’ನಿಜ ಘಮದ ಕೇದಗೆ’ಯ ಮತ್ತೊಂದು ಎಸಳು ಇಲ್ಲಿದೆ,ಕ್ಲಿಕ್ ಮಾಡಿ.... "ನಿಂತಿದ್ದೂ ಓಡುತ್ತಿದ್ದರೆ ಅದು ಒಳ್ಳೆಯದು. ಓಡುತ್ತಲೂ ನಿಂತೇ ಇದ್ದರೆ…?" "ದೂರದೂರಿನ ಆ ಅತ್ತೆ ಪಟ್ಟಣದ ರೇಡಿಯೋಗೂ ಹೋದಳು. ಕಂಠ ಚೆಂದವಿತ್ತು. ಮೆಟ್ಟಿಲು ಹೆಂಗಸರು ‘ಸೊಂಟ ಸಣ್ಣದಿದೆ‘ ಅಂದು ನಗಾಡಿದರು." "ಅವಳಿಗೆ ಸಂಗೀತವೇ ಬೇಕಿತ್ತು....ಗಂಡನ ಕಾಲಿಗೆ ಬಿದ್ದುಎದ್ದಳು. ಆಮೇಲೆ ಯಾವತ್ತೂ ಬೀಳಲಿಲ್ಲ; ಎಲ್ಲೂಕೂಡ…" "ಹುಲ್ಲಿನ ಆಸೆ ಬಿಟ್ಟರೇನೆ ಕಟ್ಟಿದ ಗೂಟ ಕಳಚಿ ಕೊಳ್ಳೋದು." ಈ ಪೂರ್ತಿ ಲೇಖನ ಎಂದಿನಂತೆ ಇಲ್ಲಿದೆ....
ಮರೆಯಲಾಗದ ಸಾವು, ಓದಿಸಿಕೊಳ್ತಲೇ ಇರುವ ಬರಹ…
ಯಾರೂ ಓದದಿದ್ರೂ ಪರವಾಗಿಲ್ಲ, ನಾನಂತೂ ಬರೀತೀನಿ... ಅಂತ ಅಂದ್ರೆ ಅದು ನಾಲಿಗೆಗಷ್ಟೆ ಸೀಮಿತವಾಗೋ ಮಾತು. ನಿಜ್ಜ ಅಂದ್ರೆ, ಯಾರಾದರೂ ಓದಿದ್ರೆ ಎಷ್ಟು ಚೆಂದ ಅಂತ ನಾವು- ಬರಿಯೋರೆಲ್ರೂ ಅಂದ್ಕೊಳ್ತೀವಿ. ಈ ನಮ್ಮ ಬ್ಲಾಗಲ್ಲಿ ಬ್ಲಾಗ್ ಸ್ಟ್ಯಾಟ್ಸ್ ಇದೆಯಲ್ಲ, ಅದನ್ನ ನಾನು ಆಗೀಗ ಚೆಕ್ ಮಾಡ್ತಿರ್ತೀನಿ. ಯಾವ್ಯಾವ ಪೋಸ್ಟ್‌ಗಳನ್ನ ಓದಿದಾರೆ ನೋಡಣಾ ಅಂತ ಕುತೂಹಲಕ್ಕೆ. ಸುಮಾರು ಎರಡು ವರ್ಷದಿಂದ ದಿನಾ ಅಂದ್ರೆ ದಿನಾಲೂ ಓದಲ್ಪಡುವ ಎರಡು ಬ್ಲಾಗ್ ಪೋಸ್ಟ್‌ಗಳು ‘ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ’ ಅನ್ನೋದು ಮತ್ತು ‘ಬಿಳಿಬಿಳೀ... Continue Reading →
ಪ್ರೀತಿ ಮಾತ್ರ ದೇವರ ಥರ ಮಾಡಬೇಕಾ?
ಪೂರ್ತಿ ಬರಹ ಇಲ್ಲಿದೆ... “ಪ್ರೇಮ ದೈವಿಕವಾಗಿ ಇರಬೇಕಿಲ್ಲ ಮಾನವೀಯವಾಗಿದ್ದರೆ ಸಾಕು” ನನ್ನ ನೇರ ಮಾತು ಅವಂಗೆ ಹಿಡಿಸಿರಲಿಕ್ಕಿಲ್ಲ. ಕಡಿದುಕೊಳ್ಳುವುದರಲ್ಲೇ ಪ್ರೇಮದ ಸಾಚಾತನ ಅಡಗಿದೆ ಅಂತ ಡಿಸೈಡ್ ಮಾಡಿಕೊಂಡಿದ್ದ ಹಾಗಿತ್ತು ಅಂವ. ~ ಉಳಿದೆಲ್ಲಾ ಥರ ಮನುಷ್ಯರಾಗಿರೋ ನಾವು ಪ್ರೀತಿ ಮಾತ್ರ ದೇವರ ಥರ ಮಾಡಬೇಕಾ? ಎಂಥದದು ದೈವಿಕತೆ? ನನಗೆ ಗೊತ್ತಾಗಲಿಲ್ಲ. ಬಹುಶಃ ವಿಫಲ ಪ್ರೇಮಕ್ಕೆಲ್ಲಾ ಅದೊಂದು ಟ್ಯಾಗ್ ಕಟ್ಟಿರಬಹುದು, ಸಮಾಧಾನ ಪಡೆಯಲಿಕ್ಕೆ. ~ ಪ್ರೂಫ್ ನೋಡುವ ಕೆಲಸದ ನಾನು ಬದುಕಲ್ಲೂ ಬರಿ ತಪ್ಪುಗಳನ್ನೇ ಹುಡುಕ್ತಿದೀನಾ?... Continue Reading →
ಡಾರ್ಕ್ ರೂಮಿನ ಧರ್ಮ ಸಂಕಟಗಳು…
................................................. "ಬಿಸಿಲು ಚೂರು…. ಕೊಂಚ ಓರೆ ಮಾಡಿದ ಕಬ್ಬಿಣದ ಜಾಲರಿ ಬಾಗಿಲಿಂದ ಉದ್ದಕೆ ಒಳಬಂದಿದೆ. ಬಾಗಿಲು ಹಾಕಿದ್ದರೆ ಬಿಸಿಲು ಕೇವಲ ಊಹೆ ಮಾತ್ರ. ಹಗಲು ಹೊತ್ತು ಬಿಸಿಲಿರ್ತದೆ ಅನ್ನುವ ಕಾಮನ್ ಸೆನ್ಸ್. ಅಂವ ಸ್ವಲ್ಪವಾದರೂ ಓಪನ್ ಆಗು ಅನ್ನುತಿದ್ದ. ಹೊರಗೆ ಒಳ್ಳೆಯ ಕೆಲವಾದರೂ ಸ್ನೇಹಿತರು ಕಾದಿರುತ್ತಾರೆ ಅನ್ನುವುದೂ ಕಾಮನ್‌ಸೆನ್ಸೇ ಅಲ್ಲ? ನಂಗೆ ಆ ‘ಸ್ವಲ್ಪ’ದ ಪ್ರಮಾಣ ಎಷ್ಟಂತ ಗೊತ್ತಾಗಲಿಲ್ಲ. ಈಗೀಗ ಅಂವ, ಪೂರಾ ಹಾರುಹೊಡೆದು ಕುಂತಿದೀಯ ಅನ್ನುತ್ತಾನೆ." ................................................ "ಬದುಕು ಪ್ರಯಾಣ ಅಲ್ಲವೇನೋ? ದಾರಿಯ ಮೋಹ ನಡಿಗೆಯ... Continue Reading →
ಕತೆಗಳಾ ಮಾರಾಣಿ ಐರಾವತಿ(ಯಲ್ಲಿ ನಾನು)
ಬರಿಯೋದು ಬಿಟ್ಟೇಬಿಟ್ಟಿದ್ದೆ. ಅಂದ್ರೆ- ಪತ್ರಿಕೆಗೆ ಅಲ್ಲದ ಬರಹಗಳನ್ನ... ನನ್ನಿಂದ ಮೊದಲ ಸಾರ್ತಿಗೆ ಕಾಲಮ್ ಕೊಟ್ಟು ಬರೆಸಿದ್ದ ವೆಂಕಟ್ರಮಣ ಗೌಡರು ಮತ್ತೆ ಅವಧಿಯಲ್ಲಿ ಬರೆಸಿದ್ದರು. ಈಗ ಮತ್ತೆ ಐರಾವತಿಯಲ್ಲಿ ನನ್ನ 3rd ಇನ್ನಿಂಗ್ಸ್. ಹುಕ್ಕಿಯಿಂದ ಶುರು ಏನೋ ಮಾಡಿದೀನಿ. ಮುಂದುವರೆಸುವ ಬಗ್ಗೆ ಖಾತ್ರಿ ಇಲ್ಲ. ನೀವು ಓದಿ ಮೆಚ್ಚಿದರೂನು, ಬಯ್ದರೂನು ಖುಷಿಯೇ. ಎರಡರಿಂದಲೂ ನನಗೆ ಲಾಭವೇ. ಸದ್ಯಕ್ಕೆ, ಪುರುಸೊತ್ತಿದ್ದರೆ ಇಲ್ಲಿ ಭೇಟಿ ಕೊಡಿ. ನನ್ನ ಎಲ್ಲ ತರಲೆ ತಿಕ್ಕಲುತನಗಳಿಗೆ ಸ್ಟೇಜ್ ಆಗಿರುವ ಬ್ಲಾಗ್ ಸ್ಪೇಸ್ ಅನ್ನು ನಾನು ಯಾವತ್ತೂ ಪ್ರೀತಿಸ್ತೀನಿ.... Continue Reading →
ಒಂದು ಊ………..ದ್ದ ನೆ ಪದ್ಯ
ಸುಮಾರು ಒಂದೂ ವರೆ ವರ್ಷದ ನಂತರ ಊರಿಗೆ ಹೊರಟಿದೀನಿ. ಪ್ರತಿ ಗ್ಯಾಪಿನಲ್ಲೂ ಮತ್ತಷ್ಟು ದೂರಾಗುವಂಥ ಏನಾದರೂ ನಡೆದಿದ್ದಿದೆ, ಈ ಬಾರಿಯೂ ಹಾಗೇ ಆಗಿದೆ. ಇನ್ನು, ಮುಂದಿನ ಸಾರ್ತಿ ಅನ್ನೋದು ಇರ್ತದೋ ಇಲ್ಲವೋ! ಇರಲಿ, ಊರ ನೆನಪಲ್ಲಿ ಬರೆದಿದ್ದ ಕವಿತೆಯೊಂದು, ಇಲ್ಲೀಗ- ಊರಿಗೆ ಹೊರಟಿರುವ ನೆವದಲ್ಲಿ... ನನ್ನೂರ ತಿರುವುಗಳು ಬಹಳ ದಿನವಾಯ್ತು ಊರಕಡೆ ಕಾಲಿಟ್ಟು ಅಲ್ಲವೇನೋ ತಮ್ಮಾ? ಬರುವೆಯಾ ಹೊಡೆದು ಬರೋಣ ಒಂದು ರೌಂಡು... ಮರೆತುಬಿಟ್ಟಿದೀಯೆ! ದಾರಿ ತೋರುವೆ ನಡಿ, ಬಿಟ್ಟುಬಂದ ಮನೆಯವರೆಗೂ. ಬಸ್ಸಿಳಿದು ಎಡಕ್ಕೆ, ಅಲ್ಲಿಲ್ಲ... Continue Reading →
ತಮ್ಮ ನೆನಪಿಸಿದ ಕಥೆ
ಇದು ನಂಗಿಷ್ಟದ ಕಥೆ. ನೆನ್ನೆ ಒಬ್ಬ ಪ್ರೀತಿಯ ತಮ್ಮ ಇದನ್ನ ನೆನಪಿಸಿದ... ಅವಂಗೂ ಥ್ಯಾಂಕ್ಸ್... ನಂಗೂ ಥ್ಯಾಂಕ್ಸ್ 🙂 ನಡೆಯುತ್ತ ನಡೆಯುತ್ತ ಹಾಗೇ ಅಂಗಾತ ಬಿದ್ದ ರೋಡು ಸುರುಳಿ ಸುತ್ತಿ, ಆಸುಪಾಸಿನ ಅಂಗಡಿಗಳೆಲ್ಲ ಅಡ್ಡಬಿದ್ದು, ಹೆಜ್ಜೆಹೆಜ್ಜೆಗೂ ಹಾದಿ ಮುಗಿದು, ಊರಿಗೂರೇ ಉಂಡೆಯಾಗಿ, ಭೂಮಿ ಬುಗರಿಯಂತೆ ರೊಂಯ್ಯನೆ ತಿರುಗಿ, ಅದರೊಳಗೆ ನಾನೂ ಗಿರ ಗಿರ ಗಿರ ಗಿರ…. ಹಾಗೇ ನಿಂತಿರುವೆ ಡಿವೈಡರಿನ ಮೇಲೆ. ಬಸ್ಸು ಕಾರುಗಳು ಸಾಲುಸಾಲು ಹೊಗೆಯುಗುಳುತ್ತ ಹೋಗುತ್ತಿವೆ. ನನ್ನೊಳಗೆ ಧಗಧಗ ಬೆಂಕಿ! ಅಸಹನೆಯ ಕುದಿ ಉಕ್ಕುತ್ತಿದೆ... Continue Reading →
ಮಜ್ಜ ಮಜದ ನಂಬಿಕೆಗಳು (ಅವತ್ತಿನವು!)
ಸುಮ್ನೇ ಹಿಂಗೆ ನಾನು ಇಷ್ಟೂ ದಿನ ಏನೆಲ್ಲ ಸಾಹಸ ಮಾಡಿಕೊಂಡಿದೇನೆ ಅಂತ ಓ ನನ್ನ ಚೇತನಾ- ಭಾಗ 1 ನ್ನ ನೋಡ್ತಾ ಇದ್ದೆ. ಭಾಗ ಒಂದು ಅಂದರೆ, ನಾನು ಮೊದಲೊಂದಷ್ಟು ದಿನ ಬ್ಲಾಗಿಸಿ ಡಿಲೀಟ್ ಮಾಡಿದ ಪಾರ್ಟು. ಅದರಲ್ಲಿ ಇದು ಸಿಕ್ತು... ಅದೇ ಈ ಕೆಳಗಿನ ‘ಕನ್‌ಫೆಶನ್ನು’! ಬರಕೊಂಡವರು ಮರೆತಿದ್ದರೆ, ಓದಿ ಮಜಾ ತೊಗೊಳ್ಳಲಿ ಅಂತ... "ಈಗ ಅದನ್ನೆಲ್ಲ ನೆನೆಸಿಕೊಂಡ್ರೆ ಮಜಾ ಅನ್ನಿಸತ್ತೆ. ಚಿಕ್ಕಂದಿನ ಮೂಢ ಅನ್ನಲಾಗದ ಆ ಮುಗ್ಧ ನಂಬಿಕೆಗಳು ಈಗ ಅದೆಷ್ಟು ಕ್ಷುಲ್ಲಕವಾಗಿ ಕಂಡು... Continue Reading →
ಮಕ್ಕಳ ಪುಸ್ತಕದ ಒಂದು ಕತೆ ಮತ್ತು ನೀತಿ!
ಒಂದು ಕತೆ ಓದಿದೆ. ಒಬ್ಬ ಇರ್ತಾನೆ. ಅವಂಗೆ ಒಂದು ಸಿಹಿ ತಿಂಡಿ ಇಷ್ಟ. ಅದನ್ನ ಯಾವಾಗಂದ್ರೆ ಆವಾಗ ತಿನ್ನುತಿರುತ್ತಾನೆ. ಅದಕ್ಕೆ ಅವಂಗೆ ಆ ತಿಂಡಿ ಹೆಸರು ವಿಶೇಷಣವಾಗಿ ಅಂಟಿಕೊಂಡುಬಿಡ್ತದೆ. ಅವಂಗೆ ಅದರಿಂದ ಮುಜುಗರವಾದ್ರೂ ತಿನ್ನುವ ಚಪಲ ಮಾತ್ರ ಬಿಟ್‌ಹಾಕೋಕೆ ಆಗೋದಿಲ್ಲ. ಅದ್ಕೆ, ಒಂದು ಟವೆಲನ್ನ ಯಾವಾಗ್ಲೂ ಕುತ್ತಿಗೆಗೆ ಸುತ್ತಿಕೊಂಡಿರ್ತಾನೆ. ಆ ತಿನಿಸು ತಿನ್ನುವಾಗೆಲ್ಲ ಟವೆಲನ್ನ ಚೂರು ಓರೆ ಮಾಡಿಕೊಂಡು, ಅದರ ಮರೆಯಲ್ಲಿ ಮುಕ್ಕುತಿರ್ತಾನೆ. ಒಂದಿನ ಏನಾಗತ್ತೆ, ಅಂವ ಮಾಮೂಲಿ ಸಿಹಿತಿಂಡಿ ಅಂಗಡಿಗೆ ಬರ್ತಾನೆ. ಅಲ್ಲಿ, ಗಾಜಿನ ಕಪಾಟಿನಲ್ಲಿ... Continue Reading →
