ಜೊತೆಗಿದ್ದೇ ಕಾಡುವ ಎನಿಮಿ

`ಓಹ್! ಅವ್ಳಾ? ಅದೊಂಥರಾ ವಿಚಿತ್ರ ಹೆಣ್ಣು. ನಾನಂತೂ ಇಚೀಚೆಗೆ ಅವಳ ಜತೆ ಬೆರೆಯೋದೇ ಬಿಟ್ಟಿದೀನಿ' ಅಂತ ತನ್ನ ಗೆಳತಿಯ ಬಗ್ಗೆ ಕಮೆಂಟ್ ಮಾಡೋ ಹುಡುಗಿ, ವಿಂಡೋ ಶಾಪಿಂಗ್‌ಗೆ ಹೋಗೋದು ಅವಳೊಟ್ಟಿಗೇನೇ. ಅವಳ ಎಲ್ಲಾ ಪ್ರೋಗ್ರಾಮ್‌ಗಳೂ ಇವಳ ಡೈರಿಯಂತೆ ಫಿಕ್ಸ್ ಆಗುತ್ತೆ. ಇಬ್ಬರಲ್ಲಿ ಯಾರಾದರೂ ಒಬ್ಬರೇ ಕಾಣಸಿಕ್ಕರೆನ್ನಿ, ಅದೊಂದು ಅಸಂಗತ ವಿಷಯ ಅನ್ನುವಂತೆ ಅಪನಂಬಿಕೆಯಿಂದ ವಿಚಾರಿಸಿಕೊಳ್ಳುತ್ತಾರೆ ಉಳಿದವರು. ಹೊರನೋಟಕ್ಕೆ ಅವರಿಬ್ಬರು ಅಷ್ಟೊಂದು ಖಾಸಾಖಾಸಾ. ಹಾಗಿದ್ದೂ ಅವರಲ್ಲೊಬ್ಬಳು ತನ್ನ ಗೆಳತಿ ಬಗ್ಗೆ ಹಾಗೆಲ್ಲ ಹೇಳಿದ್ದು ಯಾಕೆ? ಈ ಫ್ರೆಂಡ್‌ನಲ್ಲೊಬ್ಬಳು ಹೆಸರುಗೆಡಿಸುವ... Continue Reading →

ಎಮೋಷನಲ್ ಅತ್ಯಾಚಾರ

ಯಾರದ್ದೇ ಪರ್ಸನಾಲಿಟಿ ತನ್ನಷ್ಟಕ್ಕೆ ತಾನು ಪೂರ್ಣ ಅನ್ನಿಸಿಕೊಳ್ಳಬೇಕಾದರೆ ಅವರಿಗೆ ಅವರದ್ದೇ ಆದ ಒಂದು ಸ್ಪೇಸ್ ಇರಬೇಕು. ಅವರವರ ಖಾಸಗಿ ಭಾವನೆಗಳಿಗೆ, ಅನ್ನಿಸಿಕೆಗಳನ್ನ ಗುಟ್ಟಾಗಿಟ್ಟುಕೊಳ್ಳಲು, ತಮ್ಮ ಬಯಕೆಗಳನ್ನ ಮನದಟ್ಟು ಮಾಡಿಕೊಂಡು ಅದರಂತೆ ಯೋಜನೆ ಹಾಕಿಕೊಳ್ಳಲು- ಇಂಥವಕ್ಕೆಲ್ಲ ಒಂದು ಪ್ರೈವೇಟ್ ರೂಮ್‌ನಂಥ ಜಾಗ ವ್ಯಕ್ತಿತ್ವದೊಳಗೆ ಸಹಜವಾಗಿ ಇರಬೇಕು. ಆದರೆ ಎಲ್ಲರಿಗೂ ಇಂತಹ ಅವಕಾಶ ದೊರಕುವುದು ಕಷ್ಟ. ಅದರಲ್ಲೂ ಹೆಚ್ಚಿನಂಶ ಹೆಣ್ಣುಗಳಿಗೆ ಇಂಥ ಖಾಸಗಿ ಕೋಣೆ ಕನಸಿನ ಮಾತೇ ಸರಿ. ಅವರ ಹೊರವಲಯದ ಬದುಕಲ್ಲಿ ಹೇಗೋ ಹಾಗೇ ಒಳಗಿನ ಬದುಕಲ್ಲೂ ಅತಿಕ್ರಮ... Continue Reading →

ಎಂದೆಂದಿಗೂ ಸಲ್ಲುವ ’ಎದೆಗೆ ಬಿದ್ದ ಅಕ್ಷರ’

ಹಾಗೆಂದು ಈ ಪುಸ್ತಕದ ಅಂಶಗಳೆಲ್ಲವನ್ನೂ ಒಪ್ಪಲೇಬೇಕು, ಹಿರಿಯರೆಂಬ ಕಾರಣಕ್ಕೆ ಆರಾಧ್ಯ ಭಾವದಿಂದ ಕಾಣಬೇಕೆಂದೇನೂ ಇಲ್ಲ. ಮುಂದಿನ ಚರ್ಚೆಗೆ ಗ್ರಾಸವಾಗಲಿ ಎಂದಾದರೂ ಒಂದು ತಲೆಮಾರಿನ ಚಿಂತನಾಕ್ರಮ ಹೇಗಿತ್ತೆಂಬ ಪರಿಚಯಕ್ಕಾಗಿಯಾದರೂ ಅದರ ಅಗತ್ಯವಿದೆಯಷ್ಟೆ. ಇಂದಿನ ತುರ್ತಿಗೆ ಸಲ್ಲುವ ಪುಸ್ತಕ ಈ ಹೊತ್ತು ಯಾವುದಿದೆ? ಯೋಚಿಸಲು ಕುಳಿತರೆ ಎಲ್ಲಕ್ಕಿಂತ ಮೊದಲು ತೋಚುವುದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’. ಇತ್ತೀಚಿನ ಕೆಲ ತಿಂಗಳುಗಳಿಂದ ಸಂವೇದನಾಶೀಲ ಓದುಗರ ವಲಯದಲ್ಲಿ ಒಂದು ಕೋಲಾಹಲವನ್ನೆ ಎಬ್ಬಿಸಿದ ಕೃತಿ ಇದು. ಮತ್ತಷ್ಟು ಚರ್ಚೆಗೆ ಒದಗಬೇಕಿತ್ತು ಎನ್ನಿಸಿದರೂ ಇಂದಿನ... Continue Reading →

ದೇವದಾಸ @ ಸೆಕೆಂಡ್ ಪಿಯುಸಿ

ಕಾಲೇಜ್ಗೋದ್ರೆ ಲವ್ ಆಗತ್ತೆ! ಹಾಗಂತ ಬಹಳಷ್ಟು ಹುಡುಗರು ಅಂದ್ಕೊಂಡ್‌ಬಿಟ್ಟಿರ್ತಾರೆ. ಓದು ಬರಹ ಎಲ್ಲಾ ಸರಿ, ಅಷ್ಟರ ನಡುವೇನೂ ಅವರ ಕಣ್ಣುಗಳು ತಮ್ಮನ್ನ ನೋಡಿ ನಾಚ್ಕೊಳ್ಬಹುದಾದ, ಮೆಲ್ಲಗೆ ನಗಬಹುದಾದ ಹುಡುಗಿಯನ್ನ ಹುಡುಕ್ತಿರುತ್ತವೆ. ಯಾವುದೇ ಸಿನಿಮಾದಲ್ಲಿ ನೋಡಿರಬಹುದಾದ ಹೀರೋ ಥರ ತಾನು ಹೇಗೆಲ್ಲ ಹುಡುಗೀನ್ನ ಪ್ರಪೋಸ್ ಮಾಡಬಹುದು? ಅದಕ್ಕಿಂತ ಮುಂಚೆ ಅವಳು ತನಗೆ ಎಲ್ಲಿ, ಯಾವಾಗ, ಯಾವ ಸೀನ್‌ನಂತೆ ತಾನೇ ನನ್ನ ಪ್ರೇಮಿ ಅಂತ ಸಾಬೀತು ಮಾಡಬಹುದು?ಅನ್ನುವೆಲ್ಲ ಯೋಚನೆ ನಶೆಯಂತೆ ಮುತ್ತಿಕ್ಕುತ್ತ ಇರುತ್ತದೆ. ಹಾಗಿರುತ್ತ ಇರುವಾಗ ಕಾಲ್ತೊಡರಿದ ಯಾರದೋ ಇಯರ್... Continue Reading →

ನೀನು ಚೇಂಜ್ ಆಗಿದ್ದೀಯ!

ಪ್ರತಿ ಸಂಜೆ ಅಂವ ಕರೆಕ್ಟಾಗಿ ಇಂತಿಷ್ಟೇ ಸಮಯಕ್ಕೆ ಮನೆಗೆ ಬರ್ತಾನೆ. ಅವನು ಗೇಟು ತೆಗೆದು, ಅಂಗಳದುದ್ದ ನಡೆಯುತ್ತಾ ಇನ್ನೇನು ಹೊಸ್ತಿಲು ತಲುಪಿ ಕದ ತಟ್ಟಬೇಕು, ಅವಳ ಮುಗುಳ್ನಗು ಕದ ತೆರೆಯುತ್ತದೆ. ಅವರ ಮದುವೆಯಾದ ಮೊದಲ ದಿನದಿಂದ ಅಂವ ರಿಟೈರ್ ಆದ ದಿನದವರೆಗೂ ಹಾಗೇನೇ. ಒಂದು ದಿನವೂ ಈ ಸೀನ್ ತಪ್ಪಿದ್ದಲಿಲ್ಲ. ಆಶ್ಚರ್ಯವಾಗುತ್ತೆ ಅಲ್ವಾ? ಇದು ಭಾಗ್‌ಬನ್ ಸಿನಿಮಾ. ನಿಜ ಲೈಫಲ್ಲಿ ಈ ಥರದ್ದು ಇಲ್ಲವೇ ಇಲ್ಲ ಅಂತ ಹೇಳಬಹುದೇನೋ. ಆದ್ರೆ, ಮೊದಲ ದಿನದ ಹಾಗೇ ಪ್ರತಿ ದಿನವೂ... Continue Reading →

ಚೆಂದಕ್ಕೆ ಮಣೆ… ಯಾರು ಹೊಣೆ!?

ಯಾವುದೋ ಒಂದು ಕಾಂಪಿಟೇಶನ್. ಅಂತಿಮ ಸುತ್ತಿಗೆ ಬಂದಿದೆ. ಅಲ್ಲಿ ಇಬ್ಬರು ಸಮಾನ ಅರ್ಹತೆಯ ಹುಡುಗಿಯರು. ಇಬ್ಬರೂ ಒಬ್ಬರಿಗೊಬ್ಬರು ಸವ್ವಾಸೇರು. ಇನ್ನು ಚೀಟಿ ಹಾಕಿ ವಿನ್ನರ್ ಅನ್ನು ಆರಿಸಬೇಕಷ್ಟೆ. ಆ ಇಬ್ಬರಲ್ಲಿ ಒಬ್ಬಳು ಬಹಳ ಚೆಂದ ಡ್ರೆಸ್ ಮಾಡಿಕೊಂಡಿದ್ದಾಳೆ, ಮತ್ತೊಬ್ಬಳದು ಸಾಧಾರಣವಾಗಿದೆ. ಆ ಸ್ಪರ್ಧೆಯಲ್ಲಿ ಅದಕ್ಕೆನೂ ಮಹತ್ವವಿಲ್ಲ. ಆದರೂ ನೋಡುತ್ತ ಕುಳಿತವರಲ್ಲಿ ಬಹುಪಾಲು ಜನಕ್ಕೆ ಚೆಂದದ ಡ್ರೆಸ್ಸಿನವಳು ಗೆಲ್ಲಲೆಂಬ ಮನಸ್ಸು. ಅವರಲ್ಲಿ ನಾವು ಸೇರಿದ್ದರೂ ಆಶ್ಚರ್ಯ ಪಡಬೇಕಿಲ್ಲ. ಚೆಂದಕ್ಕೇ ಬಹುಮತ ಅನ್ನೋದನ್ನ ಹೇಳುವುದಕ್ಕೆ ಇದೊಂದು ತೀರ ಸರಳ ಉದಾಹರಣೆಯಷ್ಟೆ.... Continue Reading →

ಅಪ್ಪನಂಥ ಹುಡುಗ ಬೇಕು!

"ನಂಗೆ ಅಪ್ಪನಂಥ ಹುಡುಗ ಬೇಕು!" ಇಂಥಾ ಹಂಬಲ ಅಪರೂಪದ್ದೇನಲ್ಲ. ಆದರೆ ಮೇಲರಿವಿಗೆ ಬಂದಿರೋದಿಲ್ಲ ಅಷ್ಟೆ. ಮದುವೆಗೆ ಸಿದ್ಧವಾಗಿ ನಿಂತಾಗಿನಿಂದ ಗಂಡುಗಳಲ್ಲಿ `ಅಪ್ಪ'ನ ಹುಡುಕಾಟಕ್ಕೆ ತೊಡಗಿರ್ತಾರೆ `ಡ್ಯಾಡೀಸ್ ಡಾರ್ಲಿಂಗ್' ಆಗಿ ಬೆಳೆದ ಹೆಣ್ಮಕ್ಕಳು. ಇದನ್ನ ಬಹಳ ಹಿಂದೆಯೇ ಸಿಗ್ಮಂಡ್ ಫ್ರ್ಯಾಯ್ಡ್ ಉದ್ದುದ್ದ ಥಿಯರಿ ಮೂಲಕ ಹೇಳಿಯಾಗಿದೆ. ಆದರೆ ತಾವು ಹೀಗೆ ಇಂಥಾದ್ದೇ ಹುಡುಕಾಟದಲ್ಲಿ ಇದ್ದೀವಿ ಅಂತ ಕಂಡುಕೊಳ್ಳುವವರು ಕಡಿಮೆ. `ಅಪ್ಪನ ಥರ' ಅನ್ನುವ ಸಾಮ್ಯ ಹೊಳೆಯದೆಯೇ ಅವನಲ್ಲಿನ ಗುಣಗಳನ್ನ ಪಟ್ಟಿ ಮಾಡಿಕೊಂಡು ನನ್ನ ಹುಡುಗ ಹೀಗೆಲ್ಲಾ ಇರಬೇಕು ಅಂದುಕೊಳ್ತಿರುತ್ತಾರೆ.... Continue Reading →

ಇಳಿ ಸಂಜೆಗೆ ಪೂರ್ವ ತಯಾರಿ

ಮುಖದ ಮೇಲೆ ಸುಕ್ಕು. ಕಣ್ಣ ಕೆಳಗೆ ಕಪ್ಪು. ಕೂದಲಲ್ಲಿ ಬೆಳ್ಳಿದಾರ, ಹೊಟ್ಟೆ ಸುತ್ತ ನಿರಿಗೆ. ಅಷ್ಟೇ  ಅಲ್ಲ, ಮನೆ ಮಂದಿ ಮಾತಿಗೆ ಜೊತೆ ಕೂರೋದಿಲ್ಲ. `ಬರೀ ಕಿರಿಪಿರಿ' ಅಂತ ದೂರ ಓಡ್ತಾರೆ. ನನಗಿಂತ ಚಿಕ್ಕವರಿಗೆ ಇಷ್ಟಕ್ಕೂ ನನಗೆ ಏನಾಗಿದೆ? ಇಂಥದೊಂದು ಆತಂಕ ಐವತ್ತರ ಅಂಚಿಂದಲೆ ಶುರುವಾಗಿಬಿಡುತ್ತೆ.  ವಯಸ್ಸಿನ ಜತೆ ಸೌಂದರ್ಯವನ್ನ ತಳಕುಹಾಕಿಕೊಂಡರಂತೂ ಮುಗಿದೇಹೋಯ್ತು. ವಯಸ್ಸಾಗ್ತಿದೆಯೆನ್ನುವ ತಲ್ಲಣ ಬಗೆಹರಿಯುವುದೇ ಇಲ್ಲ. ಏರುತ್ತಿರುವ ವಯಸ್ಸಿನ ಜೊತೆ ಕಾಡುವುದು ಒಂದಕ್ಕೊಂದು ತೀರಾ ವಿರುದ್ಧವಾದ ಸಂಗತಿಗಳು. ಹಿರಿಯರೆಂಬ ಮೇಲರಿಮೆ ಒಂದಾದರೆ, ಚಿಕ್ಕವರಾಗಿ ಉಳಿದಿಲ್ಲ... Continue Reading →

ಕಟ್ಟುಬೀಳುವ ಭಯ

ನೀನಂದ್ರೆ ನಂಗಿಷ್ಟ. ನೀನಿಲ್ಲಾಂದ್ರೆ ನಂಗೆ ಬದುಕೇ ಇಲ್ಲ. ನಿನ್ನಿಂದ್ಲೇ ಹಗಲು, ನಿನ್ನಿಂದ್ಲೇ ರಾತ್ರಿ... ಅಂತೆಲ್ಲಾ ಹಾಡು ಹೇಳೊ ಹುಡುಗ, ಹಗಲೂ ರಾತ್ರಿ ನಿನ್ನ ಜತೆಗೇನೇ ಇರ್ತೀನಿ ಕಣೋ ಅಂದಾಗಿಂದ ದೂರವಾಗತೊಡಗಿದ್ದಾನಲ್ಲ!? - ಹೆಸರು ಬೇಡ, ದೂರದೂರು. ಈ ಥರದ ಪ್ರಶ್ನೆ ಯಾವುದಾದ್ರೂ ಆಪ್ತಸಲಹೆ ಕಾಲಮ್‌ನಲ್ಲಿ ಕಾಣಸಿಕ್ಕೀತು. ಈ ಪ್ರಶ್ನೆ ಓದಿಯೇ ಸುಮಾರು ಜನರಲ್ಲಿ `ಅರ್ರೆ! ಅವನೂ/ ಅವಳೂ ಹಿಂಗೇ ಮಾಡ್ತಾಳಲ್ಲ ' ಅಂತಲೋ, `ನಾನೂ ಹಿಂಗೇ ಅಲ್ವಾ?' ಅಂತಲೋ ಅನ್ನಿಸಲು ಶುರುವಾಗಬಹುದು. ಆಗೋದು ಹಾಗೇನೆ. ಬೇರೆಯವರ ಸಮಸ್ಯೆ... Continue Reading →

ಝೆನ್ ತಿಳಿಗೊಳದ ನುಣುಪು ಕಲ್ಲು

ಹಿರಿಯ ಗೆಳೆಯ ರವೀಂದ್ರನಾಥ್ ಕನ್ನಡಕ್ಕೆ ಹಾಯ್ಕು ಪ್ರಕಾರದ ವಿಶಿಷ್ಟ ಕೊಡುಗೆ ನೀಡಿದವರು. ಅವರ 3ನೇ ಹಾಯ್ಕು ಪುಸ್ತಕ "ಕೊಡೆಯಡಿಯ ಒಂದು ಚಿತ್ರ"ಕ್ಕೆ ಬರೆದ ನನ್ನ ಮುಮ್ಮಾತು ಇದು. ಈ ಬೆಳಕಿನ ಹನಿಳನ್ನು ಓದಿನ ಆಸಕ್ತಿಯುಳ್ಳವರೆಲ್ಲರೂ ಒಮ್ಮೆ ಚಪ್ಪರಿಸಲೇಬೇಕು.... *** "ಹಾಯ್ಕು... ಅದು ಬೀಜದೊಳಗಿನ ಮರಗಳ ಸಾಧ್ಯತೆ." ಬಹುಶಃ ಇಷ್ಟು ಹೇಳಿದರೆ ಹಾಯ್ಕುವಿನ ಓದಿಗೆ ಒಂದು ಬಾಗಿಲು ತೆರೆದಿಟ್ಟಂತಾಗುವುದು. ಆದರೆ ಹಾಯ್ಕು ಕಾವ್ಯ ಗೋಡೆಗಳಿಲ್ಲದ ಬಯಲಿನಂತೆ. ಒಳ ಹೊಕ್ಕಲೊಂದು ನಿರ್ದಿಷ್ಟ ಪ್ರವೇಶ ಬೇಡುವ ಬಯಲದು. ಇದನ್ನು ದಕ್ಕಿಸಿಕೊಳ್ಳಲು ಮಾನಸಿಕ... Continue Reading →

Create a free website or blog at WordPress.com.

Up ↑