ನಾನು ಕಾಯುತ್ತ ನಿಂತು ಬಹಳ ಹೊತ್ತಾಗಿದೆ. ಅಥವಾ ಹಾಗನಿಸ್ತಿದೆ. ನನಗೆ ಯಾರನ್ನೂ ಕಾಯಿಸಿ ಅಭ್ಯಾಸ ಇಲ್ಲ. ಕಾಯುವುದು ಕೂಡ. ಅಂವ ಬರುವ ತನಕ ನನ್ನ ಮಾತುಗಳನ್ನ ಹೇಳಿಕೊಂಡು ರಿಹರ್ಸಲ್ ಮಾಡೋಣ ಅಂದುಕೊಳ್ತೇನೆ. ಪ್ರತಿ ಸರ್ತಿ ಶುರು ಹಚ್ಚಿಕೊಂಡಾಗಲೂ ಗಮನ ಬೇರೆಲ್ಲೋ ಹರಿದು ತುಂಡಾಗಿಬಿಡುತ್ತೆ. ಉದಾಹರಣೆಗೆ ಟ್ರಾನ್ಸ್‌ಫಾರ್ಮರಿನ ಕೆಳಗೆ ಕುಂತ ಹಸು, ದೊಡ್ಡ ಮೋರಿಗೆ ಉಚ್ಚೆ ಹೊಯ್ಯುತ್ತ ನಿಂತ ಪೋಕರಿ, ಕೈ ಮೇಲೆ, ಹೆಗಲ ಮೇಲೆಲ್ಲ ಬೆಲ್ಟುಗಳನ್ನ ನೇತಾಕಿಕೊಂಡು ಕೊಳ್ಳುವಂತೆ ದುಂಬಾಲು ಬೀಳ್ತಿದ್ದ ಮನುಷ್ಯ, ಹೀಗೆ…. ಈ ಎಲ್ಲದರ... Continue Reading →
ಪಾರಿಜಾತದ ಮರ
ನಿಜಘಮದ ಕೇದಗೆ- ಮತ್ತೊಂದು ಎಸಳು ‘ಐರಾವತಿ’ಯಲ್ಲಿ ಮೆಹಂದಿ ನನಗೆ ತುಂಬಾ ಇಷ್ಟ. ಕಪ್ಪು ಚುಕ್ಕಿಚುಕ್ಕಿ ಇರುವ ಎಲೆಗಳನ್ನ ಆಯ್ದು ಕೊಯ್ದು, ಒರಳಲ್ಲಿ ರುಬ್ಬಿ ಕೈಗೆಲ್ಲ ದಪ್ಪಗೆ ಮೆತ್ತಿಕೊಳ್ತಿದ್ದೆವು ಚಿಕ್ಕವರಿದ್ದಾಗ. `ಮೆಹೆಂದಿ ಗಿಡ ಮನೆ ಬಿಡಿಸತ್ತೆ..’ ಯಾರೋ ಹೇಳಿದ್ದರು. ನಿಂಬೆ ಗಿಡ ನೆಟ್ಟಾಗಲೂ ಹಾಗೇ ಹೇಳಿದ್ದರಿಂದ ತಲೆಕೆಡಿಸ್ಕೊಳ್ಳಲಿಲ್ಲ. ~ ನನ್ನ ಮುದ್ದು ಹೂಗಳ ಘಮ ಮೀರಿಸುವ ಹಾಗೆ ಪಕ್ಕದ ಟೆರೇಸಿಂದ ಸಿಗರೇಟು ಹೊಗೆ. ಹಿಂದಿಯಿಂದ ಕಡ ತಂದ ವಿಲನ್ನಿನಂತಿದ್ದ ಆ ಮನುಷ್ಯ. ನಮ್ಮ ರೂಮ್ ಕಿಟಕಿ ಹೊಕ್ಕುವ ಹಾಗೆ... Continue Reading →
ತಳವಿಲ್ಲದಾಳದಲ್ಲಿ ಮುಳುಗುತ್ತಿದ್ದೇವೆ, ಒಬ್ಬರದೊಬ್ಬರ ಕಣ್ಣುಗಳಲ್ಲಿ…
ನಿಜಘಮದ ಕೇದಗೆ ~ 5 ಇಲ್ಲಿದೆ.... ‘ನೀನೊಬ್ಬಳು ಪುರಾತನ ಹುಡುಗಿ..’ ಅವನ ತಳವಿಲ್ಲದಾಳದ ಕಣ್ಣಲ್ಲಿ ನನ್ನ ಬಿಂಬ. ಅಲ್ಲಿ ದಾಖಲಾದ ಖುಷಿಗೆ ಮಿತಿಯಾದರೂ ಎಲ್ಲಿ? ಮುಸ್ಸಂಜೆಯಂಥವನು. ಅಲ್ಲಿ ಹಗಲಿನದೂ ಇರುಳಿನದೂ ಸಮಬೆರಕೆ. ಅವನಲ್ಲಿ ಬೆಳಕಿನ ನೆನಪೂ ಕತ್ತಲಿನ ಎಚ್ಚರವೂ ಇವೆ. ಆ ಹೊತ್ತು, ಆಕಾಶ ಒಂಥರಾ ನೀಲಿಗಪ್ಪು ಇರುತ್ತದಲ್ಲ, ಆಗ ನೋಡುತ್ತ ಕೂರಬೇಕು. ಅಲ್ಲಿ ಕಾಣುತ್ತೆ ಅಗಾಧ ಕ್ಯಾನ್ವಾಸಿನ ತುಂಬ ಅಂವ ಬರೆವ ನನ್ನ ಚಿತ್ರಗಳು. ~ ನಾ ಹೀಗೆ ಆಕಾಶ ನೋಡುತ್ತ ಕುಂತಾಗ ಅಮ್ಮ ಹತ್ತು... Continue Reading →
ನಿಂತಿದ್ದೂ ಓಡೋದು ಹೇಗೆ?
’ನಿಜ ಘಮದ ಕೇದಗೆ’ಯ ಮತ್ತೊಂದು ಎಸಳು ಇಲ್ಲಿದೆ,ಕ್ಲಿಕ್ ಮಾಡಿ.... "ನಿಂತಿದ್ದೂ ಓಡುತ್ತಿದ್ದರೆ ಅದು ಒಳ್ಳೆಯದು. ಓಡುತ್ತಲೂ ನಿಂತೇ ಇದ್ದರೆ…?" "ದೂರದೂರಿನ ಆ ಅತ್ತೆ ಪಟ್ಟಣದ ರೇಡಿಯೋಗೂ ಹೋದಳು. ಕಂಠ ಚೆಂದವಿತ್ತು. ಮೆಟ್ಟಿಲು ಹೆಂಗಸರು ‘ಸೊಂಟ ಸಣ್ಣದಿದೆ‘ ಅಂದು ನಗಾಡಿದರು." "ಅವಳಿಗೆ ಸಂಗೀತವೇ ಬೇಕಿತ್ತು....ಗಂಡನ ಕಾಲಿಗೆ ಬಿದ್ದುಎದ್ದಳು. ಆಮೇಲೆ ಯಾವತ್ತೂ ಬೀಳಲಿಲ್ಲ; ಎಲ್ಲೂಕೂಡ…" "ಹುಲ್ಲಿನ ಆಸೆ ಬಿಟ್ಟರೇನೆ ಕಟ್ಟಿದ ಗೂಟ ಕಳಚಿ ಕೊಳ್ಳೋದು." ಈ ಪೂರ್ತಿ ಲೇಖನ ಎಂದಿನಂತೆ ಇಲ್ಲಿದೆ....
ಪ್ರೀತಿ ಮಾತ್ರ ದೇವರ ಥರ ಮಾಡಬೇಕಾ?
ಪೂರ್ತಿ ಬರಹ ಇಲ್ಲಿದೆ... “ಪ್ರೇಮ ದೈವಿಕವಾಗಿ ಇರಬೇಕಿಲ್ಲ ಮಾನವೀಯವಾಗಿದ್ದರೆ ಸಾಕು” ನನ್ನ ನೇರ ಮಾತು ಅವಂಗೆ ಹಿಡಿಸಿರಲಿಕ್ಕಿಲ್ಲ. ಕಡಿದುಕೊಳ್ಳುವುದರಲ್ಲೇ ಪ್ರೇಮದ ಸಾಚಾತನ ಅಡಗಿದೆ ಅಂತ ಡಿಸೈಡ್ ಮಾಡಿಕೊಂಡಿದ್ದ ಹಾಗಿತ್ತು ಅಂವ. ~ ಉಳಿದೆಲ್ಲಾ ಥರ ಮನುಷ್ಯರಾಗಿರೋ ನಾವು ಪ್ರೀತಿ ಮಾತ್ರ ದೇವರ ಥರ ಮಾಡಬೇಕಾ? ಎಂಥದದು ದೈವಿಕತೆ? ನನಗೆ ಗೊತ್ತಾಗಲಿಲ್ಲ. ಬಹುಶಃ ವಿಫಲ ಪ್ರೇಮಕ್ಕೆಲ್ಲಾ ಅದೊಂದು ಟ್ಯಾಗ್ ಕಟ್ಟಿರಬಹುದು, ಸಮಾಧಾನ ಪಡೆಯಲಿಕ್ಕೆ. ~ ಪ್ರೂಫ್ ನೋಡುವ ಕೆಲಸದ ನಾನು ಬದುಕಲ್ಲೂ ಬರಿ ತಪ್ಪುಗಳನ್ನೇ ಹುಡುಕ್ತಿದೀನಾ?... Continue Reading →
