ಪದಭೇದಿಯಿಂದ ನರಳುತ್ತಿರುವ ನಿಶ್ಚೇತನಕ್ಕೊಂದು ನಮಸ್ಕಾರ

ನನಗೆ ಬಹಳ ಸರ್ತಿ ಅನ್ನಿಸುತ್ತೆ, ನನ್ನ ಮೈಯೊಳಗಿನ ಜೀವಕೋಶಗಳು ಸದಾ ಜಿಗಿಜಿಗಿದಾಡ್ತಲೇ ಇರ್‍ತವೇನೋ ಅಂತ. ಅವಕ್ಕೆ ಸುಮ್ಮನಿರೋಕೆ ಬರುವುದೇ ಇಲ್ಲವೇನೋ ಅಂತ. ದಾರಿ ಬದಿಯ ಪಾಪ್‌ಕಾರ್ನ್‌ ಮಿಷನ್‌ಗಳನ್ನು ನೋಡುವಾಗೆಲ್ಲ ನನ್ನ ಜೀವಕೋಶಗಳೂ ಹೀಗೇನಾ ಅಂತ ಯೋಚಿಸ್ತೀನಿ. ಜೋಳ ಬೆಂಕಿಯುರಿಗೆ ಹುರಿದು ಹಾರುವಂತೆ ನನ್ನೊಳಗು ಅದ್ಯಾವ ಕಾವಿಗೆ ಹೀಗೆ ಪುಟಿಯುತ್ತದೆಯೋ!?ಗೆಳೆಯ ಅನ್ತಾನೆ, 'ಸುಮ್ಮನಿರುವುದೆ ಸಾಧನೆ' ಅಂತ. ಅದು ನನಗೆ ಸಾಧ್ಯವಾ?~ಕೆಲವು ಸರ್ತಿ ಹೀಗಾಗುತ್ತೆ. ನಾನು ಸುಮ್ಮನಿರದಿದ್ದರೂ ಗದ್ದಲವೇನೂ ಮಾಡ್ತಿರೋದಿಲ್ಲ. ಹಾಗಿದ್ದೂ ಕೆಲವರು ಬಾಯಿಗೆ ಕೋಲು ತುರುಕಲು ಬರುತ್ತಾರೆ. ಲಂಕೇಶರು... Continue Reading →

ಎರಡು ಪುಸ್ತಕಗಳು

ಬರೆಯೋದು ದಿನದ ಅನಿವಾರ್ಯವೂ ಹುಟ್ಟಿನೊಂದಿಗೆ ಅಂಟಿಕೊಂಡ ವ್ಯಸನವೂ ಆಗಿರುವಾಗ ಬರಹ ಒಂದು ವೈಶಿಷ್ಟ್ಯ ಅನ್ನಿಸೋದೇ ಇಲ್ಲ. "ನೀವ್ಯಾಕೆ ಬರೀತೀರಿ? ಹೀಗೆ ಹೇಗೆ ಬರೆಯೋಕೆ ಸಾಧ್ಯವಾಗಿದೆ? ಅಕ್ಷರಗಳೇ ಇಲ್ಲದ ಜಗತ್ತಿಗೆ ತಗೊಂಡೋಗಿ ನಿಮ್ಮನ್ನ ಬಿಟ್ರೆ ಏನುಮಾಡ್ತೀರಿ?  ಥಟ್ ಅಂತ ಹೇಳಿ!" ಅಂತ ನಾ.ಸೋಮೇಶ್ವರ ಕೇಳಿದಾಗ ನಿಜ್ಜ ನಂಗೆ ಏನು ಹೇಳೋಕೂ ತೋಚಲೇ ಇಲ್ಲ. ಚೆಂದವೋ ಅಲ್ಲವೋ ಬರೆಯೋದು ನಂಗೆ ಮೀನು ಈಜುವಷ್ಟೇ ಸಹಜ ಸಂಗತಿ. ಅದು ಯಾವತ್ತೂ ನಾನು ಆವಾಹಿಸಿಕೊಂಡ ಹೊರಗಿನ ವಿಷಯವಲ್ಲ. ನನ್ನ ಅಲ್ಪ ತಿಳಿವಳಿಕೆ, ಚೂರುಪಾರು... Continue Reading →

ಅಗಸ್ಟ್ 15 ~ಸ್ವಾತಂತ್ರ್ಯದೊಂದಿಗೇ ನಾನು ಹುಟ್ಟಿದವಳು!

... ಮತ್ತು ಆ ದಿನ ನಾನು ಹುಟ್ಟಿಕೊಂಡೆ. ಹೊಕ್ಕುಳ ಬಳ್ಳಿ ಕತ್ತರಿಸಿ ಬೀಳುತ್ತಲೇ ನಾನು ಸ್ವತಂತ್ರಳಾಗಿದ್ದೆ. ಕುಗ್ಗಿಸಲು ಬಂದ ಕಷ್ಟಗಳೆದುರು ಅಗಾಧ ಬೆಳೆದುಕೊಂಡೆ. ಕಟ್ಟಲು ಬಂದ ಖುಷಿಗಳೆದುರು ವಿನಯದಿಂದ ಹಿಡಿಯಾದೆ. ನೆನ್ನೆಯ ಅಂಟು, ನಾಳಿನ ನಂಟುಗಳೆಲ್ಲ ವಿಧಿಗೆ ಗುಲಾಮರನ್ನಾಗಿಸುತ್ತವೆ ನಮ್ಮನ್ನು. ಈ ಕ್ಷಣದ ಹೆಜ್ಜೆಯಷ್ಟೆ ನನ್ನದು. ನನ್ನದು ಪ್ರತಿ ಕ್ಷಣದ ಬದುಕು. ನಾನು ಹುಟ್ಟಿಂದಲೂ ಸ್ವತಂತ್ರಳು... ಸ್ವತಂತ್ರಳಾಗೇ ಇರುವೆ... ನಾನಾದರೂ ಏನು ಮಾಡಲಿ, ಸ್ವಾತಂತ್ರ್ಯನನ್ನ ಹುಟ್ಟಿಗೇ ಬೆಸೆದುಕೊಂಡುಬಿಟ್ಟಿದೆ!

ಜಮ್ಮು, ಕಾಶ್ಮೀರ ಮತ್ತು ಲಡಾಖ್ ~ 3

ರಾತ್ರಿಯಲ್ಲೂ ಸೂರ್ಯ! ಏರ್‌ಪೋರ್ಟಿಂದ ಹೊರಬಂದು ನಿಂತ ನಮಗೆ ಮುಂದೆ ಎಲ್ಲಿಗೆ ಹೋಗೋದು ಅನ್ನುವ ನಿಕ್ಕಿ ಇರಲಿಲ್ಲ. ಓಡಾಟದ ಮಾಧ್ಯಮ ಯಾವುದು ಅನ್ನೋದೂ ಗೊತ್ತಿರಲಿಲ್ಲ. ಅಣ್ಣನಿಗೆ ಸೂಚನೆ ಇದ್ದಂತೆ `ವೈಷ್ಣೋಧಾಮ್'ಗೆ ಹೋಗೋದು ಅಂದುಕೊಂಡೆವು. ನಮ್ಮೆಲ್ಲರ ಪುಣ್ಯಕ್ಕೆ (ಅಥವಾ ಕರ್ಮಕ್ಕೆ) ನಮ್ಯಾರ ಸೆಲ್‌ಗಳೂ ಅಲ್ಲಿ ಕೆಲಸ ಮಾಡ್ತಿರಲಿಲ್ಲ. ಹೌದು... ಸೆಕ್ಯುರಿಟಿ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹೊರಗಿನ ಪ್ರಿಪೇಯ್ಡ್ ಸಿಮ್‌ಗಳಿಗೆ ನಿರ್ಬಂಧವಿದೆ. ಸುಮ್ಮನೆ ಬಿಸಿಲಲ್ಲಿ ಬೇಯುತ್ತ ನಿಂತಿದ್ದ ನಮ್ಮ ಕಣ್ಣಿಗೆ ಹೊಟ್ಟೆ ಬಿರಿಯುವಂತೆ ಜನರನ್ನ ತುಂಬಿಕೊಂಡು ಓಡಾಡುವ `ಮಿನಿಬಸ್'ಗಳು... Continue Reading →

ಜಮ್ಮು, ಕಾಶ್ಮೀರ ಮತ್ತು ಲಡಾಖ್

ಇದು ನಮ್ಮ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರವಾಸದ ಕಥನ. ಹದಿನೆಂಟು ದಿನಗಳ ಈ ಪ್ರವಾಸ ಒಂದು ದಿವ್ಯಾನುಭೂತಿಯೇ ಆಗಿತ್ತು. ಈ ಕಥನದ ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್‌ ಮಾಡಿ... ೨. ಸೆಖೆಯ ಸ್ವಾಗತ ಹಾಗೆ ನಾವು ಒಟ್ಟು ಆರು ಜನ ಹೊರಟೆವಲ್ಲ, ಈ ಪ್ರವಾಸದ ಹಿಂದೆ ನಮ್ಮೆಲ್ಲರಿಗೂ ನಮ್ಮದೇ ಆಸಕ್ತಿ- ಕಾರಣಗಳಿದ್ದವು. ಯೋಗೀಶ್‌ ಮತ್ತು ಸಚಿನ್‌ ಶತಾಯ ಗತಾಯ ಅಮರನಾಥಕ್ಕೆ ಹೋಗಿಯೇ ಬರುವುದು ಅಂತ ನಿರ್ಧರಿಸಿಕೊಂಡಿದ್ದರು. ಅವರ ಪೂರ್ತಿ ಗಮನ ಅದರತ್ತಲೇ ಇತ್ತು. ಅನೂಪನಿಗೆ... Continue Reading →

ಹೂವಿನ ಕಣಿವೆಗೆ ಮುಳ್ಳಿನ ಹಾದಿ

ಅವಳು ಹೊಕ್ಕುಳ ಹೂವಿಲ್ಲದ ಹುಡುಗಿ. ನಿಜಕ್ಕೂಅವಳಿಗೆ ಹೊಕ್ಕುಳಿಲ್ಲ. ಹಾಗಂದ ಮೇಲೆ ಅವಳು ಹುಟ್ಟಿಬಂದವಳಲ್ಲ. ಅವಳು ಇರುವವಳು. ಯಾವತ್ತಿಗೂ... ಅವಳು ಕನಸಿಂದ ಧಿಗ್ಗನೆ ಎದ್ದುಬಂದಳು. ಉಷ್ಣ ಇದೆ ಎಂದಾದರೆ ಅಲ್ಲಿ ಜ್ವಾಲೆ ಹೊತ್ತಿಕೊಂಡಿರಲೇಬೇಕು ತಾನೆ? ತಾನು 'ಉಷ್ಣ' ಇದ್ದೀನಿ. ಎಲ್ಲಿ ನನ್ನ ಜ್ವಾಲೆ? ಕನಸುಗಳಲ್ಲಿ ತಬ್ಬಿಹಿಡಿಯುವ ಆ ಗಂಡು ಬೆಂಕಿ...? ಎನ್ನುತ್ತ ಅಲೆಮಾರಿಯಾದಳು. ಕೊನೆಗೂ ಅವಳಿಗೆ ಆ ಬೆಂಕಿ ಸಿಕ್ಕಿದ್ದು ಹಿಮಬೆಟ್ಟದ ಮೇಲೆ, ಲೂಟಿಕೋರರ ನಾಯಕನ ಕಣ್ಣುಗಳಲ್ಲಿ. ಅವನ ಹೆಸರೂ ಅದೇನೇ- ಹಿಂದಿಯಲ್ಲಿ, ಜಲನ್! ಜಲನ್ ಮತ್ತವನ ತಂಡದ... Continue Reading →

ಅವನ ಕಣ್ಣಲ್ಲಿ ನಗುವಿದೆ, ನನ್ನ ಕಾಲಲ್ಲಿ ಕಣ್ಣಿದೆ…

ನನ್ನ ಇತ್ತೀಚಿನ ಬರಹದ ಲಿಂಕ್ ಇಲ್ಲಿದೆ, ಐರಾವತಿ ಬ್ಲಾಗಿನಲ್ಲಿ.ನಿಮ್ಗೆ ಓದಿ ಅಂತ ರಿಕ್ವೆಸ್ಟ್ ಮಾಡ್ಕೊಳ್ಳೊದು ಯಾಕೆ ಗೊತ್ತಾ? ನಿಮ್ಮಗಳ ಪ್ರತಿಕ್ರಿಯೆಯಿಂದ ಮತ್ತಷ್ಟೊ ತಿದ್ದಿಕೊಳ್ಬಹುದು, ಬರಹದಲ್ಲಿ ಸುಧಾರಣೆ ಮಾಡ್ಕೊಳ್ಬಹುದು ಅಂತ. ನೀವ್ಯಾರೂ ಕ್ರಿಟಿಸೈಸ್ ಮಾಡೋದೇ ಇಲ್ಲ 😦 

ಸೌಹಾರ್ದ ಪ್ರಿಯರು ಹೀಗಂತಾರೆ…

*ಕಳೆದ ಅಲ್ಲ, ಅದರ ಹಿಂದಿನ ಫೆಬ್ರವರಿಯಲ್ಲಿ ಪತ್ರಿಕೆಯೊಂದರಲ್ಲಿ ಏನೋ ಬಂದು, ಜನ ಟಯರ್ ಸುಟ್ಟು, ಎರಡು ಸಾವು (ಅವರ ಮೇಲೆ ಶಾಂತಿ ಇರಲಿ) ಸಂಭವಿಸಿತ್ತು. ನಮ್ಮ ಸೌಹಾರ್ದಪ್ರಿಯರು 'ಹಂಗಾ ಬರೆಯೋದು? ಭಾಷೆ ಬಳಕೆ ಮೇಲಾದ್ರೂ ನಿಗಾ ಬೇಡವಾ? ಏನೆ ಆಗಲಿ ಮತ್ತೊಂದು ಧರ್ಮದ ಮುಖಂಡ ಅವರು. ಹಾಗೆಲ್ಲ ಭಾವನೆಗೆ ಧಕ್ಕೆ ಮಾಡೋದು ಎಂಥ ವಿಕೃತಿ ಅಂದಿದ್ದರು. * ಈಗ ಹಿಂಗಾಗಿದೆ. ಇಲ್ಲೊಬ್ಬರು ಒಂದಷ್ಟು ಜನರಿಗೆ ನೋವಾಗುವಂಥ ಧಾಟಿಯಲ್ಲಿ ಬರೆದಿದಾರೆ. ಅದೇ ಸೌಹಾರ್ದಪ್ರಿಯರು ಮಾತಿನ ಮೂಲಕ, ಧರಣಿಯ ಮೂಲಕ... Continue Reading →

ಬದುಕು, ಆಯ್ಕೆ,ಇತ್ಯಾದಿ….

ಇದು ನಾನೇ ಆಯ್ದುಕೊಂಡ ಬದುಕು. ಹೆಂಗಿದ್ರೂ ನಂಗಿಷ್ಟಾನೇ. ನನ್ನ ಈ ಧೋರಣೆ ಬಹಳಷ್ಟು ಜನಕ್ಕೆ ಇಷ್ಟವಾಗಲಿಕ್ಕಿಲ್ಲ... - ಅಂತ ಶುರುವಾಗಿ, ಅವಂಗೆ ಹೇಳಬೇಕು; ‘ಸಂಗಾತಿಯ ವಿಷಯದಲ್ಲಿ ‘ಆಯ್ಕೆ’ಯನ್ನ ಓಪನ್ ಆಗಿ ಇಟ್ಕೊಳೋಕೆ ಆಗೋದಿಲ್ಲ. ಬೇರೆ ಸಾಧ್ಯತೆಗಳಿಂದ ವಂಚಿತರಾದ್ರೂ ಸರಿಯೇ, ಒಬ್ಬರಿಗೇ ಸೀಮಿತರಾಗೋದು ಹಿತ’ ಅಂತ! - ಹೀಗೆ ಮುಗಿಯೋ  ‘ನಿಜಘಮದ ಕೇದಗೆ’ , ಐರಾವತಿ ಬ್ಲಾಗ್ ನಲ್ಲಿದೆ.

Blog at WordPress.com.

Up ↑