ಅರೆರೆ!! ಕಣ್ಣೆದುರೇ ತಪ್ಪಿಸ್ಕೊಳ್ತಿದಾನೆ ಕಳ್ಳ... ಹಿಡಿಯಲಿಕ್ಕಾಗೋಲ್ಲ:( ಈ ವರೆಗೆ ಅವನನ್ನ ಹಿಡಿದವರು, ತಡೆದವರು ಯಾರಾದರೂ ಇದ್ದಾರಾ? ನಮ್ಮ ದಿನದಿನದ ಆಯಸ್ಸನ್ನ ಕದ್ದು ಓಡುತ್ತಲೇ ಇರುವ ಇವನ ಬೆನ್ನು ಹತ್ತಿ ಗೆದ್ದವರು ಯಾರು? ಆಫೀಸಲ್ಲಿ ಹೊಸ ಡೈರಿ ಕೊಟ್ಟರು. ವರ್ಷ ಮುಗಿಯುತ್ತಿದೆ ಅಂದರು. ಮೊಬೈಲಿನ ತುಂಬ ಅಡ್ವಾನ್ಸ್ ಮೆಸೇಜುಗಳು... ೨೦೦೮ಕ್ಕೆ ಟಾಟಾ, ೨೦೦೯ಕ್ಕೆ ವೆಲ್ ಕಮ್! ಮೊನ್ನೆ ಮೊನ್ನೆ ಹೊಸ ವರ್ಷದ ಶುಭಾಶಯ ಹೇಳಿದ್ದ ನೆನಪು. ಏನೆಲ್ಲ ಆಗಿಹೋಯ್ತು ಈ ವರ್ಷದಲ್ಲಿ? ನಾನು ಹೆಚ್ಚು ಕಾಯಿಲೆ ಬೀಳಲಿಲ್ಲ (ಅಮ್ಮನ... Continue Reading →
ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…
“ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…” ಒಂದೇ ಸಮ ಬಡ್ಕೊಳ್ತಿತ್ತು ಫೋನು. ಅದು ನೀನಿಲ್ಲದ ಮೊದಲ ಭಾನುವಾರ. ಈವರೆಗೆ ನೂರಿಪ್ಪತ್ತೆಂಟು ಭಾನುವಾರಗಳನ್ನ ನಾವು ಒಟ್ಟಿಗೆ ಕಳೆದಿದ್ದೆವು, ಒಮ್ಮೆಯೂ ತಪ್ಪದ ಹಾಗೆ. ನಾನು ಆರು ದಿನವೂ ಬರವಣಿಗೆಯ ಬದುಕಲ್ಲಿ ಹೈರಾಣಾಗಿರುತ್ತಿದ್ದೆ. ನೀನು ಮೀಸೆ ಬೆಳೆದ ಮಕ್ಕಳೆದುರು, ಪುಸ್ತಕದಲ್ಲಿರದ ಚರಿತ್ರೆಯ ಪಾಠವನ್ನೆಲ್ಲ ಹೇಳೋದ್ರಲ್ಲಿ ಸುಸ್ತು ಹೊಡೆದಿರುತ್ತಿದ್ದೆ. ಹೌದಲ್ಲಾ!? ಪಾಠ ಮಾಡಯ್ಯಾ ಅಂದ್ರೆ ನೀನು ಪಾಠದಲ್ಲಿರದ್ದನ್ನೆಲ್ಲ ಹೇಳ್ತಾ ಮೈಮರೆತುಬಿಡ್ತಿದ್ದೆ. ಕ್ಯಾಂಪಸ್ಸಿನ ತುಂಬೆಲ್ಲ... Continue Reading →
ಮತ್ತೊಂದು ಸಿನೆಮಾ ಮತ್ತು ನನ್ನ ತಲೆಬಿಸಿ…
ಒಟ್ಟಾರೆ ಬಂಗಾಳದ ಪ್ರವಾಸ ಒಂದೆರಡು ಡಾಕ್ಯುಮೆಂಟರಿಗಳನ್ನೂ, ಮೂರ್ನಾಲ್ಕು ಪ್ರಶಸ್ತಿ ವಿಜೇತ ಸಿನೆಮಾಗಳನ್ನೂ ನೋಡಿದ ಅನುಭವ ಮೂಡಿಸಿತ್ತು. ಹೀಗಿರುವಾಗ ಮೊನ್ನೆ ಭಾನುವಾರ ‘ಹಾಗೆ ಸುಮ್ಮನೇ ಒಂದು ಮಸಾಲಾ ಸಿನೆಮಾ ನೋಡುವ’ ಅಂದುಕೊಂಡವಳಿಗೆ ತೋಚಿದ್ದು, ‘ರಬ್ ನೆ ಬನಾದಿ ಜೋಡಿ’. ಪಕ್ಕಾ ಮಿಡಲ್ ಕ್ಲಾಸ್ ಪೋಸಿನ ಶಾರುಖ್ ಒಂದೇ ನೋಟಕ್ಕೆ ಸೆಳೆದುಬಿಟ್ಟ. ಅವನ ನಟನೆಯನ್ನ ಕಣ್ತುಂಬಿಸಿಕೊಳ್ಳುವ ಸಡಗರದಲ್ಲಿ ಹೀರೋಯಿನ್ನಿನ ಹೆಸರೂ ಯಾಕೋ ಗಮನಿಸಲಾರದೆ ಹೋದೆ ನಾನು. ಮುದ್ದಾಗಿದ್ದಳು ಹುಡುಗಿ. ಆದರೂ.... ಸಿನೆಮಾ ನೋಡಿದೆನಾ... ಯಾಕಾದರೂ ನೋಡಿದೆನೋ? ಒಳ್ಳೆ ‘ಭಾಮಿನಿ ಷಟ್ಪದಿ’... Continue Reading →
ತುಂಬಾ ಸಿಹಿ, ಸ್ವಲ್ಪ ಕಹಿ- ನನ್ನ ಪ್ರವಾಸ ಕಥನ!
ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು. ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ.... ಆಆಆಆಆ.......... ಖ್ಷೀ....... ಉಹ್... ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು! ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು... Continue Reading →
ದಕ್ಷಿಣೇಶ್ವರ ಯಾತ್ರೆಗೆ…
ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ... ( ಕುವೆಂಪು ರಚನೆ) ಸಾಕಾಗಿದೆ. ಒಂದು ಹತ್ತು ದಿನ ತಣ್ಣಗೆ ನನ್ನ ನೆಚ್ಚಿನ ಸ್ಥಳದಲ್ಲಿ ಇದ್ದು ಬರ್ತೇನೆ. ಪರಮಹಂಸರು, ಶಾರದಾ ದೇವಿ, ವಿವೇಕಾನಂದರು ಓಡಾಡಿದ ಜಾಗಗಳನ್ನ ಕಣ್ತುಂಬಿಸಿಕೊಂಡು ಬರ್ತೇನೆ. ಕುವೆಂಪು ಹಾಡಿದ್ದಂತೆ ಪ್ರತಿ ದಿನವೂ ಇದನ್ನು ನಾನು ಹಾಡುವವಳೇ. ಹಾಗೆಂದೇ ಮತ್ತೆ ಕೈಬೀಸಿ ಕರೆಯುತ್ತಿರುವ ದಕ್ಷಿಣೇಶ್ವರದತ್ತ ಪ್ರಯಾಣ. ನಾಳೆ ಹೊರಟಿದ್ದೇನೆ. ಬಂದಮೇಲೆ, ಕುವೆಂಪು ಅವರ ಅಧ್ಯಾತ್ಮಿಕ ಆಸಕ್ತಿಯ ಬಗ್ಗೆ, ಅವರು ರಾಮಕೃಷ್ಣ... Continue Reading →
ಹೀಗೊಂದು ಆಟದ ಪ್ರಸಂಗ…
ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ! ನಾರೀ ಮಣಿಯೆ ಬಾರೇ… ಮಣಿಯೆ ಬಾರೇ… ಬಾ ಬಾರೇ… ಛೀ! ಪಾಪಿ!! ಸರಿ ದೂರ… ಬಾ ಬಾರೇ… ಮುಖ ತೋರೇ… ದುರುಳ, ಸರಿ ದೂರ…! ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು, ಪಟ್ಟು, ಕುಣಿತ… ಅಬ್ಬ! ಅವನೆದುರು ಸ್ತ್ರೀ ವೇಷದ ದಾಮೋದರ- ದಾಮೂ ಹುದುಗಿಹೋದಂತಿತ್ತು. ದಾಮೂ ಪೀಚಲು ಹುಡುಗ. ದನಿಯೂ ಕೀರಲು. ಸ್ತ್ರೀ... Continue Reading →
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ…
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ ಈ ಬೆಳಗನ್ನ ಬಲಿಕೊಡಲೇಕೆ ನಾನು? ಎಷ್ಟೊಂದು ಕೆಲಸವಿದೆ, ಕಳೆದ ಫೈಲು ಹುಡುಕಬೇಕು ನನ್ನ ಜಾಯಮಾನ ಗೊತ್ತಲ್ಲ? ಕಳಕೊಳ್ಳುತ್ತಲೇ ಇರುವುದು… ನಿನ್ನನೆಲ್ಲಿ ಹುಡುಕಲಿ ಹೇಳು? ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ, ಅದೆ ಮಾತು, ಅದೆ ನಗು ಅದೆ ಅದೇ ದೇಹ. ಅದರೊಳಗೆ ನೀನಿದ್ದೆ, ಎಲ್ಲಿ ಹೋದೆ!? ಕಾಲಮೇಲೆ ನಿಲ್ಲುವ ತವಕಕ್ಕೆ, ಕಾಲು ಸೋತು ಹೋಗಿದೆ ನನ್ನ ಹೊಕ್ಕುಕ್ಕಿಸುತ್ತಿದ್ದ ಪ್ರೀತಿ ಸೊರಗಿ ಸೋಲಿಸುತಿದೆ ಯಾಕೆ? ದಣಿದು ಬಂದ ಪ್ರತಿ ಸಂಜೆ ತಪ್ಪದೆ ನಡೆಯುವ... Continue Reading →
`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….
ಕನ್ನಡದ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋ’ ಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡು- ಹದಿಮೂರು ವರ್ಷಗಳ ನಂತರ ಬಂದು ವ್ಯಾಜ್ಯ ಹೂಡಿದ್ದನ್ನ ಅವರು ’ಪರಿಸರದ ಕತೆ’ಯಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ನನ್ನ ಗೆಳೆಯನಿಗೂ ಇಂಥದೇ ಅನುಭವ ಆಯಿತು. ಅಂವ ಬರೆದ ಸಾಮತಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡ ಮಹಾಶಯರೊಬ್ಬರು ’ನನ್ನ ಕತೆ ಯಾಕೆ ಬರೆದೆ? ನಾನೇನೂ ಅಂಥವ ಅಲ್ಲ’... Continue Reading →
ಕಪ್ಪು ಪಟ್ಟಿ- ಪ್ರತಿರೋಧ
ಬ್ಲಾಗ್ಗೆಳತಿ ನೀಲಾಂಜಲದ ಸೌಪರ್ಣಿಕಾ ಬಹಳ ಒಳ್ಳೆಯ ಸಲಹೆ ನೀಡಿದ್ದಾರೆ. ಭಯೋತ್ಪಾದಕರ ಅಟಾಟೋಪ ನಡೆದು ಎರಡು ದಿನಕ್ಕೆಲ್ಲ ಅದನ್ನು ಮರೆತುಬಿಡುವ ನಾವು ನಿರಂತರ ಎಚ್ಚರಿಕೆಯನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ, ಸದಾ ನಮ್ಮ ಜವಾಬ್ದಾರಿಯನ್ನು ನೆನಪಿಟ್ಟುಕೊಳ್ಳಲು ಇದು ಅಗತ್ಯವೂ ಹೌದು. ಸೌಪರ್ಣಿಕಾ ಅವರ ಸಲಹೆ ನನಗಿಷ್ಟವಾಗಿ, ನಾನು ಅದರಂತೆ ಮಾಡಿದ್ದೇನೆ. ನಿಮಗೂ ಹೌದೆನಿಸಿದಲ್ಲಿ, ಮಾಡಲೇನಡ್ಡಿ?
ಮೊದಲು, ಬಣ್ಣದ ಕನ್ನಡಕಗಳನ್ನು ಕಳಚಿಡಿ
ಕ್ಷಮಿಸಿ. ಮುಂಬಯ್ ನರಮೇಧಕ್ಕೆ ಸಂಬಂಧಿಸಿದಂತೆ ನನ್ನ ಕೊನೆಯ ಪ್ರತಿಕ್ರಿಯೆ ಎಂದು ಹಿಂದಿನ ಪೋಸ್ಟಿನಲ್ಲಿ ಹೇಳಿಕೊಂಡಿದ್ದೆ. ಆದರೆ ಸಾಧ್ಯವಾಗುತ್ತಿಲ್ಲ. ಯಾವತ್ತೂ ಭಯೋತ್ಪಾದಕರ ಸಂಗತಿ ಹೀಗೆ ವಿಷಯಾಂತರಗೊಳ್ಳುತ್ತ ಸಾಗಿ, ನಮ್ಮ ನಮ್ಮ ನಡುವಿನ ಗಲಭೆಯಾಗಿ ಉಳಿದು ಅಸಲು ಸಂಗತಿ ಡೈಲ್ಯೂಟ್ ಆಗಿಹೋಗುತ್ತದೆ. ಇಲ್ಲಿ, ಪೀರ್ ಭಾಷಾ ಅವರ ಪ್ರತಿಕ್ರಿಯೆ ಇದೆ. ಅವನ್ನು ಯಥಾವತ್ತಾಗಿ ಹಾಕಿದ್ದೇನೆ. ಜೊತೆಗೆ ನನ್ನ ಪ್ರತ್ಯುತ್ತರವನ್ನೂ. ಗಾಳಿಯ ಜತೆ ಗುದ್ದಾಡಿ ಪ್ರಯೋಜನವಿಲ್ಲವೆಂದು ಈಗಾಗಲೇ ಅರಿವಾಗಿದ್ದರೂ ಮತ್ತೊಂದು ಹುಂಬ ಪ್ರಯತ್ನ ಮಾಡುತ್ತ, ಈ ಲೇಖನ ಸರಣಿಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.... Continue Reading →
