ಮೊದಲ ಕವಯತ್ರಿಯ ಕೊನೆಯುಸಿರು… ಕೊನೆ ಕವಿತೆ….

  ರಾಜನರಮನೆಯ ಚೆಂದದ ಹೆಣ್ಣುಮಗಳೊಬ್ಬಳು ಗುಲಾಮನ ರೂಪಕ್ಕೆ ಮನಸೋಲುತ್ತಾಳೆ. ಪ್ರೇಮದಲ್ಲಿ ಮುಳುಗುತ್ತಾಳೆ. ಈ ಪ್ರೇಮ ಅವಳನ್ನು ಕವಿಯಾಗಿಸುತ್ತೆ. ಕವಿತೆಗಳಿಂದಲೇ ರಟ್ಟಾಗುವ ಗುಟ್ಟು ಅವಳ ಜೀವಕ್ಕೆ ಮುಳುವಾಗುತ್ತೆ. ಗುಲಾಮನನ್ನು ಹಾಳು ಬಾವಿಗೆ ತಳ್ಳಿಸುವ ಅವಳಣ್ಣ, ತಂಗಿಯ ಎರಡೂ ಕೈಗಳ ನರ ಕತ್ತರಿಸಿ ಹಬೆಕೋಣೆಯಲ್ಲಿ ಕೂಡಿ ಹಾಕುತ್ತಾನೆ. ಸೋರಿದ ರಕ್ತದೊಳಗೆ ಬೆರಳದ್ದಿ ಹಬೆಕೋಣೆಯ ಗೋಡೆಯ ಮೇಲೆ ತನ್ನ ಕೊನೆಯ ಕವಿತೆ ಬರೆಯುತ್ತಾಳೆ ರಾಜಕುಮಾರಿ. ರಕ್ತದ ಮಡುವಿನಲ್ಲೇ ಕೊನೆಯಾಗುತ್ತಾಳೆ.   ಅವಳನ್ನು ಪರ್ಷಿಯನ್ ಕಾವ್ಯ ಜಗತ್ತು ತನ್ನ ಭಾಷೆಯ ಮೊದಲ ಕವಯತ್ರಿ... Continue Reading →

ಮಾಟ ಮಂತ್ರ ಮತ್ತು ನಿಂಬೇಹಣ್ಣು!

ತಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನ ಯಾರು ಹೊಂದಿರ್ತಾರೋ, ತಮ್ಮ ಸೋಲುಗಳ ಹೊಣೆ ಹೊರಲು - ಗೆಲುವಿನ ಜವಾಬ್ದಾರಿ ಹೊರಲು ಯಾರು ನಿರಾಕರಿಸ್ತಾರೋ ಅವರು ಮಾತ್ರವೇ ಹೀಗೆ ಮಾಟಮಂತ್ರಗಳ ಮೊರೆ ಹೋಗ್ತಾರೆ. ಅದು ನನಗೆ ಸ್ಪಷ್ಟವಾಗಿದ್ದು ಅಲ್ಲಿಯೇ.ಅಲ್ಲಿ ಅಂದ್ರೆ.... ಇಲ್ಲಿ ನೋಡಿ....

ಅಮ್ಮನ ಜಿವನ ಶ್ರದ್ಧೆ ಮತ್ತು ಶ್ರಾದ್ಧ

ತಾನು ಸತ್ತಮೇಲೆ ಅಧ್ಯಯನಕ್ಕೆ ಅನುಕೂಲ ಆಗುವಂತೆ ದೇಹ ದಾನಕ್ಕೆ ಬರೆದುಕೊಡಬೇಕನ್ನೋದು ಅಮ್ಮನ ಯಾವತ್ತಿನ ಬಯಕೆ. ಸುಮಾರು ಐದು ವರ್ಷಗಳ ಕೆಳಗೇ ಹಾಗೆ ನಿಶ್ಚೈಸಿಕೊಂಡಿದ್ದಳಾದರೂ ಕಳೆದ ಎರಡು ವರ್ಷಗಳಿಂದ ಅದನ್ನು ಬಲವಾಗಿ ಹಿಡಿದು ಕುಂತಿದ್ದಾಳೆ. ಪ್ರತಿ ಸರ್ತಿ ಹುಷಾರು ತಪ್ಪಿದಾಗ, ಬೀಪಿ ಏರುಪೇರಾದಗೆಲ್ಲ ಅವಳ ಈ ಯೋಚನೆಗೆ ಮತ್ತಷ್ಟು ರೆಕ್ಕೆ ಮೂಡುತ್ತದೆ... ಅಸಲು ಕಥೆ ಇಲ್ಲಿದೆ.....  

ಪದಭೇದಿಯಿಂದ ನರಳುತ್ತಿರುವ ನಿಶ್ಚೇತನಕ್ಕೊಂದು ನಮಸ್ಕಾರ

ನನಗೆ ಬಹಳ ಸರ್ತಿ ಅನ್ನಿಸುತ್ತೆ, ನನ್ನ ಮೈಯೊಳಗಿನ ಜೀವಕೋಶಗಳು ಸದಾ ಜಿಗಿಜಿಗಿದಾಡ್ತಲೇ ಇರ್‍ತವೇನೋ ಅಂತ. ಅವಕ್ಕೆ ಸುಮ್ಮನಿರೋಕೆ ಬರುವುದೇ ಇಲ್ಲವೇನೋ ಅಂತ. ದಾರಿ ಬದಿಯ ಪಾಪ್‌ಕಾರ್ನ್‌ ಮಿಷನ್‌ಗಳನ್ನು ನೋಡುವಾಗೆಲ್ಲ ನನ್ನ ಜೀವಕೋಶಗಳೂ ಹೀಗೇನಾ ಅಂತ ಯೋಚಿಸ್ತೀನಿ. ಜೋಳ ಬೆಂಕಿಯುರಿಗೆ ಹುರಿದು ಹಾರುವಂತೆ ನನ್ನೊಳಗು ಅದ್ಯಾವ ಕಾವಿಗೆ ಹೀಗೆ ಪುಟಿಯುತ್ತದೆಯೋ!?ಗೆಳೆಯ ಅನ್ತಾನೆ, 'ಸುಮ್ಮನಿರುವುದೆ ಸಾಧನೆ' ಅಂತ. ಅದು ನನಗೆ ಸಾಧ್ಯವಾ?~ಕೆಲವು ಸರ್ತಿ ಹೀಗಾಗುತ್ತೆ. ನಾನು ಸುಮ್ಮನಿರದಿದ್ದರೂ ಗದ್ದಲವೇನೂ ಮಾಡ್ತಿರೋದಿಲ್ಲ. ಹಾಗಿದ್ದೂ ಕೆಲವರು ಬಾಯಿಗೆ ಕೋಲು ತುರುಕಲು ಬರುತ್ತಾರೆ. ಲಂಕೇಶರು... Continue Reading →

ನೊಂದ ನಾಯಿಯ ಸಂಕಟ ಮತ್ತು ಅಸಹಾಯಕತೆ

ಕನ್ನಡಿಯಂಥ ಪರದೆಯಾಚೆ ಅವಳು ಕೂತು ಹೇಳಿಕೊಳ್ತಿದ್ದಳು. ಬಹುಶಃ ತನ್ನ ಬದುಕಿನ ಯಾವುದನ್ನೂ ಅವಳು ಹೀಗೆ ಅಂಜುತ್ತ ದಾಖಲಿಸಿರಲಿಲ್ಲವೇನೋ.... ಹೆಣ್ತನದ ಅಭಿಮಾನ, ಹೆಣ್ಣೆಂಬ ಹೆಮ್ಮೆಯ ಪುಟ್ಟ ಹೆಂಗಸು. ತನಗೆ ಅನ್ಯಾಯವಾಗ್ತಿದೆ ಅನ್ನಿಸಿದಾಗ ತಣ್ಣಗೆ ಮನೆ ಬಿಟ್ಟು ಬಂದಿದ್ದವಳು. ಸೊನ್ನೆಯಿಂದ ಬದುಕು ಕಟ್ಟುತ್ತ ಸೊನ್ನೆಯ ಹಿಂದೆ ನಾಲ್ಕಂಕಿಗಳು ಬರುವಷ್ಟು ಬದುಕು ಕಂಡಿದ್ದಳು. ಸತ್ತುಬಿಡುತ್ತೇನೆ ಅಂತ ಎರಡು ಬಾರಿ ಪ್ರಯತ್ನ ಪಟ್ಟಿದ್ದವಳು 'ನಾನು ಬದುಕಲೇಬೇಕು' ಅನ್ನುತ್ತ ಅವಡುಗಚ್ಚುವ ಛಲಗಾತಿಯಾಗಿ ಬದಲಾಗಿದ್ದಳು. ಅವಳು ತಾನು 'ಸೂಳೆ'ಯಾದ ದಿನದ ಕತೆ ಹೇಳುತ್ತೀನಂದಾಗ ಕೇಳಿಸಿಕೊಳ್ಳಲು ನನಗೇ... Continue Reading →

’ಕಬ್ಬಿ’ಗಳ ಹಳ್ಳಿಕಥೆಯು….

ಗೆಳೆಯ ಕಬ್ಬಿನ ತುಂಡುಗಳನ್ನು ತಂದಿದ್ದ. ತಿನ್ನಲು ಅನುಕೂಲವಾಗಲೆಂದು ಸಿಪ್ಪೆಯನ್ನ ತೆಳುವಾಗಿ ಹೆರೆಸಿದ್ದ. ಮನೆಗೊಯ್ದ ನಾನು ಅವುಗಳಲ್ಲೊಂದು ತುಂಡು ಎತ್ತಿಕೊಂಡೆ.ಹಳ್ಳಿಯಲ್ಲೆ ಹುಟ್ಟಿ ಬೆಳೆದಿದ್ದರೂ ಹಳ್ಳಿತನ ಬಗೆದರೂ ಸಿಗದ ಮಗನೆದುರು ’ನಮ್ಮ ಕಾಲದ’ ಭಾಷಣ ಬಿಗಿಯುತ್ತ ನೀನೂ ತಿನ್ನು ಅಂತ ಒತ್ತಾಯಪಡಿಸಿದೆ. ಕೈಗೆತ್ತಿಕೊಂಡಿದ್ದೇನೋ ಸರಿ... ಜನವರಿಯಲ್ಲಿ ಚಳಿಗಾಲ, ಕಬ್ಬು ತಿಂದರೆ ತುಟಿ ಒಡೆಯೋದಿಲ್ವಾ? ಅಮ್ಮನ್ನ ಕೇಳಿದ್ದಕ್ಕೆ ’ತಲೆಕಾಯಿ ಬಜ್ಜಿ’ ಅಂದಳು. ಆಮೇಲೆ... ಇಲ್ಲಿ ನೋಡಿ 🙂

ಹಕ್ಕಿ ಹೆಜ್ಜೆಯ ಗುರುತು

ನನ್ನ ಪಾಲಿಗೆ ಈ ವರ್ಷ ಕಲಿಕೆಯ ಅದ್ಭುತ ಅವಕಾಶವಿತ್ತ ವರ್ಷ. ಎಷ್ಟೆಲ್ಲ ಸವಾಲುಗಳು ಸಾಲುಗಟ್ಟಿ ಬಂದಿದ್ದವು! ನನ್ನೆದೆಯೊಳಗಿನ ಹೋಮಾ ಹಕ್ಕಿ, ಉರಿದು ಬಿದ್ದರೂನು ಬೂದಿಯಾಗಲಿಲ್ಲ. ಮಾಯಾಳ ಮಾತು ಕಾಪಿ ಹೊಡೆದೆ. 'ದೂಳ ಕಣವಾಗಿಯಾದರೂನು, ಮೇಲೇಳುತ್ತೇನೆ ನಾನು' ಅಂದೆ. ಹಾಗೇ ಎದ್ದು ಬಂದೆ ಕೂಡಾ. ಹೀಗೆ ವರ್ಷಕ್ಕೊಂದು ಸಾರ್ತಿ ಹೊಸ್ತಿಲ ಮೇಲೆ ನಿಂತುಕೊಂಡು ಒಳಹಣಕಿ ನೋಡೋದೊಂದು ಮಜಾ. ಆಯಾ ಹೊತ್ತಿನಲ್ಲಿ ಖುಷಿಯವು, ದುಃಖದವು ಎನ್ನಿಸಿದ್ದ ಘಟನೆಗಳೆಲ್ಲವನ್ನ ಸಿನೆಮಾದಂತೆ ನೋಡಿ ಒಂದು ನಿರುಮ್ಮಳದ ಉಸಿರು ತಳ್ಳುವುದು ಕೂಡ. ಅದೊಂದು ನೋವಿಗೆ... Continue Reading →

ಎರಡು ಪುಸ್ತಕಗಳು

ಬರೆಯೋದು ದಿನದ ಅನಿವಾರ್ಯವೂ ಹುಟ್ಟಿನೊಂದಿಗೆ ಅಂಟಿಕೊಂಡ ವ್ಯಸನವೂ ಆಗಿರುವಾಗ ಬರಹ ಒಂದು ವೈಶಿಷ್ಟ್ಯ ಅನ್ನಿಸೋದೇ ಇಲ್ಲ. "ನೀವ್ಯಾಕೆ ಬರೀತೀರಿ? ಹೀಗೆ ಹೇಗೆ ಬರೆಯೋಕೆ ಸಾಧ್ಯವಾಗಿದೆ? ಅಕ್ಷರಗಳೇ ಇಲ್ಲದ ಜಗತ್ತಿಗೆ ತಗೊಂಡೋಗಿ ನಿಮ್ಮನ್ನ ಬಿಟ್ರೆ ಏನುಮಾಡ್ತೀರಿ?  ಥಟ್ ಅಂತ ಹೇಳಿ!" ಅಂತ ನಾ.ಸೋಮೇಶ್ವರ ಕೇಳಿದಾಗ ನಿಜ್ಜ ನಂಗೆ ಏನು ಹೇಳೋಕೂ ತೋಚಲೇ ಇಲ್ಲ. ಚೆಂದವೋ ಅಲ್ಲವೋ ಬರೆಯೋದು ನಂಗೆ ಮೀನು ಈಜುವಷ್ಟೇ ಸಹಜ ಸಂಗತಿ. ಅದು ಯಾವತ್ತೂ ನಾನು ಆವಾಹಿಸಿಕೊಂಡ ಹೊರಗಿನ ವಿಷಯವಲ್ಲ. ನನ್ನ ಅಲ್ಪ ತಿಳಿವಳಿಕೆ, ಚೂರುಪಾರು... Continue Reading →

Create a free website or blog at WordPress.com.

Up ↑