವಿನ ತರಹ.

ಈ ಮಗುವಿನ ಹೆಸರೇನು..? ಎಂದು ಅಲ್ಲಿ ಇದ್ದ ಒಬ್ಬ ಮುದುಕ ಕೇಳುತ್ತಾನೆ.
ಆಗ ಅವಳು ಈ ಮಗುವಿಗೆ ಏನೆಂದು ಹೆಸರಿಡಬಹುದು..? ಹಿ ಇಸ್ ಮೈ ಸೌಲ್ ಎಂದು ಮರ್ಲೋವ ಹೇಳುತ್ತಾಳೆ.
ಆಗ ಅಲ್ಲಿ ಇದ್ದ ಒಬ್ಬಳು ಬ್ರಿಟೀಷ್ ಇಂಡಿಯನ್ ಪ್ರಜೆ, ಇಸ್ ಹಿ ಯುವರ್ ಸೌಲ್..? ನೇಮ್ ಹಿಮ್ ಪ್ರಾಣ್ ಎಂದು ಹೇಳಿದಳು. ಪ್ರಾಣ್ ಮೀನ್ಸ್ ಸೌಲ್… ಎಂದು ನನ್ನ ಹೆಸರಿನ ಅರ್ಥ ಹೇಳಿದಳು.
ಸೋ ಹಿಸ್ ನೇಮ್ ಇಸ್ ಪ್ರಾಣ್.. ಎಂದು ಮರ್ಲೋವ ಘೋಶಿಸಿದರು.

ಹೀಗೆ ಒಂದು 5 ವರ್ಷ ಕಳೆಯಿತು. ಈ 5 ವರ್ಷಗಳಲ್ಲಿ ನಾನು ಏನು ಮಾಡಿದೆ ಎಂದು ತಿಳಿದಿರಲಿಲ್ಲ. ನನಗೆ ಲೋಕದ ತಿಳುವಳಿಕೆಯು ಇರಲಿಲ್ಲ. ನನಗೆ ಆಗ ತಿಳಿದದ್ದು ಅಷ್ಟೆ ಬೆಳಿಗ್ಗೆ ರಾತ್ರಿ ತಿಂಡಿ ಅಮ್ಮ ಅಪ್ಪ ಇಷ್ಟೆ. ಇನ್ನೇನು ನನಗೆ ತಿಳಿದಿರಲಿಲ್ಲ. ಕೆಲವು ನನ್ನಂತೆಯೆ ಬಿಳಿ ಕೂದಲಿನ ಮುದುಕ ಮುದುಕಿಯರನ್ನು ನೋಡಿ ಅವರ ಬಳಿ ನೀವು ಇನ್ನೆಷ್ಟು ದಿನ ಬದುಕುತ್ತೀರ..? ಎಂದು ಕೇಳುತ್ತಿದ್ದೆ. ಆಗ ಅವರೆಲ್ಲ ಇನ್ನು 2 ವರ್ಶ ಒಂದು ವರ್ಷ ಎನ್ನುತ್ತಿದ್ದರು. ಆಗ ನಾನು ಇನ್ನು 1 ವರ್ಷ ಬದುಕಬಹುದು ಎಂದುಕೊಳ್ಳುತ್ತಿದ್ದೆ. ಸ್ವಲ್ಪ ಸ್ವಲ್ಪ ಮಾತನಾಡಲು ಬರುತ್ತಿದ್ದ ನನಗೆ ವರ್ಷವೆಂದರೆ ಏನು ಎಂದು ತಿಳಿದುಕೊಳ್ಳಲು ಕಾತರವಿತ್ತು. ಒಂದು ದಿನ ನನ್ನ ತಂದೆಯ ಬಳಿ ಕೇಳಿದೆ.

ಡ್ಯಾಡ್ ವರ್ಷವೆಂದರೆ ಏನು.?
ವರ್ಷ ಎಂದರೆ ವರ್ಷ, ಈಗ ನೋಡು ಒಂದು ಬೆಳಿಗ್ಗೆ ಆಗತ್ತೆ ಮತ್ತೆ ರಾತ್ರಿ ಆಗತ್ತೆ ಅದು ಒಂದು ದಿನ. ಹೀಗೆ ಇಂತಹ 365 ದಿನವಾದರೆ ಅದೆ ಒಂದು ವರ್ಷ. ಎಂದರು.
ನಾನು ಸುಮ್ಮನೆ ನಕ್ಕು ಹೋಗಿಬಿಟ್ಟೆ.

ನನ್ನ ಸಾಕುತಂದೆ ತುಂಬಾ ಸೀದಾ ಮನ್ಯುಷ್ಯ. ಯಾವಾಗಲು ಯಾರೊ ಹೆಣ್ಣು ಕಿರಚುವ ಹಾಡುಗಳನ್ನು ಕೇಳುತ್ತಿದ್ದ ಅವರು ರಾತ್ರಿ ಹೊತ್ತು ಕುಡಿಯುತ್ತಿದ್ದರು. ಅಮ್ಮನ ಜೊತೆಗೆ ಮಲಗುತ್ತಿದ್ದ ನಾನು ಒಂದೊಂದು ದಿನ ನನ್ನನ್ನು ಅಪ್ಪ ಎತ್ತುಕೊಂಡು ಹೋಗಿ ಒಂದು ಅಜ್ಜಿಯ ಬಳಿ ಮಲಗಿಸುತ್ತಿದ್ದರು. ನನಗೇನು ತೊಂದರೆ ಇರಲಿಲ್ಲ. ಸುಮ್ಮನೆ ಮಲಗುತ್ತಿದ್ದೆ.

5 ವರ್ಷ ಕಳೆಯಿತು.
ಈಗ ಈ 5 ವರ್ಷಗಳ ನಂತರ ನನಗೆ ಸ್ವಲ್ಪ ನಡೆಯಲು ಆಗುತ್ತಿತ್ತು. ಆದರೆ ನಾನು ನಡೆಯುತ್ತನೆ ಇರಲ್ಲಿಲ್ಲ. ವೀಲ್ ಚೇರಿನಲ್ಲಿ ಕೂತಿರುತ್ತಿದ್ದೆ. ಈಗ ನನ್ನ ಹಲ್ಲುಗಳು ಸ್ವಲ್ಪ ಸರಿಯಾಗಿದ್ದವು. ಸ್ವಲ್ಪವಷ್ಟೆ. ಒಂದು ದಿನ ನಮ್ಮ ಮನೆಯಲ್ಲಿ ಕೂಟವಿತ್ತು. ಅಲ್ಲಿ ಒಬ್ಬ ಎತ್ತರವಾದ ದಪ್ಪವಾದ ಗಂಡಸು ನನಗೆ ಕಾಣಿಸಿದರು. ಅವರ ಮುಖ ಬಹಳ ಸೌಮ್ಯವಾಗಿತ್ತು. ನಾನು ಹೆಚ್ಚಾಗಿ ಅಂತಹ ಕೂಟಗಳಿಗೆ ಹೋಗುತ್ತಿರಲಿಲ್ಲ. ಆದರೆ ಅವತ್ತು ಹೋದೆ. ಆ ವ್ಯಕ್ತಿ ನನ್ನ ಬಳಿಗೆ ಬಂದರು.
ಹೈ ಪ್ರಾಣ್, ನನ್ನ ಹೆಸರು ಡೇವಿಡ್‍ಸನ್ ಎಂದು.
ಅದನ್ನು ಹೇಳುತ್ತಾ ಅವರ ಕಣ್ಣಲ್ಲಿ ನೀರು ತುಂಬಿತ್ತು.
ನನಗೆ ಅದೇನು ತಿಳಿಯಲಿಲ್ಲ. ನಾನು ಹೈ ಎಂದೆ.
ಅವರು ತಮ್ಮ ಜೇಬಿನಿಂದ ಏನೊ ಒಂದು ಡಬ್ಬಿಯನ್ನು ತೆಗೆದು ನನಗೆ ಕೊಟ್ಟರು. ಇದನ್ನು ಇಟ್ಟುಕೊ ನನ್ನ ಗಿಫ್ಟು ಇದು ಎಂದು ಹೇಳಿ ನನ್ನ ಅಮ್ಮನ ಬಳಿ ಆ ಗಿಫ್ಟ್ ಯಾವಾಗಲು ಅವನ ಕೈಯಲ್ಲೆ ಇರಬೇಕು ನೋಡಿಕೊಳ್ಳಿ ಎಂದು ಹೇಳಿ ಹೋಗಿಬಿಟ್ಟರು.

ನನ್ನ ತಾಯಿ ನನ್ನ ಬಳಿಗೆ ಬಂದು ಪ್ರಾಣ್ ಅದನ್ನು ಇಲ್ಲಿ ಕೊಡು. ನನಗೆ ಯಾವಾಗ ಕೊಡಬೇಕು ಎಂದು ತಿಳಿದಿದೆ ಅವಾಗ ನೀಡುತ್ತೇನೆ ಎಂದು ನನ್ನ ಬಳಿ ಇದ್ದ ಡಬ್ಬ ತೆಗೆದುಕೊಂಡರು.
ಕೂಟ ಮುಗಿದ ನಂತರ ನನ್ನ ತಾಯಿಯ ಬಳಿ ಒಬ್ಬರು ಬಂದು, ನೀವು ಏಕೆ ಪ್ರಾಣ್‍ನನ್ನು ಚೈತನ್ಯ ಗುರೂಜಿಯ ಬಳಿ ಕರೆದುಕೊಂಡು ಹೋಗಬಾರದು..?
ನನಗೆ ಅವರ ಮೇಲೆಲ್ಲ ನಂಬಿಕೆಯಿಲ್ಲ, ಎಂದರು ನನ್ನ ತಾಯಿ.
ನೀವು ಒಂದು ಸಲ ಹೋಗಿಬನ್ನಿ ಆಮೇಲೆ ಮಾತನಾಡಿ ಎಂದರು.
ಸರಿ ಎಂದು ನನ್ನ ಅಮ್ಮ ಒಪ್ಪಿದರು.
ನಾನು ನನ್ನ ಮನೆಯ ಬಾಗಿಲಿನಿಂದ ಹೊರಗೆ ಅಲ್ಲಿಯವರೆಗು ಹೋಗೇ ಇರಲಿಲ್ಲ. ಇವತ್ತು ಅಂತಹ ಭಾಗ್ಯ ನನಗೆ ಬಂದಿತ್ತು. ನನ್ನನ್ನು ಎತ್ತಿಕೊಂಡು ನನ್ನ ತಂದೆ ತಾಯಿ ಚೈತನ್ಯ ಗುರೂಜಿಗಳ ಬಳಿಗೆ ಹೋದರು.

ನನಗೆ ಅಲ್ಲೇನು ನಡೆಯಿತು ಎಂದು ಸ್ವಲ್ಪ ಸ್ವಲ್ಪ ಮಾತ್ರ ನೆನಪಿರುವುದು. ಒಟ್ಟಿನಲ್ಲಿ ಅಲ್ಲಿಂದ ಬರುತ್ತ ನಾನು ಸಂಪೂರ್ಣ ನಡೆಯಲು ಕಲೆತಿದ್ದೆ!
ಅಲ್ಲಿ ಏನು ನಡೆಯಿತು ಎಂದು ನನಗೆ ಸುಮಾರು ವರ್ಷಗಳ ನಂತರ ತಿಳಿಯಿತು. ಅದನ್ನು ಆಮೇಲೆ ಹೇಳುತ್ತೇನೆ.

ಹೀಗೆ ಮತ್ತೂ 5 ವರ್ಷಕಳೆಯಿತು. ಈಗ ನಾನು ನಡೆದಾಡುತ್ತಿದ್ದೆ ಆದರೆ ಕೋಲಿನ ಸಹಾಯದೊಂದಿಗೆ. ಹಾಗು ನನ್ನಲ್ಲಿ ಸ್ವಲ್ಪ ಶಕ್ತಿ ಬಂದಂತೆ ಕಂಡುಬರುತ್ತಿತ್ತು. ಆಗ ನಮ್ಮ ಮನೆಗೆ ಒಂದು ದಿನ ಒಂದು ಅಜ್ಜಿ ಬಂದರು.
ಹೈ ಪ್ರಾಣ್, ಎಂದರು.
ನಾನು ಹೈ ಎಂದೆ.
ನಿನ್ನ ಜೊತೆಗೆ ಆಟವಾಡಲು ನೋಡು ನಾನು ನನ್ನ ಮೊಮ್ಮಗಳನ್ನು ಕರೆದುಕೊಂಡು ಬಂದ್ದಿದ್ದೇನೆ ಎಂದರು.
ನಾನು ನೋಡಿದೆ. ಅವಳು ನಡೆದುಕೊಂಡು ಬರುತ್ತಿದ್ದಳು.
ಹೈ ಎಂದಳು.
ಹೈ ಎಂದೆ ನಾನು.
ನನ್ನ ಹೆಸರು ಅದಾ ಇಸ್ತರ್, ನಿಮ್ಮ ಹೆಸರೇನು..?
ನನ್ನ ಹೆಸರು ಪ್ರಾಣ್, ಎಂದೆ.
ನೈಸ್ ನೇಮ್ ಎಂದಳು ಅವಳು.
ನಾವಿಬ್ಬರು ಸ್ವಲ್ಪ ಹೊತ್ತು ಆಟವಾಡಿದೆವು. ಆಮೇಲೆ ಸಂಜೆ ಊಟ ಮಾಡಿದೆವು.
ಊಟ ಮಾಡಿ ನಾನು ಮಲಗಲು ಹೋದೆ. ನಿದ್ದೆ ಮಾಡುತ್ತಿರುವಾಗ ಅವಳು ಪ್ರಾಣ ಪ್ರಾಣ ಎಂದು ನನ್ನನ್ನು ಎಬ್ಬಿಸಿದಳು.
ನನ್ನ ಹೆಸರು ಪ್ರಾಣ ಅಲ್ಲ ಪ್ರಾಣ್ ಅಷ್ಟೆ ಎಂದೆ.
ಸರಿ ಬಾ ಎಂದು ನನ್ನನ್ನು ಕರೆದುಕೊಂಡು ಹೋದಳು.
ಮಹಡಿಯ ಮೇಲೆ ನಾವಿಬ್ಬರು ಹೋದೆವು.
ನಿನಗೆಶ್ಟು ವರ್ಷ..?
ಗೊತ್ತಿಲ್ಲ ಅದಾ, ನಿನಗೆ..?
ನನಗೆ 8 ವರ್ಶ, ನೀನು ಮುದುಕನ..?
ಹಾ, ಹಾಗೆ ಏನೊ ನನಗೆ ತಿಳಿಯದು.
ನಾನು ನಿನ್ನನ್ನು ಮುಟ್ಟಲಾ..?
ಹಾ ಎಂದೆ.
ಅವಳು ಮುಟ್ಟಿದ ಕ್ಷಣ ನನ್ನ ಮೈಯೆಲ್ಲ ರೋಮಾಂಚನವಾಯಿತು.

ಅಷ್ಟರಲ್ಲೆ “ಅದಾ.. ಎಲ್ಲಿದ್ದೀಯ ನೀನು?” ಎಂದು ಧ್ವನಿ ಕೇಳಿಸಿತು.
ಅದಾ ಅಲ್ಲಿಂದ ಓಡಿಹೋದಳು.

ಮೇರಿ ಮತ್ತೆ ಓದು ನಿಲ್ಲಿಸಿದಳು.

 

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑