ಶ್ರಾವಂತಿ v/s ವಿಜಯ್ ಅರಸ್

ಅವನ ಹರವಾದ ಎದೆ ಮೇಲಿನ ಒಂದು ಬೆಳ್ಳಿಕೂದಲು ಗಾಳಿಗೆ ತೊನೆದಾಡ್ತಿದೆ. ಸೆಖೆಗೋ ಷೋಕಿಗೋ ಮೇಲಿನ ಮೂರು ಬಟನ್‌ಗಳನ್ನು ತೆಗೆದುಕೊಂಡಿದ್ದ. ಮಾಸಲು ನೀಲಿ ಜೀನ್ಸ್, ಅದರ ಮೇಲೆ ಕಪ್ಪು ಇಂಕಿನಿಂದ ಬಿಡಿಸಿದ ಚಿತ್ರಗಳು ಅವನ ಮನಸ್ಥಿತಿಯ ಬಿಂಬದಂತಿವೆ. ಪದೇ ಪದೇ ಜೇಬಿನಿಂದ ಕರ್ಚಿಫ್‌ ತೆಗೆದು ಬೆವರಿಲ್ಲದಿದ್ದರೂ ಕುತ್ತಿಗೆಯನ್ನ ಒರೆಸಿಕೊಳ್ತಾ ಅವನು ಚಡಪಡಿಸ್ತಿದ್ದ. ಹತ್ತು ನಿಮಿಷದಿಂದ ನಿಂತುಕೊಂಡು ಕಾದರೂ ಅವಳು ಬರದೆ ಇದ್ದುದು ಬೇಸರ ತರಿಸಿ ಅವನು ಉಚ್ಚೆ ಹುಯ್ದು ಬಂದ. ಆವಾಗ ಅವನಿಗೆ ತಾನು ಯಾವಾಗಲೂ ’ಬ್ಲಡಿ ಬಗ್ಗರ್ಸ್‌’... Continue Reading →

ನಶೆ ~ ೧

ಕಪ್ಪು ಮೋಡದ ನಡುವೆತುಂಬು ಚಂದಿರ,ಅವನ ತೋಳ ಬಂಧಿಯಾಚೆ ಕೈಚಾಚಿಪ್ರೇಮಿತೋರುತ್ತಾಳೆ,ಅಗೋ,ಆಕಾಶದಲ್ಲಿ ನಮ್ಮ ಬಿಂಬ!

ಗೋಡೆ ಬರಹಗಳು (ಜ್ಞಾನೋದಯ ಸರಣಿ) ~ ೧

ಕನ್ನ ಹಾಕೋದು ಶ್ರೀಮಂತರ ಮನೆಗೇನೆ ರಾಜನಿಗೇನೆ ಶತ್ರುಗಳ ಕಾಟ ಜಾಸ್ತಿ ಚೆಂದದ ಹುಡುಗಿಗೆ ಊರೆಲ್ಲ ಪ್ರೇಮಿಗಳು ಹಣ್ಣು ತುಂಬಿದ ಮರಕ್ಕೇನೆ ಜಾಸ್ತಿ ಕಲ್ಲು ಹೊಡೆಯೋದು... ಹಾಗೇ, ತುಂಬಾ ಕೆಲಸ ಮಾಡೋರದ್ದೆ ತಲೆದಂಡ ಕೇಳೋದು!! ~ ಜ್ಞಾನೋದಯ # 1 "ಪ್ರೀತಿಸೋದು ಅಂದರೆ ಒಬ್ಬರಿಗೊಬ್ಬರನ್ನ ಪೂರ್ತಿ ಕೊಟ್ಟುಕೊಳ್ಳೋದು ಅನ್ನೋದು ಭ್ರಮೆ. ಅದೆಲ್ಲ ಎಷ್ಟು ಸುಳ್ಳು! ಹಾಗೆ ಕೊಟ್ಟುಕೊಂಡ ಮೇಲೂ ಒಂಚೂರು ನಮ್ಮನ್ನ ನಾವಿಟ್ಟುಕೊಳ್ಳಬೇಕಂತೆ. ಉಪ್ಪು ನೀರಲ್ಲಿ ಕರಗುತ್ತೆ ನಿಜ. but ಅದು ಒಂದೋ ಉಪ್ಪು ಅಥವಾ ನೀರು ಆಗಿ... Continue Reading →

ಮತ್ತೆ ಮತ್ತೆ ನೆನಪಾಗುವ ಗೌರಿ ನನಗೇನಾಗಿದ್ದಳು?

ನನ್ನ ಅಮ್ಮನಿಗೆ ಈಗ ಐವತ್ತಾರು ವರ್ಷ. ಕಳೆದ ಕೆಲವು ದಿನಗಳಿಂದ ಬರೆಯಲು ಶುರು ಹಚ್ಚಿದ್ದಾಳೆ. ನನಗೆ ಇದಕ್ಕಿಂತ ಖುಷಿಯ ವಿಷಯ ಉಂಟೆ? ಅಪ್ಪಟ ಮಲೆನಾಡಿಗಳಾದ ಅಮ್ಮ ಒಂದು ಅನುಭವಗಳ ಕಂತೆ. ನನ್ನಲ್ಲಿ ಕೊಂಚವೇನಾದರೂ ಸೂಕ್ಷ್ಮತೆ, ಸಂವೇದನೆಗಳಿದ್ದರೆ ಅದು ಅಮ್ಮನಿಂದಲೇ. ನಾನು ಯಾವತ್ತೂ ಹೇಳಿಕೊಳ್ಳುವಂತೆ, ನಾನು ನೋಡಿದ ಮೊದಲ ಫೆಮಿನಿಸ್ಟ್‌ ನನ್ನಮ್ಮ. ಅವಳ ಒಂದು ಬರಹವನ್ನ  ’ಮಹಿಳಾ ದಿನಾಚರಣೆ’ಯ ಹೊತ್ತಿನಲ್ಲಿ ನಿಮ್ಮೆದುರು ಇಡುವ ಖುಷಿ ನನ್ನದು. ಅಂದ ಹಾಗೆ, ಅಮ್ಮನ ಹೆಸರು ಶೈಲಜಾ ಅಂತ. `ಅಮ್ಮಾ... ಅಮ್ಮಾ... '... Continue Reading →

ಸಿಂಬಿ ಸುತ್ತಿದ ಹಾವು

~ * ~ ಏಳೆಚ್ಚರಗೊಳದೆ ಸಿಂಬಿ ಸುತ್ತಿ ಮಲಗಿದ ಹಾವೆ, ಕುಡಿತದುನ್ಮಾದವೇ ನು ವೀರ್ಯಹನಿ ಯೋನಿ ರಸದಾಹಾರ? ಮಸ್ತು ಜೊಂಪರು ನಿದ್ರೆ ಚೂರು ಕಸಿವಿಸಿಗೆ ಎಚ್ಚರದ ಸುಳಿವು ಸಿಕ್ಕಾಗ ನಿಪ್ಪಲ್ಲು ತುರುಕುವಂತೆ ಮತ್ತೆ ಅಂಗ ಸಂಭೋಗ. ಏಳುವುದಿಲ್ಲ ಕುಂಡಲಿನಿ ಆರೂ ಚಕ್ರದ ಕೀಲು ತುಕ್ಕಿನಲಿ ಸ್ತಬ್ದ. ಸಹಸ್ರಾರ ದಳವೊಣಗಿ ಸುಡುಮಧ್ಯಾಹ್ನದ ಸುಸ್ತು- ನಿದ್ರೆ, ಹಸಿವು, ಮೈಥುನ... ಸಿಂಬಿ ಸುತ್ತಿದ ಹಾವು ಕಡುನಿದ್ರೆಯ ಕುಂಡಲಿನಿ ಹೊತ್ತುಹೊತ್ತಿಗೆ ಉಣಿಸು, ನಿದ್ರೆಯಲೆ ಸಾವು.

ಹೆಣ್ಣಿನ ಲೈಂಗಿಕ ಸ್ವಾತಂತ್ರ‍್ಯ ಹರಣ ಮಾಡಿದ್ದು ’ಕಾಮ ಸೂತ್ರ’ವಾ?

ಮದುವೆಯಾಗಿ ಸುಖವಾಗಿರುವ ಎಲ್ಲರನ್ನು ನಾನು ಗೌರವಿಸುತ್ತ, ಪ್ರೀತಿಯಿಂದ ಹಾರೈಸುತ್ತಲೇ; ಈ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಹಿಂದೊಮ್ಮೆ ಪುರುಷ ಸಮೂಹ ಹೆಣ್ಣಿನ ಸ್ವಾತಂತ್ರ‍್ಯ ಹರಣಕ್ಕೆ ಮುಂದಾಗಿದ್ದು ಹೇಗೆ? ಅದರ ಪರಿಣಾಮ ಈಗೇನಾಗಿದೆ ಎಂದು ನನಗೆ ನಾನೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ನನ್ನ ಕಲಿಕೆಯ ತುಣುಕುಗಳು ಇಲ್ಲಿವೆ...

ಪರಂಪರೆ ಕಂಡ ಮೊದಲ ಪೊಸೆಸ್ಸಿವ್‌ ಗಂಡು

ಮೀಸೆ ಚಿಗುರಿದ್ದ ಶ್ವೇತಕೇತು ಬಹುಶಃ ನಮ್ಮ ಪರಂಪರೆ ಕಂಡ ಮೊದಲ ಪೊಸೆಸ್ಸಿವ್ ಗಂಡು ಇರಬೇಕು. ಅಪ್ಪನ್ನ ತರಾಟೆಗೆ ತಗೊಂಡ. ಅಮ್ಮ ಹಾಗೆ ಹೊರಟೇಬಿಟ್ಟಳಲ್ಲ, ಯಾಕೆ ತಡೀಲಿಲ್ಲ ಅಂದ. ‘ಯಾರಾದರೂ ಕರೆದಾಗ ಅವಳು ಹೋದಳೆಂದರೆ ಅವಳಿಗೂ ಅದು ಇಷ್ಟವೇ ಹುಡುಗಾ. ಇಲ್ಲದಿದ್ದರೆ ಅವಳು ನಿರಾಕರಿಸಬಹುದಿತ್ತು. ಅವಳನ್ನ ಯಾರು ತಾನೆ ಒತ್ತಾಯಪಡಿಸಬಹುದು ಹೇಳು? ಈ ನೆಲದ ರಿವಾಜೇ ಹೀಗೆ’ ಅಂದ ಅಪ್ಪ. ಈ ಎಲ್ಲ ಪೀಠಿಕೆ ಯಾಕೆಂದರೆ.... ಉಳಿದ ವಿಷಯಕ್ಕೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. 

ಸನ್ಯಾಸದ ನಿಜ ರೂಪಕವಾದವಳು, ಜೀವಾ

ಕುಮಾರಾಯನನನ್ನು ಕುಶಾನರು ತಮ್ಮ ರಾಜಪಂಡಿತನನ್ನಾಗಿ ಮಾಡಿಕೊಂಡರು. ಮನೆಗಿಂತ ಹೆಚ್ಚು ವಿಚಾರ ಗೋಷ್ಠಿಗಳಲ್ಲೇ ಕಾಲ ಕಳೆಯುತ್ತಿದ್ದ ಜೀವಾ ಆತನಿಂದ ಆಕರ್ಷಿತಳಾದಳು. ಅದುವರೆಗೂ ಮದುವೆ ಬೇಡವೆಂದು ಹಟ ಹಿಡಿದಿದ್ದ ಹುಡುಗಿ ಈಗ ಮತ್ತೊಂದು ಹಟ ಮುಂದಿಟ್ಟಳು. “ನಾನು ಮದುವೆಯಾಗುವುದಾದರೆ ಅಂತಲ್ಲ, ನಾನು ಖಂಡಿತವಾಗಿಯೂ ಕುಮಾರಾಯನನ್ನು ಮದುವೆಯಾಗ್ತೀನಿ. ನೀವು ಅವರ ಬಳಿ ಪ್ರಸ್ತಾಪವಿಡಬೇಕು”! ಬುದ್ಧಿವಂತಳೂ ವಿನಯಶೀಲಳೂ ಆಗಿದ್ದ ತಂಗಿಯ ಬೇಡಿಕೆ ಅಣ್ಣಂದಿರಿಗೇನೋ ಪ್ರಿಯವೇ ಆಗಿತ್ತು. ಆದರೆ ಬಿಕ್ಖುವಿನಂತೆ ಇರುತ್ತಿದ್ದ ಕುಮಾರಾಯನನನ್ನು ಒಪ್ಪಿಸೋದು ಹೇಗೆ? ಜೀವಾ ತನ್ನ ಲಜ್ಜೆಯ ಪರದೆ ಸರಿಸಿದಳು. ತಾನೇ... Continue Reading →

ಎರಡು ಪದ್ಯಗಳ ನಡುವಿನ ಅಂತರ….

ನೆನ್ನೆ ಒಂದು ಪದ್ಯ ಬರೆದೆ... ~ ಕಲ್ಲು ದೇವರನ್ನೆ ಪ್ರೇಮಿಸಬೇಕು!~ ಬಹಳ ಸರ್ತಿ ಅನ್ನಿಸತ್ತೆ ಕಲ್ಲು ದೇವರನ್ನೆ ಪ್ರೇಮಿಸೋದು ಒಳ್ಳೇದು. ಅಂವ ಮೈ ಮುಟ್ಟೋದಿಲ್ಲ, ಕೂಡು ಬಾರೆಂದು ಕಾಡೋದಿಲ್ಲ. ಅಕ್ಕ, ಮೀರಾ, ಲಲ್ಲಾ, ಆಂಡಾಳ್, ನಾಚ್ಚಿಯಾರ‍್, ಅವ್ವೈಯಾರ‍್ ಜಾಣೆಯರ ಸಾಲು ಹೇಳಿ ಹೋದ ಪಾಠ ಇದೇ ಇರಬೇಕು! - ಅಂತ.... ~ ಬಹಳ ಹಿಂದೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಒಂದು ಪದ್ಯ ಬರೆದಿದ್ದೆ... ~ ಆತ ಸಜೀವ ಗಂಡಸಾಗಿದ್ದ~ ಮಹಾದೇವಿ ಅಕ್ಕ ಆಗಿದ್ದು ಕೈ ಹಿಡಿದವನ ಬಿಟ್ಟು ಕಲ್ಲು... Continue Reading →

ಕ್ರೂರ ಕಣ್ಣುಗಳೆಡೆಗಿನ ತಣ್ಣನೆಯ ನೋಟ!

ಪುಟ್ಟ ‘ಗುಯಿ’ಗೆ ಹಾಡುವುದು ಅಂದರೆ ಇಷ್ಟ. ನರ್ತಿಸೋದು ಕೂಡಾ. ಬರಿ ಹಸ್ತಗಳನ್ನೆ ಬಳಕಿಸುತ್ತ ಚೂರು ಚೂರೆ ಸೊಂಟ ತಿರುಗಿಸುತ್ತ ಕೊರಿಯಾದ ಹಳೆ ಹಾಡುಗಳಿಗೆ ಹೆಜ್ಜೆ ಹಾಕುತ್ತ ಅಂತಃಪುರದ ಉದ್ದಗಲ ಬಣ್ಣ ತುಂಬುತ್ತಿದ್ದಳು. ಅವಳು ರಾಜ ಕುಮಾರಿ. ಹಾಗಂತ ಅವಳಮ್ಮ ರಾಣಿಯೇನಲ್ಲ. ಜೊಸೆಯಾನ್ ವಂಶದ ರಾಜ ಯಂಗ್‌ಯುಂಗ್‌ನ ಹಾದರಕ್ಕೆ ಹುಟ್ಟಿದವಳು. ಜನ್ಮ ಕೊಡುತ್ತಲೇ ಅಮ್ಮ ತೀರಿಕೊಂಡಿದ್ದರಿಂದ ಅಂತಃಪುರದ ಹಿರಿಯ ಹೆಂಗಸರು ಮಗುವನ್ನ ತಂದು ಜೋಪಾನ ಮಾಡಿದ್ದರು, ಮುದ್ದಿನಿಂದ ‘ಗುಯಿ’ ಎಂದು ಕರೆದರು. ಅವಳ ಪೂರ್ತಿ ಹೆಸರು ಹ್ಯುನ್‌ಯು ಗುಯಿ.... Continue Reading →

Blog at WordPress.com.

Up ↑