ಅಲರಾಮ್ 22 : ಪ್ರಾಣ್ ನೀಳ್ಗತೆ ಅಥವಾ ಕಿರು ಕಾದಂಬರಿ

ಮಾರ್ಚ್- 2003. ದೆಹಲಿಯ ಸ್ಮಶಾನ. ಅದಾ ಇಸ್ತರ್, 95ನೆ ವಯಸ್ಸಿನಲ್ಲಿ ಮರಣ ಹೊಂದಿದ್ದಾರೆ. ಅವರ ಮಗಳು ಅವಳನ್ನು ಮಣ್ಣು ಮಾಡಲು ನಿಂತಿದ್ದಾಳೆ. ಅವಳ ಕೈಯಲ್ಲಿ ಒಂದು ಡೈರಿ, ಆ ಡೈರಿಯನ್ನು ನಾನು ಸತ್ತಮೇಲೆ ಓದಬೇಕು ಎಂದು ಇಸ್ತರ್ ತನ್ನ ಕೊನೆಯದಿನಗಳಲ್ಲಿ ಕೊಟ್ಟಿದ್ದಾರೆ. ಅವಳಿಗೆ ಅದನ್ನು ಓದುವ ಕಾತರವಾಗುತ್ತಿದೆ. ಎಲ್ಲಾ ಕಾರ್ಯಗಳು ಮುಗಿದ ನಂತರ ದೆಹಲಿಯಲ್ಲಿ ಇದ್ದ ತನ್ನ ಮನೆಗೆ ಅವಳು ತೆರಳಿದ್ದಾಳೆ. ಆ ಪುಸ್ತಕವನ್ನು ತೆಗೆಯುತ್ತಾಳೆ. ಬೇರೆಯವರ ಡೈರಿಯನ್ನು ಕದ್ದು ಓದುವುದು ಮೂರ್ಖತನ ಎಂದು ಆ ಡೈರಿಯಲ್ಲಿ... Continue Reading →

ಮತ್ತೆ ಮತ್ತೆ ನೆನಪಾಗುವ ಗೌರಿ ನನಗೇನಾಗಿದ್ದಳು?

ನನ್ನ ಅಮ್ಮನಿಗೆ ಈಗ ಐವತ್ತಾರು ವರ್ಷ. ಕಳೆದ ಕೆಲವು ದಿನಗಳಿಂದ ಬರೆಯಲು ಶುರು ಹಚ್ಚಿದ್ದಾಳೆ. ನನಗೆ ಇದಕ್ಕಿಂತ ಖುಷಿಯ ವಿಷಯ ಉಂಟೆ? ಅಪ್ಪಟ ಮಲೆನಾಡಿಗಳಾದ ಅಮ್ಮ ಒಂದು ಅನುಭವಗಳ ಕಂತೆ. ನನ್ನಲ್ಲಿ ಕೊಂಚವೇನಾದರೂ ಸೂಕ್ಷ್ಮತೆ, ಸಂವೇದನೆಗಳಿದ್ದರೆ ಅದು ಅಮ್ಮನಿಂದಲೇ. ನಾನು ಯಾವತ್ತೂ ಹೇಳಿಕೊಳ್ಳುವಂತೆ, ನಾನು ನೋಡಿದ ಮೊದಲ ಫೆಮಿನಿಸ್ಟ್‌ ನನ್ನಮ್ಮ. ಅವಳ ಒಂದು ಬರಹವನ್ನ  ’ಮಹಿಳಾ ದಿನಾಚರಣೆ’ಯ ಹೊತ್ತಿನಲ್ಲಿ ನಿಮ್ಮೆದುರು ಇಡುವ ಖುಷಿ ನನ್ನದು. ಅಂದ ಹಾಗೆ, ಅಮ್ಮನ ಹೆಸರು ಶೈಲಜಾ ಅಂತ. `ಅಮ್ಮಾ... ಅಮ್ಮಾ... '... Continue Reading →

ಕಥೆಯ ದಿನದಲ್ಲೊಂದು ಬೆಳಗು

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ... ಬಡ್ಕೊಳ್ತಲೇ ಇದೆ ಅಲರಾಮು. ಈ ಹೊಸ ಹ್ಯಾಂಡ್ ಸೆಟ್ ಕೊಂಡಾಗಿಂದ ಇದನ್ನೇ ಅಲರಾಮ್ ಟೋನ್ ಮಾಡ್ಕೊಂಡಿದಾನೆ. ಬೆಳಬೆಳಗಿನ ಸುಪ್ರಭಾತ ಕೇಳುವಾಗೆಲ್ಲ ಅವನಿಗೆ ಐದು ಗಂಟೆಗೆ ಎದ್ದು ಬಾಗಿಲಿಗೆ ನೀರು ಹಾಕ್ತಿದ್ದ ಅಮ್ಮನ ನೆನಪು. ಇತ್ತೀಚೆಗೆ ಅವನು ಅಮ್ಮನ್ನ ನೆನೆಸ್ಕೊಳ್ಳೋದು ಜಾಸ್ತಿಯಾಗಿದೆ. ಅಲಾರಮ್ಮು ಸ್ನೂಜ್ ಮಾಡಿ ಮತ್ತೈದು ನಿಮಿಷ ಹೊರಳಾಡಿದವನು ಏಳಲೇಬೇಕಾದ ಅನಿವಾರ್‍ಯತೆಗೆ ಗೊಣಗುತ್ತಲೇ ಎದ್ದು ಕುಂತ. ಚಳಿಗಾಲ ಬೇರೆ. ತಾನೆದ್ದ ಅದೆಷ್ಟೋ ಹೊತ್ತಿನ ಮೇಲೆ ಕಾಣಿಸ್ಕೊಳ್ತಾನೆ ಸೂರ್ಯ. ಸೂರ್ಯನ... Continue Reading →

ಹೀಗೊಂದು ಆಟದ ಪ್ರಸಂಗ…

  ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ! ನಾರೀ ಮಣಿಯೆ ಬಾರೇ… ಮಣಿಯೆ ಬಾರೇ… ಬಾ ಬಾರೇ… ಛೀ! ಪಾಪಿ!! ಸರಿ ದೂರ… ಬಾ ಬಾರೇ… ಮುಖ ತೋರೇ… ದುರುಳ, ಸರಿ ದೂರ…! ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು, ಪಟ್ಟು, ಕುಣಿತ… ಅಬ್ಬ! ಅವನೆದುರು ಸ್ತ್ರೀ ವೇಷದ ದಾಮೋದರ- ದಾಮೂ ಹುದುಗಿಹೋದಂತಿತ್ತು. ದಾಮೂ ಪೀಚಲು ಹುಡುಗ. ದನಿಯೂ ಕೀರಲು. ಸ್ತ್ರೀ... Continue Reading →

`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….

ಕನ್ನಡದ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋ’ ಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡು- ಹದಿಮೂರು ವರ್ಷಗಳ ನಂತರ ಬಂದು  ವ್ಯಾಜ್ಯ ಹೂಡಿದ್ದನ್ನ ಅವರು ’ಪರಿಸರದ ಕತೆ’ಯಲ್ಲಿ  ಬರೆದುಕೊಂಡಿದ್ದಾರೆ. ಇತ್ತೀಚಿಗೆ ನನ್ನ ಗೆಳೆಯನಿಗೂ ಇಂಥದೇ ಅನುಭವ ಆಯಿತು. ಅಂವ ಬರೆದ ಸಾಮತಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡ ಮಹಾಶಯರೊಬ್ಬರು ’ನನ್ನ ಕತೆ ಯಾಕೆ ಬರೆದೆ? ನಾನೇನೂ ಅಂಥವ ಅಲ್ಲ’... Continue Reading →

Create a free website or blog at WordPress.com.

Up ↑