(ಶೀರ್ಷಿಕೆ ಸಾಲು ಜಿಎಸ್ಸೆಸ್ ಅವರು ವಿವೇಕಾನಂದರನ್ನು ಕುರಿತು ಬರೆದ ಪದ್ಯದಿಂದ ತೆಗೆದುಕೊಂಡಿರೋದು...) ನನಗೆ ಇಷ್ಟವಾದ ಕೆಲವು ಸ್ವಾಮೀಜಿ ಸೇಯಿಂಗ್ಸ್... ಇವು ಕೆಲವು ಮಾತ್ರ... My ideal, indeed, can be put into a few words, and that is to preach unto mankind their divinity, and how to make it manifest in every movement of life. Religion is the manifestation of the divinity already... Continue Reading →
ಅದನ್ನಲ್ಲಿಯೇ ಬಿಟ್ಟು… am sorry
ಸುಮಾ, ರಾಜೇಶ್, ಶ್ರೀ(and again, ಯಾವ ಶ್ರೀ ಗೊತ್ತಾಗ್ತಿಲ್ಲ), ಗುರು ಮತ್ತು ಕಿರಣ್... sorry. ನಾನು ನನ್ನ ‘ಸುಳ್ಳಾದಳು...’ಗೆ ಕಮೆಂಟ್ ಆಪ್ಶನ್ ಇಡದೆ ಇದ್ದುದೇ ಅದನ್ನೊಂದು ನಿರರ್ಥಕ ಇಶ್ಯೂ ಮಾಡೋದು ಬೇಡವಂತ. ಆದರೂ ನೀವು ಬೇರೆ ಸ್ಪೇಸಿನಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಅದನ್ನು ನಾನು ಅಪ್ರೂವ್ ಮಾಡುವುದಿಲ್ಲ. ಕ್ಷಮಿಸಿ. ನನಗೆ ಸಂಭಾಳಿಸಲಿಕ್ಕೆ ಹಳೇಹಪ್ಪಟ್ಟು ಭೂತವೊಂದು ಹಾಗೇ ಹೆಗಲ ಮೇಲಿದೆ. ಈ ನೆನ್ನೆ ಮೊನ್ನೆಗಳ ಬೇಸರದ ಹೆಣಗಳನ್ನು ಮತ್ತಷ್ಟು ಹೊರಲಾರೆ. ಅದನ್ನಲ್ಲಿಯೇ ಬಿಟ್ಟು..... ಪ್ರೀತಿಯಿಂದ, ಚೇತನಾ
ಮತ್ತೆ ಮತ್ತೆ ಕಲರವ!
ನಮಸ್ತೆ ಕನ್ನಡ ಬ್ಲಾಗೊದುಗರಿಗೆಲ್ಲ ಸುಪ್ರೀತ್ ಕೆ.ಎಸ್. ಎನ್ನುವ ಹುಡುಗ ಗೊತ್ತಿರಲಿಕ್ಕೆ ಬೇಕು. ಈತನ ಸಾರಥ್ಯದಲ್ಲಿ ಬರುತ್ತಿದ್ದ `ಕಲರವ' ಪತ್ರಿಎ ಬಗ್ಗೆ ಈ ಹಿಂದೆ ಬರೆದಿದ್ದೆ. ಈಗ ಅದು ಕೇವಲ ಅಂತರ್ಜಾಲ ತಾಣದಲ್ಲಿ ಮಾತ್ರ ಲಬ್ಯ ಎಂದು ಹೇಳಲು ವಿಷಾದವು ಕೊನೆಯ ಪಕ್ಷ ಇಲ್ಲಾದರೂ ದೊರೆಯಲಿದೆ ಎಂದು ಹೇಳಲು ಕುಶಿಯು ಆಗುತ್ತಿದೆ. ಸೂಕ್ಷ್ಮ ಒಳನೋಟಗಳ ಈ ಹುಡುಗನ ಹಾಗು ಅವನ ಗೆಳೆಯರ ಈ ಪ್ರಯತ್ನಕ್ಕೆ ಪ್ರೀತಿಯ ಹಾರೈಕೆಗಳನ್ನು ಹೇಳಬೇಕಲ್ಲವೇ? ಹಾಗಾದರೆ ಇಲ್ಲಿ ಬನ್ನಿ... ನಲ್ಮೆ, ಚೇತನ
ನೆರೂದನ ಒಂದು ಕವಿತೆ…
ಪ್ಯಾಬ್ಲೋ ನೆರೂದ... ಬಹಳ ಹಿಂದೆ ನನಗೆ ಇಂಗ್ಲಿಶ್ ಕವಿತೆಗಳ ಗುಚ್ಛ ಸಿಕ್ಕ ಹೊತ್ತಿನಲ್ಲಿ ಈತ ಅದೆಷ್ಟು ಜನಪ್ರಿಯ ಮತ್ತು ಅದೆಷ್ಟು ಮುಖ್ಯ ಅನ್ನುವ ಅರಿವು ಇರಲಿಲ್ಲ. ಆಗೆಲ್ಲ ನನಗೆ ಅನುವಾದ ಮಾಡಿಟ್ಟುಕೊಳ್ಳುವ ಹುಚ್ಚು. ಹಾಗೆಂದೇ ಆ ಪುಸ್ತಕದ ಕೆಲವು ಕವಿತೆಗಳನ್ನ ಅನುವಾದ ಮಾಡುವ ಸಾಹಸಕ್ಕೆ ಕೈಹಾಕಿದೆ. ಅದರಲ್ಲಿ ನನಗೆ ನೆರೂದನ ಕವಿತೆ ಬಹಳ ಬಹಳ ಇಷ್ಟವಾಗಿಬಿಟ್ಟಿತ್ತು. ಮನಸಿಗೆ ತೋಚಿದ ಹಾಗೆ, ನನ್ನ ಖುಷಿಗೆ ಅನುವಾದ ಮಾಡಿಟ್ಟುಕೊಂಡೆ. ಇದು, ಆರೇಳು ವರ್ಷದ ಹಿಂದಿನ ಮಾತಿರಬಹುದು. ಕಳೆದ ವರ್ಷ ಒಂದು... Continue Reading →
ಕಪ್ಪು ಪಟ್ಟಿ- ಪ್ರತಿರೋಧ
ಬ್ಲಾಗ್ಗೆಳತಿ ನೀಲಾಂಜಲದ ಸೌಪರ್ಣಿಕಾ ಬಹಳ ಒಳ್ಳೆಯ ಸಲಹೆ ನೀಡಿದ್ದಾರೆ. ಭಯೋತ್ಪಾದಕರ ಅಟಾಟೋಪ ನಡೆದು ಎರಡು ದಿನಕ್ಕೆಲ್ಲ ಅದನ್ನು ಮರೆತುಬಿಡುವ ನಾವು ನಿರಂತರ ಎಚ್ಚರಿಕೆಯನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ, ಸದಾ ನಮ್ಮ ಜವಾಬ್ದಾರಿಯನ್ನು ನೆನಪಿಟ್ಟುಕೊಳ್ಳಲು ಇದು ಅಗತ್ಯವೂ ಹೌದು. ಸೌಪರ್ಣಿಕಾ ಅವರ ಸಲಹೆ ನನಗಿಷ್ಟವಾಗಿ, ನಾನು ಅದರಂತೆ ಮಾಡಿದ್ದೇನೆ. ನಿಮಗೂ ಹೌದೆನಿಸಿದಲ್ಲಿ, ಮಾಡಲೇನಡ್ಡಿ?
ಎಲ್ರಿಗೂ ಥ್ಯಾಂಕ್ಸ್…
ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ. ಎಲ್ರಿಗೂ ಥ್ಯಾಂಕ್ಸ್... ಈ ಮೇಲಿನ... Continue Reading →
ಭಾಮಿನಿ ಷಟ್ಪದಿ, ಮುನ್ನುಡಿ ಮತ್ತು ಬೆನ್ನುಡಿ…
ನಮಸ್ತೇ ‘ಭಾಮಿನಿ’ ಅಂತೂ ತಯಾರಾಗಿ ನಿಂತಿದ್ದಾಳೆ. ನೀವು ಕೇಳುತ್ತಿದ್ದ ‘ಎಲ್ಲಿ?’, ‘ಯಾವಾಗ?’ಗಳಿಗೂ ಆದಷ್ಟು ಬೇಗ ಉತ್ತರಿಸುವೆ. ಸಧ್ಯಕ್ಕೆ ಭಾಮಿನಿ ಶಟ್ಪದಿಗಾಗಿ ಜೋಗ ಬರೆದ ಮುನ್ನುಡಿ, ನಟರಾಜ್ ಹುಳಿಯಾರ್ ಬರೆದ ಬೆನ್ನುಡಿಗಳನ್ನು ಓದಿಕೊಂಡು, ನಿಮ್ಮ ನಾಲ್ಕು ನಲ್ನುಡಿಗಳನ್ನು ಹಂಚಿಕೊಳ್ಳುವಿರಾ? ನಲ್ಮೆ, ಚೇತನಾ ತೀರ್ಥಹಳ್ಳಿ
